ಪ್ರತಿ ಮನೆಗೆ ತಿಂಗಳಿಗೆ 200 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ವಿಧಾನಸಭೆ ಚುನಾವಣೆಯ ಮೊದಲು ಕಾಂಗ್ರೆಸ್ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಒಂದಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ. ಸಚಿವ ಸಂಪುಟ ಸಭೆಯ ನಂತರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿದ್ದರಾಮಯ್ಯ, ಜುಲೈ 1 ರಿಂದ ಗೃಹ ಜ್ಯೋತಿ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. 12 ತಿಂಗಳ ಸರಾಸರಿ ವಿದ್ಯುತ್ ಬಳಕೆಗೆ ಶೇ 10 ರಷ್ಟು ಹೆಚ್ಚುವರಿ ಯೂನಿಟ್ ಸೇರಿಸಿ ಯೋಜನೆಯ ಪ್ರಯೋಜನ ಒದಗಿಸಲಾಗವುದು. ಈ ರೀತಿ 200 ಯೂನಿಟ್‌ಗಳವರೆಗಿನ ಬಳಕೆಗೆ ಶುಲ್ಕದ ವಿನಾಯಿತಿ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಗೃಹ ಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಯೋಜನೆಗೆ ಫಲಾನುಭವಿಗಳನ್ನು ಗುರುತಿಸುವುದು ಹೇಗೆಂಬ ಲೆಕ್ಕಾಚಾರ ಇಲ್ಲಿದೆ.
ಈ ಹಿಂದಿನ 12 ತಿಂಗಳ ವಿದ್ಯುತ್ ಬಳಕೆಯ ಯೂನಿಟ್ ಗಳನ್ನು ಒಟ್ಟಾಗಿ ಕೂಡಿಸಿ, ಅದನ್ನು 12 ರಿಂದ ಬಾಗಿಸಿ ಮತ್ತೆ 1.1 ರಿಂದ ಗುಣಿಸಿದಾಗ ಬರುವ ಮೊತ್ತದ ಒಳಗೆ ಈಗಿನ ನಿಮ್ಮ ಉಚಿತ ವಿದ್ಯುತ್ ಬಳಕೆಯ ಯೂನಿಟ್ ಇರತಕ್ಕದ್ದು. ಮತ್ತೆ ಅದು 200 ಯೂನಿಟ್ಗಳನ್ನು ಮೀರಿರಬಾರದು.
ಅರ್ಥ ಆಗಿಲ್ಲ ಅಂದಾದರೆ ಕೆಳಗೆ ಎರಡು ಉದಾಹರಣೆಯನ್ನು ನಮೂದಿಸಲಾಗಿದೆ.
ಉದಾಹರಣೆ 1 : ಸಾಮಾನ್ಯ ಮಧ್ಯಮ ಕುಟುಂಬದ
ತಿಂಗಳು 1 – 180 ಯೂನಿಟ್
ತಿಂಗಳು 2 – 185 ಯೂನಿಟ್
ತಿಂಗಳು 3 – 185 ಯೂನಿಟ್
ತಿಂಗಳು 4 – 180 ಯೂನಿಟ್
ತಿಂಗಳು 5 – 185 ಯೂನಿಟ್
ತಿಂಗಳು 6 – 175 ಯೂನಿಟ್
ತಿಂಗಳು 7 – 180 ಯೂನಿಟ್
ತಿಂಗಳು 8 – 185 ಯೂನಿಟ್
ತಿಂಗಳು 9 – 185 ಯೂನಿಟ್
ತಿಂಗಳು 10 – 178 ಯೂನಿಟ್
ತಿಂಗಳು 11 – 180 ಯೂನಿಟ್
ತಿಂಗಳು 12 – 175 ಯೂನಿಟ್
ಒಟ್ಟು 2173 ಯೂನಿಟ್ಗಳು.
ಸರಾಸರಿ ಅಂದರೆ 2173/12= 181 ಯೂನಿಟ್ಗಳು. 10% ಹೆಚ್ಚವರಿ ಅಂದರೆ 181*1.1= 191 ಯೂನಿಟ್ಗಳು.
ಹೀಗಿದ್ದಲ್ಲಿ ನೀವು 200 ಯೂನಿಟ್ ಉಚಿತ ವಿದ್ಯುತ್ ಬಳಸಲು ಅರ್ಹರು..
ಉದಾಹರಣೆ -2 : ಬಡ ಕುಟುಂಬ
ತಿಂಗಳು 1 – 70 ಯೂನಿಟ್
ತಿಂಗಳು 2 – 80 ಯೂನಿಟ್
ತಿಂಗಳು 3 – 60 ಯೂನಿಟ್
ತಿಂಗಳು 4 – 55 ಯೂನಿಟ್
ತಿಂಗಳು 5 – 65 ಯೂನಿಟ್
ತಿಂಗಳು 6 – 70 ಯೂನಿಟ್
ತಿಂಗಳು 7 – 85 ಯೂನಿಟ್
ತಿಂಗಳು 8 – 55 ಯೂನಿಟ್
ತಿಂಗಳು 9 – 70 ಯೂನಿಟ್
ತಿಂಗಳು 10 – 75 ಯೂನಿಟ್
ತಿಂಗಳು 11 – 80 ಯೂನಿಟ್
ತಿಂಗಳು 12 – 55 ಯೂನಿಟ್
ಒಟ್ಟು 820 ಯೂನಿಟ್ಗಳು.
ಸರಾಸರಿ ಅಂದರೆ 820/12= 68.3 ಯೂನಿಟ್ಗಳು. 10% ಹೆಚ್ಚವರಿ ಅಂದರೆ 68.3*1.1= 75 ಯೂನಿಟ್ಗಳು.
ಹೀಗಿದ್ದಲ್ಲಿ ನೀವು 75 ಯೂನಿಟ್ ಉಚಿತ ವಿದ್ಯುತ್ ಬಳಸಲು ಮಾತ್ರ ಅರ್ಹರು. ನೀವು 200 ಯೂನಿಟ್ ಬಳಸುವಂತಿಲ್ಲ. 75 ಯೂನಿಟ್ ಗಿಂತ ಜಾಸ್ತಿ ಬಳಸಿದ್ದಲ್ಲಿ ಬಿಲ್ ಕಟ್ಟತಕ್ಕದ್ದು…..