ಕೇಂದ್ರ ಸರಕಾರವು ತೈಲ ಮತ್ತು ಅನಿಲ ನಿಕ್ಷೇಪಗಳನ್ನು ಹರಾಜು ಹಾಕಲು ಮುಂದಾಗಿದೆ

ನವದೆಹಲಿ: ಸರಕಾರಿ ಒಡೆತನದ ಒಎನ್‌ಜಿಸಿ ಹಾಗೂ ಒಐಎಲ್‌ ಒಡೆತನದಲ್ಲಿರುವ ಮಾರಾಟವಾಗದ ದೊಡ್ಡ ತೈಲ ಹಾಗೂ ಅನಿಲ ನಿಕ್ಷೇಪಗಳನ್ನು ಹರಾಜು ಹಾಕುವ ಮೂಲಕ ಮಾರಾಟ ಮಾಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಸಣ್ಣ ನಿಕ್ಷೇಪಗಳ ಮೂರನೇ ಸುತ್ತಿನ ಹರಾಜಿನ ಕಾರ್ಯಕ್ರಮದ ಉದ್ಘಾಟನಾ ಸಂದರ್ಭದಲ್ಲಿ ಮಾತನಾಡಿದ ಅವರು, ಕಂಪೆನಿಗಳು ತಾವು ಪತ್ತೆ ಮಾಡಿದ ಸಂಪನ್ಮೂಲಗಳಿಗಾಗಿ ಅನಿರ್ದಿಷ್ಟಾವಧಿ ಧರಣಿ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಈ ಸಂಪನ್ಮೂಲ ವಾಸ್ತವವಾಗಿ ರಾಷ್ಟ್ರಕ್ಕೆ ಸೇರಿದ್ದು. ಆಸಕ್ತ ಸಂಸ್ಥೆಗಳಿಗೆ ಹರಾಜಿನ ಮೂಲಕ ಅವುಗಳನ್ನು ಮಾರಾಟ ಮಾಡಬಹುದು ಎಂದು ಹೇಳಿದರು.

ಇದನ್ನು ಓದಿ: ತೈಲ ದರ ಹೆಚ್ಚಳಕ್ಕೆ ಬೆಚ್ಚಿಬಿದ್ದ ಜನ! : ಟ್ಯಾಕ್ಸ್‌ ಹೆಸರಲ್ಲಿ ಜನರ ಹೊಟ್ಟೆ ಹೊಡೆಯುತ್ತಿದೆ ಸರಕಾರ!!

ದೇಶದ ಹೈಡ್ರೋಕಾರ್ಬನ್ ಉತ್ಪಾದನೆಗೆ ಉತ್ತೇಜನ ನೀಡುವಂತಹ ಸಂಸ್ಥೆಗಳು ತಾವು ಪತ್ತೆ ಮಾಡಲಾಗಿರುವ 75ರಲ್ಲಿ 32ಕ್ಕೂ ಅಧಿಕ ತೈಲ, ಅನಿಲ ನಿಕ್ಷೇಪಗಳನ್ನು ‘ಪತ್ತೆಯಾದ ಸಣ್ಣ ನಿಕ್ಷೇಪ(ಡಿಎಸ್ಎಫ್) ಸುತ್ತು 3’ರಲ್ಲಿ ಹರಾಜು ಮಾಡಲಾಗುವುದು. ವಿತ್ತ ವ್ಯವಸ್ಥೆ ಹಾಗೂ ಸಣ್ಣ ಗಾತ್ರದ ಕಾರಣಕ್ಕೆ ಈ ನಿಕ್ಷೇಪಕಗಳನ್ನು ಅಭಿವೃದ್ಧಿಪಡಿಸಲು ಅವುಗಳಿಗೆ ಆರ್ಥಿಕವಾಗಿ ಕಾರ್ಯಸಾಧುವಾಗಲಾರದು ಎಂದು ಅವರು ವಿವರಿಸಿದರು.

ಈ ಸಣ್ಣ ಹಾಗೂ ಮಧ್ಯಮ ನಿಕ್ಷೇಪಗಳನ್ನು ರಾಷ್ಟ್ರ ಸ್ವಾಮಿತ್ವದ ಆಯಿಲ್ ಆ್ಯಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ (ಒಎನ್‌ಜಿಸಿ) ಹಾಗೂ ಆಯಿಲ್ ಇಂಡಿಯಾ ಲಿಮಿಟೆಡ್ (ಒಐಎಲ್) ಪತ್ತೆ ಮಾಡಿದೆ. ‘‘ಮುಂದಿನ ಬಾರಿ ಡಿಎಸ್ಎಫ್ ಇರುವುದಿಲ್ಲ. ಮುಂದಿನ ಬಾರಿ, ಅದು ಪ್ರಮುಖ ಸುತ್ತು (ದೊಡ್ಡ ನಿಕ್ಷೇಪಗಳ ಹರಾಜು)ಆಗಿರುತ್ತದೆ’’ ಎಂದು ಧರ್ಮೇಂದ್ರ ಪ್ರಧಾನ್ ಅವರು ಹೇಳಿದರು.

ಪಶ್ಚಿಮ ಭಾಗದ ಕಡಲಾಚೆ ರತ್ನ ಆರ್-ಸೀರೀಸ್‌ನಂತಹ ತೈಲ ಕ್ಷೇತ್ರಗಳನ್ನು ಖಾಸಗಿ ಸಂಸ್ಥೆಗಳಿಗೆ ಮಾರಾಟ ಮಾಡಲು ಮತ್ತು ಕೆಜಿ ಜಲಾನಯನ ಅನಿಲ ಕ್ಷೇತ್ರಗಳಲ್ಲಿ ವಿದೇಶಿ ಪಾಲುದಾರರನ್ನು ಪಡೆಯಲು ಭಾರತದ ಅತಿದೊಡ್ಡ ತೈಲ ಮತ್ತು ಅನಿಲ ಉತ್ಪಾದಕ ಒಎನ್‌ಜಿಸಿ ತನ್ನ ಸಚಿವಾಲಯ ಹೇಳಿದ ಕೆಲವೇ ವಾರಗಳ ನಂತರ ಈ ಹೇಳಿಕೆ ಬಂದಿದೆ.

Donate Janashakthi Media

Leave a Reply

Your email address will not be published. Required fields are marked *