ಜನರ ಬೆವರಲ್ಲಿ ಕಟ್ಟಿದ ವಿದ್ಯುತ್ ಕ್ಷೇತ್ರವನ್ನು ಅದಾನಿ – ಅಂಬಾನಿಗೆ ಮಾರಲು ಹೊರಟ ಸರ್ಕಾರ : ಮಹಮ್ಮದ್ ಸಮೀವುಲ್ಲಾ ಕಿಡಿ

ವಿದ್ಯುತ್ ಸುಧಾರಣೆಗಳ ಕುರಿತ CPIM ರಾಜ್ಯ ಸಮಾವೇಶ

ಬೆಂಗಳೂರು: ಜನರ ಬೆವರು ಹರಿಸಿ ದುಡಿದ ಹಣದಲ್ಲಿ ವಿದ್ಯುತ್ ಕ್ಷೇತ್ರವು ಬೃಹತ್ ಮಟ್ಟದಲ್ಲಿ ಉತ್ಪಾದನೆ ಮಾಡಲು ಸಾಧ್ಯವಾಗಿದೆ. ಆದರೆ ಇದೀಗ ಸರ್ಕಾರ ಅಂಬಾನಿ, ಅದಾನಿ, ಟಾಟಾರಂತಹ ಬಂಡವಾಳಶಾಹಿಗಳಿಗೆ ವಿದ್ಯುತ್ ಅನ್ನು ಮಾರಾಟ ಮಾಡಲು ಹೊರಟಿದೆ ಎಂದು ಆಲ್ ಇಂಡಿಯಾ ಫೆಡರೇಷನ್ ಆಫ್ ಎಲೆಕ್ಟ್ರಿಸಿಟಿ ಎಂಪ್ಲಾಯಿಸ್‌ನ ಮುಖಂಡರಾದ ಮಹಮ್ಮದ್ ಸಮೀವುಲ್ಲಾ ಹೇಳಿದರು. ವಿದ್ಯುತ್ ಸುಧಾರಣೆಗಳ ಕುರಿತ CPIM ರಾಜ್ಯ ಸಮಾವೇಶ ಬೆಂಗಳೂರಿನ ಗಾಂಧಿ ಭವನದಲ್ಲಿ ಬುಧವಾರ ನಡೆಡಿದ್ದು, ಈ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾವೇಶದಲ್ಲಿ ಮಾತನಾಡಿದ ಸಮೀವುಲ್ಲಾ ಅವರು, “ಸ್ವಾತಂತ್ಯ್ರದ ನಂತರ ಇಡೀ ದೇಶದಲ್ಲಿ ವಿದ್ಯುತ್ ಉತ್ಪಾದನೆ ಇದ್ದಿದ್ದು ಕೇವಲ 1,364 ಮೆಗಾ ವ್ಯಾಟ್. ಅದನ್ನೂ ಖಾಸಗಿಯವರು ಉತ್ಪಾದನೆ ಮಾಡುತ್ತಿದ್ದರು. ನಮ್ಮ ದೇಶದ ರೈತರಿಗೆ, ಸಾಮಾನ್ಯ ಜನರಿಗೆ, ದೇಶದ ಕೈಗಾರಿಕೆಗೆ ವಿದ್ಯುತ್ ಅಗತ್ಯವೆಂದು ಸರ್ಕಾರವೆ ವಿದ್ಯುತ್ ಉತ್ಪಾದನೆ ತೊಡಗಿದ ನಂತರ, ಇದೀಗ ದೇಶದ ವಿದ್ಯುತ್ ಉತ್ಪಾದನೆ ಬರೋಬ್ಬರಿ 5 ಲಕ್ಷ ಮೆಗಾವ್ಯಾಟ್ ಏರಿದೆ. ಇಷ್ಟೊಂದು ದೊಡ್ಡ ಮಟ್ಟದಲ್ಲಿ ವಿದ್ಯುತ್ ಉತ್ಪಾದನೆಯಾಗಲು ಅಂಬಾನಿ, ಅದಾನಿ, ಟಾಟಾರಂತಹ ಬಂಡವಾಳ ಶಾಹಿಗಳು ಕಾರಣರಲ್ಲ. ಇವೆಲ್ಲವೂ ಸಾಧ್ಯವಾಗಿದ್ದು ಈ ದೇಶದ ಜನರ ಬೆವರಿನ ದುಡ್ಡಿನಲ್ಲಿ. ಆದರೆ ಇದನ್ನು ಅದಾನಿ-ಅಂಬಾನಿಗೆ ಮಾರುತ್ತಿದ್ದಾರೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜನರ ಬೆವರಲ್ಲಿ ಕಟ್ಟಿದ ವಿದ್ಯುತ್ ಕ್ಷೇತ್ರವನ್ನು ಅದಾನಿ ಅಂಬಾನಿಗೆ ಮಾರಲು ಹೊರಟ ಸರ್ಕಾರ: ಮಹಮ್ಮದ್ ಸಮೀವುಲ್ಲಾ ಕಿಡಿ | Govt going to sell power sector built with people's sweat to Adani Ambani: Mohammed Samiullah

