ಬೆಳಗಾವಿ: ಕಳೆದ ಕೆಲ ತಿಂಗಳುಗಳಿಂದ ಬಾಕಿ ಇದ್ದ ಗೃಹ ಲಕ್ಷ್ಮೀ ಹಣ ಇಂದು ಅಥವಾ ನಾಳೆ ಖಾತೆಗೆ ಜಮೆ ಆಗಲಿದೆ.
ಈ ಬಗ್ಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದು,ಈಗ ಪೆಂಡಿಂಗ್ ಇರುವ ಹಣ ಜಮೆಯಾಗಲಿದೆ. ಕೆಲವರಿಗೆ ಬಂದಿಲ್ಲ ಎಂದು ದೂರ ಬಂದಿದೆ. ಆದರೆ ಅವರು ಆಧಾರ್ ಕಾರ್ಡ್ ಅಟ್ಯಾಚ್ ಮಾಡಿಲ್ಲ ಎನಿಸುತ್ತದೆ. ಆಧಾರ್ ಅಟ್ಯಾಚ್ ಮಾಡಿದವರಿಗೆ ಖಂಡಿತ ಹಣ ಬರುತ್ತದೆ ಎಂದು ಆಶ್ವಾಸನೆ ನೀಡಿದ್ದಾರೆ.
ಎರಡು ತಿಂಗಳಿನಿಂದ ಹಣ ಬಂದಿಲ್ಲ ಎಂದು ಮೈಸೂರಿನಲ್ಲಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಲಕ್ಷ್ಮೀ ಅವರು ಇನ್ನು ಒಂದು ದಿನದಲ್ಲಿ ಹಣ ಬರಲಿದೆ ಎಂದಿದ್ದಾರೆ.
ಯಾವುದೇ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ. ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲ, ವಿನಾ ಕಾರಣ ಆರೋಪ ಮಾಡುತ್ತಿದ್ದಾರೆ. ಅಧಿಕಾರ ಕೊಟ್ಟಾಗ ನಲವತ್ತು ಪರ್ಸಂಟ್ ಕಮಿಷನ್ ತೆಗೆದುಕೊಂಡು ಮನೆಯಲ್ಲಿ ಕುಳಿತರು ಎಂದು ಟೀಕಿಸಿದರು.
ಎರಡು ಸಾವಿರ ರೂಪಾಯಿ ಕೊಟ್ಟು ನಾಲ್ಕು ಸಾವಿರ ರೂಪಾಯಿ ಕಸಿದುಕೊಳ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಿ, ಬಿಜೆಪಿಯವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇವೆ. ಪೆಟ್ರೋಲ್ ದರ ಏರಿಕೆ ಆಗಿದೆ ಎಂದು ಹೇಳಿದ್ದಾರೆ. ಇದೇ ಬಿಜೆಪಿ ಅಧಿಕಾರದಲ್ಲಿ ಇದ್ದಾಗಲೇ ಪೆಟ್ರೋಲ್ ದರವನ್ನು ನೂರು ರೂಪಾಯಿ ತಗೊಂಡು ಹೋಗಿದ್ದರು. ನಲವತ್ತು ರೂಪಾಯಿ ಪೆಟ್ರೋಲ್ ದರ ಏರಿಸಿದ್ದ ಶ್ರೇಯಸ್ಸು ಪ್ರಧಾನಿ ಮೋದಿಯವರಿಗೆ ಹೋಗುತ್ತದೆ ಎಂದು ಟೀಕಿಸಿದರು.