ಬೆಂಗಳೂರು : ಸರಕಾರಿ ಶಾಲೆಯ ಮಕ್ಕಳನ್ನು ತರಗತಿ ನಡೆಯುವ ವೇಳೆ, ಟಿ.ಕಾಫಿ ತರಲು ಬಳಸಿಕೊಳ್ಳುತ್ತಿರುವ ಪ್ರಕರಣ ಬಯಲಿಗೆ ಬಂದಿದೆ.
ಹೌದು, ಬಸವನಗುಡಿಯ ಎನ್ ಆರ್ ಕಾಲೋನಿ ಬಸ್ ನಿಲ್ದಾಣದ ಮೊದಲ ಮಹಡಿಯಲ್ಲಿರುವ ಸರಕಾರಿ ಶಾಲೆಯ ಶಿಕ್ಷಕ ವೆಂಕಟೇಶ್ ಎನ್ನುವವರು ಶಾಲಾ ಮಕ್ಕಳ್ಳಿಬ್ಬರನ್ನು ಟಿ.ಕಾಫಿ ಗೆ ಕಳುಹಿಸಿದ್ದಾರೆ. ಮಕ್ಕಳು ಟಿ ತರುತ್ತಿರುವುದನ್ನು ಸಾರ್ವಜನಿಕರೊಬ್ಬರು ಚಿತ್ರಿಕರಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಶಾಲಾ ಅವಧಿಯಲ್ಲಿ ಮಕ್ಕಳಿಗೆ ಪಾಠ ಹೇಳಬೇಕು, ಅದುಬಿಟ್ಟು ಟಿ, ಕಾಫಿ ಎಂದೆಲ್ಲ ಮಕ್ಕಳನ್ನು ಬಳಕೆ ಮಾಡಿಕೊಳ್ಳುತ್ತಿರುವುದು ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗಿದೆ. ಇಂತಹ ಶಿಕ್ಷಕರಿಂದ ಸರಕಾರಿ ಶಾಲೆಗಳಿಗೆ ಕೆಟ್ಟ ಹೆಸರು ಕೂಡಲೇ ಅವರ ಮೇಲೆ ಶಿಕ್ಷಣ ಇಲಾಖೆ ಕ್ರಮ ಜರುಗಿಸಬೇಕು ಈ ಕುರಿತು ಸ್ವತ: ನಾನೇ ದೂರು ಕೊಡುತ್ತೇನೆ ಎಂದು ಮಾನವ ಹಕ್ಕುಗಳ ಜನಸೇವ ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಶಂಕರ್ ರವರು ತಿಳಿಸಿದ್ದಾರೆ.