ಇಂದು ಮಧ್ಯರಾತ್ರಿಯಿಂದಲೇ ಗೃಹಜ್ಯೋತಿ ಯೋಜನೆ ಆರಂಭ : ನೀವು ತಿಳಿಯಬೇಕಾದ ಪ್ರಮುಖ ಮಾಹಿತಿ

ಬೆಂಗಳೂರು : ರಾಜ್ಯ ಸರಕಾರದ ಐದು ಗ್ಯಾರಂಟಿಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆ ಇಂದು ಮಧ್ಯರಾತ್ರಿಯಿಂದಲೇ (ಜು 01ರ ರಾತ್ರಿ 12 ಗಂಟೆ) ಜಾರಿಯಾಗಲಿದೆ.  200 ಯುನಿಟ್‌ ಒಳಗಿನ ಸರಾಸರಿ ಕರೆಂಟ್‌ಗೆ ಬಿಲ್‌ ಕಟ್ಟುವಂತಿಲ್ಲ ಸರ್ಕಾರ ಘೋಷಣೆ ಮಾಡಿದ್ದ ಯೋಜನೆಯ ಜಾರಿಯನ್ನು ಜನ ಎದುರು ನೋಡುತ್ತಿದ್ದಾರೆ.  200 ಯುನಿಟ್ ಉಚಿತ ವಿದ್ಯುತ್​ ಕಲ್ಪಿಸುವ ಗೃಹಜ್ಯೋತಿ ಜಾರಿಗೆ ಕೌಂಟ್​​​ಡೌನ್​ ಶುರುವಾಗಿದೆ.

ರಾಜ್ಯಾದ್ಯಂತ 80 ಲಕ್ಷಕ್ಕೂ ಹೆಚ್ಚು ಗ್ರಾಹಕರು ಈಗಾಗಲೇ ಯೋಜನೆಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಹಾಗದ್ರೆ ಯಾರಿಗೆ ಫ್ರಿ? ಯಾರು ಬಿಲ್ ಕಟ್ಟಬೇಕು​? ಸಂಪೂರ್ಣವಾದ ವಿವರ ಇಲ್ಲಿದೆ.

ಅರ್ಜಿ ನೋಂದಣಿ ಮಾಡಿಕೊಂಡಿರುವವರು ಜುಲೈ 1ರಿಂದಲೇ ಉಚಿತ ವಿದ್ಯುತ್ ಪಡೆಯಬಹುದಾಗಿದೆ. ಆಗಸ್ಟ್ ತಿಂಗಳಿನಲ್ಲಿ ನೀವು ವಿದ್ಯುತ್ ಬಿಲ್ ಕಟ್ಟುವ ಅವಶ್ಯಕತೆ ಇರುವುದಿಲ್ಲ. ಆದರೆ, ಉಚಿತ ವಿದ್ಯುತ್ ಪಡೆಯಲು ಸರ್ಕಾರ ಷರತ್ತುಗಳನ್ನು ವಿಧಿಸಿದ್ದು ಅದಕ್ಕೆ ಅನುಗುಣವಾಗಿ ವಿದ್ಯುತ್ ಬಳಕೆ ಮಾಡಿದರೆ ಮಾತ್ರ ನೀವು ಉಚಿತ ವಿದ್ಯುತ್ ಪಡೆಯಬಹುದು, ಯಾಮಾರಿದರೆ ನೀವು ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ.  ಬರುವ ಕರೆಂಟ್ ಬಿಲ್‌ನಲ್ಲಿ ಶಕ್ತಿ ಯೋಜನೆಯಂತೆ ಗೃಹಜ್ಯೋತಿಯ ಉಚಿತ ಬಿಲ್ ಎಂದು ಹೆಸರು ಬರುವ ಸಾಧ್ಯತೆಗಳಿವೆ.

ಬಾಕಿ ವಿದ್ಯುತ್ ಬಿಲ್ ಕಟ್ಟಬೇಕು : ಇನ್ನು ನೀವು ಉಚಿತ ವಿದ್ಯುತ್ ಪಡೆಯಬೇಕು ಎಂದರೆ ಬಾಕಿ ಇರುವ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಸರ್ಕಾರ ಸೆಪ್ಟೆಂಬರ್ ವರೆಗೆ ಇದಕ್ಕೆ ಸಮಯ ನೀಡಿದ್ದು, ಉಚಿತ್ ವಿದ್ಯುತ್ ಪಡೆಯಲು ಅರ್ಜಿ ಸಲ್ಲಿಸಿದವರು ಬಾಕಿ ಇರುವ ವಿದ್ಯುತ್ ಶುಲ್ಕವನ್ನು ಪಾವತಿ ಮಾಡಬೇಕು. ಇನ್ನು ಒಂದು ತಿಂಗಳು ನೀವು 200 ಯುನಿಟ್‌ಗಿಂದ ಅಥವಾ ನಿಗದಿಪಡಿಸಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದರೆ ಆ ತಿಂಗಳ ವಿದ್ಯುತ್ ಬಿಲ್ ಕಟ್ಟಬೇಕಾಗುತ್ತದೆ. ಮತ್ತು ಮುಂದಿನ ತಿಂಗಳಿನಿಂದ ನೀವು ಸರಾಸರಿಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದರೆ ಉಚಿತ ವಿದ್ಯುತ್ ಸಿಗಲಿದೆ.

