ಗ್ರಹಣದ ವೇಳೆ ಆಹಾರ ಸೇವಿಸಿ ಮೌಡ್ಯಕ್ಕೆ ಸೆಡ್ಡು ಹೊಡೆದ ರಾಜ್ಯದ ಜನತೆ

ಬೆಂಗಳೂರು :ಇಂದು ಸೂರ್ಯಗ್ರಹಣ ಹಿನ್ನೆಲೆ ಬೆಂಗಳೂರಿನ ಟೌನ್ ಬಳಿ ಮೂಡನಂಬಿಕೆ ವಿರೋಧಿ ವೇದಿಕೆಯಿಂದ ಆಹಾರ ಸೇವಿಸಿ ಮೂಡನಂಬಿಕೆ ವಿರುದ್ಧ ಜಾಗೃತಿ ಮೂಡಿಸಲಾಯ್ತು. ಸಾಮಾಜಿಕ ಕಾರ್ಯಕರ್ತ ನರಸಿಂಹ ಮೂರ್ತಿ ಸೇರಿ ಹಲವರಿಂದ ಈ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.ವಿಜ್ಞಾನದೆಡೆಗೆ ನಮ್ಮ ನಡಿಗೆ ಬ್ಯಾನರ್ ಅಡಿ ಸುಮಾರು 50 ಮಂದಿ ಕಾರ್ಯಕರ್ತರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಈ ವೇಳೆ ಹೊಳಿಗೆ, ಹಣ್ಣು, ಬಿಸ್ಕೇಟ್ ಸೇವಿಸಿದರು.

ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೆಕಲ್ ನಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದು ಮಾಂಸಹಾರ ಸೇವನೆ ಮಾಡಲಾಗಿದೆ. ವಿಜ್ಞಾನದೆಡೆಗೆ ಸಾಗೋಣ ಮೌಢ್ಯತೆಯನ್ನ ಅಳಿಸೋಣ ಎಂಬ ಕಾರ್ಯಕ್ರಮದಡಿ ಆನೇಕಲ್ ಮೌಢ್ಯ ವಿರೋಧಿ ವೇದಿಕೆಯಿಂದ ಗ್ರಹಣದ ದಿನ ಮಾಂಸಹಾರ ಸೇವನೆ ಮಾಡಲಾಯ್ತು. ಗ್ರಹಣಗಳು ಖಗೋಳದಲ್ಲಿ ನಡೆಯುವ ಪ್ರಾಕೃತಿಕ ವಿಸ್ಮಯ. ಜನರು ಗ್ರಹಣದ ಬಗ್ಗೆ ಪೂರ್ವಗ್ರಹ ಪೀಡಿತರಾಗಿ ವರ್ತಿಸುತ್ತಿದ್ದಾರೆ. ಗ್ರಹಣ, ರಾಶಿ ಎಂದು ಕೆಲವರು ಜನರ ಬಳಿ ಹಣ ಸುಲಿಗೆ ಮಾಡುತ್ತಿದ್ದಾರೆ. ಮೌಢ್ಯವನ್ನ ಹೋಗಲಾಡಿಸಿ ವಿಜ್ಞಾನದೆಡೆಗೆ ಸಾಗಬೇಕು ಎಂದು ಜನ ಜಾಗೃತಿ ಮೂಡಿಸಿದರು.

ಬಸವನಗುಡಿಯಲ್ಲಿ ಜನವಾದಿ ಮಹಿಳಾ ಸಂಘಟನೆಯ ನೇತೃತ್ವದಲ್ಲಿ ಗ್ರಹಣ ವೀಕ್ಷಿಸಿ, ಆಹಾರ ಸೇವನೆ ಮಾಡಲಾಯಿತು. ಇದೇ ವೇಳೆ ಗ್ರಹಣದ ಕುರಿತು ಉಪನ್ಯಾಸ ನಡೆಸಲಾಯಿತು.