“ಈಗ ವಿದ್ಯುತ್ ಸಮಸ್ಯೆಯಾದರೆ ಕೆಲವೇ ಗಂಟೆಗಳಲ್ಲಿ ಪರಿಹಾರವಾಗುತ್ತದೆ. ಆದರೆ ಖಾಸಗಿಕರಣಗೊಂಡೆ ನಾಲ್ಕೈದು ದಿನಗಳಾದರೂ ಪರಿಹಾರವಾಗುವುದಿಲ್ಲ. ಈ ಹಿಂದೆ ವಿದ್ಯುತ್ ಎನ್ನುವುದು ಐಷಾರಾಮಿ ಜೀವನದ ಒಂದು ಸಂಕೇತವಾಗಿತ್ತು. ಆದರೆ ಇಂದು ಅದು ಶಿಕ್ಷಣ, ಆರೋಗ್ಯ ರೀತಿಯಲ್ಲೆ ಮೂಲಭೂತ ಅವಶ್ಯಕತೆಗಳಲ್ಲಿ ಒಂದಾಗಿದೆ. ಹಾಗಾಗಿ ಸರ್ಕಾರ ಅದಕ್ಕೆ ತಕ್ಕಂತೆ ನಿಯಮಗಳನ್ನು ಮಾಡಬೇಕಿತ್ತು. ಆದರೆ ಸರ್ಕಾರ ಅದನ್ನು ಖಾಸಗೀಕರಣ ಮಾಡುವ ಸಲುವಾಗಿ ಜನವಿರೋಧಿ ಮಸೂದೆಯನ್ನು ಹೊಸತಾಗಿ ತಂದಿದೆ. ಇದನ್ನು ಎಲ್ಲರೂ ವಿರೋಧಿಸಬೇಕಿದೆ” ಎಂದು ಅವರು ಹೇಳಿದರು.

ಸಮಾವೇಶದ ಅಧ್ಯಕ್ಷತೆಯನ್ನು CPIM ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಗೋಪಾಲಕೃಷ್ಣ ಅರಳಹಳ್ಳಿ ವಹಿಸಿದ್ದರು. ಪ್ರಾಸ್ತಾವಿಕವಾಗಿ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಮೀನಾಕ್ಷಿ ಸುಂದರಂ ಮಾತನಾಡಿದರು. ಸಮಾವೇಶಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿ ತಮ್ಮ ಜಿಲ್ಲೆಗಳಲ್ಲಿನ ಸಮಸ್ಯೆಗಳ ಬಗ್ಗೆ ಹೇಳಿಕೊಂಡರು. ಸಮಾವೇಶದ ನಿರ್ಣಯಗಳನ್ನು CPIM ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ‌.ಪ್ರಕಾಶ್ ಅವರು ಮಂಡಿಸಿದರು.

ವೇದಿಕೆಯಲ್ಲಿ ಬೆಂಗಳೂರು ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಎನ್.ಮಂಜುನಾಥ್, ಪ್ರತಾಪ್ ಸಿಂಹ, ವೆಂಕಟಾಚಲಯ್ಯ, ಚಂದ್ರ ತೇಜಸ್ವಿಯವರು ಇದ್ದರು.

ಇದನ್ನೂ ಓದಿ: ಸದನ ಸ್ವಾರಸ್ಯ: ಅಕ್ಕಿ ಕೊಡೋದು ಹೆಂಗೆ ಅಂತಾ ನಾವು ಹೇಳ್ತೆವೆ ಎಂದ ಬಿಜೆಪಿ? ಹೌದಾ, ಎಂದು ಕಾಲೆಳದ ಸ್ಪೀಕರ್?

ಜನರ ಬೆವರಲ್ಲಿ ಕಟ್ಟಿದ ವಿದ್ಯುತ್ ಕ್ಷೇತ್ರವನ್ನು ಅದಾನಿ ಅಂಬಾನಿಗೆ ಮಾರಲು ಹೊರಟ ಸರ್ಕಾರ: ಮಹಮ್ಮದ್ ಸಮೀವುಲ್ಲಾ ಕಿಡಿ | Govt going to sell power sector built with people's sweat to Adani Ambani: Mohammed Samiullah ಜನರ ಬೆವರಲ್ಲಿ ಕಟ್ಟಿದ ವಿದ್ಯುತ್ ಕ್ಷೇತ್ರವನ್ನು ಅದಾನಿ ಅಂಬಾನಿಗೆ ಮಾರಲು ಹೊರಟ ಸರ್ಕಾರ: ಮಹಮ್ಮದ್ ಸಮೀವುಲ್ಲಾ ಕಿಡಿ | Govt going to sell power sector built with people's sweat to Adani Ambani: Mohammed Samiullah

Donate Janashakthi Media

Leave a Reply

Your email address will not be published. Required fields are marked *