ಲೆಕ್ಕಾಚಾರ ಹೇಗೆ?  ಪ್ರತಿ ತಿಂಗಳು 200 ಯೂನಿಟ್ ವಿದ್ಯುತ್ ಉಚಿತ ಎಂದಿದೆ ಎಂದು ನೀವು 200 ಯುನಿಟ್ ವಿದ್ಯುತ್ ಬಳಕೆ ಮಾಡಿದರೆ ನಿಮಗೆ ವಿದ್ಯುತ್ ಬಿಲ್ ಹೊರೆಯಾಗಲಿದೆ. ಕಳೆದ 12 ತಿಂಗಳಿನಲ್ಲಿ ನೀವು ಬಳಕೆ ಮಾಡಿದ ವಿದ್ಯುತ್ ಸರಾಸರಿ ಆಧಾರದ ಮೇಲೆ ನಿಮಗೆ ವಿದ್ಯುತ್ ಸಿಗಲಿದೆ. ಉದಾಹಣರೆಗೆ ಕಳೆದ 12 ತಿಂಗಳಿನಲ್ಲಿ ನೀವು 100 ಯುನಿಟ್ ವಿದ್ಯುತ್ ಬಳಸಿದ್ದರೆ, ನಿಮಗೆ ಈಗ 110 ಯುನಿಟ್‌ವರೆಗೆ ಮಾತ್ರ ಉಚಿತ ವಿದ್ಯುತ್ ಬಳಸಲು ಅವಕಾಶ ಇರುತ್ತದೆ. ಈ ವಿಚಾರದಲ್ಲಿ ಇನ್ನೂ ಸಾಕಷ್ಟು ಗೊಂದಲಗಳಿದ್ದು ವಿದ್ಯುತ್ ಇಲಾಖೆ ಯೋಜನೆಯನ್ನು ಹೇಗೆ ಜಾರಿಗೊಳಿಸಲಿದೆ ಎನ್ನುವುದು ಆಗಸ್ಟ್ ತಿಂಗಳು ಬಿಲ್ ಬಂದ ನಂತರ ಸ್ಪಷ್ಟವಾಗಲಿದೆ.

ಇದನ್ನೂ ಓದಿಗೃಹಜ್ಯೋತಿ ಯೋಜನೆ ಅಡಿ ವಿದ್ಯುತ್ ಬಿಲ್ ಲೆಕ್ಕಾಚಾರ ಹೇಗೆ? ಇಲ್ಲಿದೆ ಸ್ಪಷ್ಟ ಚಿತ್ರಣ

ಗೃಹ ಜ್ಯೋತಿಗೆ ಯಾವ-ಯಾವ ನಿಗಮಕ್ಕೆ ಎಷ್ಟು ಅರ್ಜಿ ಸಲ್ಲಿಕೆ?

ಗೃಹಜ್ಯೋತಿ ಯೋಜನೆಗೆ ರಾಜ್ಯಾದ್ಯಂತ ಒಟ್ಟು 80 ಲಕ್ಷದ 99 ಸಾವಿರದ 932 ಮಂದಿ ನೋಂದಾಯಿಸಿಕೊಂಡಿದ್ದಾರೆ. ಬೆಸ್ಕಾಂನಲ್ಲಿ 31 ಲಕ್ಷ 55ಸಾವಿರದ 367 ಅರ್ಜಿಗಳು ಬಂದಿವೆ. ಸೆಸ್ಕಾಂನಲ್ಲಿ 12 ಲಕ್ಷದ 4 ಸಾವಿರದ 627 ಮಂದಿ ನೋಂದಾಯಿಸಿಕೊಂಡಿದ್ದಾರೆ. ಜೆಸ್ಕಾಂನಲ್ಲೂ 8 ಲಕ್ಷದ 15 ಸಾವಿರದ 968, ಹೆಸ್ಕಾಂನಲ್ಲಿ 15 ಲಕ್ಷದ 99 ಸಾವಿರದ 944 ಮಂದಿ ಫ್ರೀ ಕರೆಂಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ. HRECSನಲ್ಲಿ 36 ಸಾವಿರದ 906 ಮಂದಿ ಹಾಗೂ ಮೆಸ್ಕಾಂನಲ್ಲಿ 9 ಲಕ್ಷದ 7 ಸಾವಿರದ 396 ಮಂದಿ ನೋಂದಾಯಿಸಿಕೊಂಡಿದ್ದಾರೆ. ಇ‌ನ್ನು 1,33 00068 ಕೋಟಿಯಷ್ಟು ಜನ ನೊಂದಾಣಿಗೆ ಅರ್ಜಿ ಹಾಕಬೇಕಿದೆ. ಬಾಡಿಗೆ ಮನೆಯಲ್ಲಿ ಇರುವವರೆಗೂ ಉಚಿತ ವಿದ್ಯುತ್ ಸಿಗಲಿದೆ.

https://sevasindhugs.karnataka.gov.in/ ಈ ವೆಬ್‌ಸೈಟ್‌ಗೆ ತೆರಳಿ ನೀವು ನೋಂದಣಿ ಮಾಡಿಕೊಳ್ಳಬಹುದು. ಅಥವಾ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್, ಎಸ್ಕಾಂ ಕಚೇರಿಗಳಲ್ಲಿ ಕೂಡ ನೋಂದಣಿ ಮಾಡಿಕೊಳ್ಳಬಹುದು. ನೋಂದಣಿ ಉಚಿತವಾಗಿದ್ದು, ಯಾವುದೇ ಹಣ ನೀಡುವ ಅಗತ್ಯವಿಲ್ಲ. ನಿಮ್ಮ ಮೊಬೈಲ್ ನಂಬರ್, ಆಧಾರ್ ನಂಬರ್, ಗ್ರಾಹಕರ ಐಡಿ ನೋಂದಣಿಗೆ ಕಡ್ಡಾಯವಾಗಿ ನೀಡಬೇಕು

Donate Janashakthi Media

Leave a Reply

Your email address will not be published. Required fields are marked *