ಗದಗದಲ್ಲಿ ಗ್ರಹಣ ಹಿಡಿದಾಗಲೇ ಉಪಾಹಾರ ಸೇವನೆ: ಗದಗ ನಗರದ ಮಹಾತ್ಮಾ ಗಾಂಧಿ ವೃತ್ತದಲ್ಲಿ ಗ್ರಹಣ ಸಮಯದಲ್ಲೇ ಸಂವಿಧಾನ ಸಂರಕ್ಷಣಾ ಸಮಿತಿ ಸದಸ್ಯರು ಉಪಾಹಾರ ಸೇವನೆ ಮಾಡಿ ಗ್ರಹಣ ಮೇಲಿರುವ ಅಪನಂಬಿಕೆ ಹೋಗಲಾಡಿಸಲು ಜನರಲ್ಲಿ ಜಾಗೃತಿ ಮೂಡಿಸಿದರು. ಗ್ರಹಣವೆಂಬುದು ನಿಸರ್ಗದಲ್ಲಿ ನಡೆಯುವ ಒಂದು ಕ್ರೀಯೆ ಸದಸ್ಯರು ಸಾರಿ ಹೇಳಿದರು. ಈ ಮೂಲಕ ಊಟ, ಉಪಾಹಾರ ಮಾಡಬಾರದೆಂಬ ಆಚರಣೆಗೆ ಸೆಡ್ಡು ಹೊಡೆದರು. ಮಿರ್ಚಿ, ಚುರುಮುರಿ, ಮೈಸೂರು ಪಾಕ್ ಹಂಚಿ ಜನ ಜಾಗೃತಿ ಮೂಡಿಸಿದರು.

ಧಾರವಾಡ ದಲ್ಲಿ ಪಲಾವ್ ಮಾಡಿ ತಿಂದ ಜನತೆ: ಗ್ರಹಣ ಸಮಯದಲ್ಲಿ ಆಚರಿಸುವ ಮೂಢನಂಬಿಕೆಗೆ ಹೋಗಲಾಡಿಸಲು ಸಮಾನ ಮನಸ್ಕರಿಂದ ಗ್ರಹಣ ಪ್ರಸಾದ ಕಾರ್ಯಕ್ರಮ ನಡೆಸಲಾಯ್ತು. ಧಾರವಾಡದ ಕಲಾಭವನ ಆವರಣದಲ್ಲಿ ಗ್ರಹಣ ಸಮಯದಲ್ಲಿ ಫಲಾವ ಮಾಡಿ ತಿಳುವಳಿಕೆ ಕಾರ್ಯಕ್ರಮ ನಡೆಸಲಾಯ್ತು.

ಕಲಬುರಗಿಯಲ್ಲಿ ಆಹಾರ ಸೇವನೆ : ಕಲಬುರಗಿ ಜಿಲ್ಲೆಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಹಾಗೂ ಪ್ರಗತಿಪರ ಚಿಂತಕರ ಸಂಘಟನೆಗಳು ಜನರಿಗೆ ಉಪಹಾರ ವ್ಯವಸ್ಥೆ ಮಾಡಿ, ಆಹಾರ ಸವಿದಿದೆ. ನಗರದ ಜಗತ್ ವೃತ್ತದಲ್ಲಿ ಉಪಹಾರ ಸೇವನೆ ಮಾಡಿ ಸೆಡ್ಡು ಹೊಡೆದಿದ್ದಾರೆ. ಉಪ್ಪಿಟ್ಟು, ಶಿರಾ, ಬಾಳೆಹಣ್ಣು ತಿಂದು ಗ್ರಹಣಕ್ಕೆ ಸೆಡ್ಡು ಹೊಡೆದಿದ್ದಾರೆ. ಈ ಮೂಲಕ ಸೂರ್ಯಗ್ರಹಣದ ವೇಳೆ ಉಪಹಾರ ಸೇವಿಸಿದ್ರೆ ಅಪಾಯವಿಲ್ಲ ಎಂದು ಹೇಳಿದ್ದಾರೆ. ಜನರಲ್ಲಿ ಮೌಢ್ಯತೆ ಬಿತ್ತಲು ಸೂರ್ಯಗ್ರಹಣ ವೇಳೆ ಉಪಹಾರ ಸೇವಿಸಬಾರೆಂದು ಹೇಳಲಾಗುತ್ತಿದೆ. ಇದೆಲ್ಲಾ ಸುಳ್ಳು, ಇದನ್ನು ಜನ ನಂಬಬಾರದು ಎಂದು ಆಹಾರ ಸೇವನೆ ಮಾಡುವ ಮೂಲಕ ಜಾಗೃತಿ ಮೂಡಿಸಿದರು.

Donate Janashakthi Media

Leave a Reply

Your email address will not be published. Required fields are marked *