ನವದೆಹಲಿ: ರಾಜ್ಯ ಸರ್ಕಾರಗಳು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡುವಲ್ಲಿ ವಿಳಂಬ ಮಾಡುತ್ತಿರುವ ರಾಜ್ಯಪಾಲರನ್ನು ಸುಪ್ರೀಂಕೋರ್ಟ್ ಇತ್ತಿಚೆಗೆ ತರಾಟೆಗೆ ತೆಗೆದುಕೊಂಡಿದೆ. ರಾಜ್ಯಪಾಲರು ಭಾರತೀಯ ಸಂವಿಧಾನದ 200 ನೇ ವಿಧಿಯ ಪ್ರಕಾರ ಕಾರ್ಯನಿರ್ವಹಿಸಬೇಕು, ಕಾನೂನು ರಚನೆಗೆ ರಾಜ್ಯಾಪಾಲರು ಅಡ್ಡಿ ಮಾಡಬಾರದು ಎಂದು ಪಂಜಾಜ್ ಸರ್ಕಾರ ಸಲ್ಲಿಸಿದ ರಿಟ್ ಅರ್ಜಿ ಪ್ರಕರಣದ ತೀರ್ಪಿನಲ್ಲಿ ಸ್ರುಪ್ರೀಂಕೋರ್ಟ್ ಹೇಳಿದೆ. ಸಂವಿಧಾನದ 200 ನೇ ವಿಧಿಯು ರಾಜ್ಯ ಶಾಸಕಾಂಗ ಮಸೂದೆಯನ್ನು ಅಂಗೀಕರಿಸಿದಾಗ ಅನುಸರಿಸಬೇಕಾದ ಕಾರ್ಯವಿಧಾನದ ಬಗ್ಗೆ ಮಾತನಾಡುತ್ತದೆ.
ಪಂಜಾಬ್ ಸರ್ಕಾರವು ಅಂಗೀಕರಿಸಿದ ನಾಲ್ಕು ಮಸೂದೆಗಳಿಗೆ ಒಪ್ಪಿಗೆ ನೀಡದ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಸಲ್ಲಿಸಿದ ರಿಟ್ ಅರ್ಜಿಯನ್ನು ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ತ್ರಿಸದಸ್ಯ ಪೀಠವು ನವೆಂಬರ್ 10 ರಂದು ಈ ಆದೇಶವನ್ನು ನೀಡಿತ್ತು. ಪ್ರಕರಣದ ತೀರ್ಪಿನ ಆದೇಶವನ್ನು ನವೆಂಬರ್ 23 ರಂದು ಅಪ್ಲೋಡ್ ಮಾಡಲಾಗಿದೆ.
ಇದನ್ನೂ ಓದಿ: ಮೋದಿ ವಿರುದ್ಧ ‘ಪನೌತಿ’ ಹೇಳಿಕೆ | ರಾಹುಲ್ ಗಾಂಧಿಗೆ ಚುನಾವಣಾ ಆಯೋಗ ನೋಟಿಸ್
ರಾಜ್ಯಪಾಲರು ರಾಜ್ಯದ ಚುನಾಯಿತರಾಗದ ಮುಖ್ಯಸ್ಥರಾಗಿದ್ದು, ಕೆಲವು ಸಾಂವಿಧಾನಿಕ ಅಧಿಕಾರಗಳನ್ನು ಎತ್ತಿಹಿಡಿಯುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ನ್ಯಾಯಾಲಯ ಪುನರುಚ್ಚರಿಸಿದೆ. “ಆದಾಗ್ಯೂ, ರಾಜ್ಯ ಶಾಸಕಾಂಗಗಳ ಸಾಮಾನ್ಯ ಕಾನೂನು ರಚನೆಯನ್ನು ತಡೆಯಲು ಈ ಅಧಿಕಾರವನ್ನು ಬಳಸಲಾಗುವುದಿಲ್ಲ. ಸಂಸದೀಯ ಸ್ವರೂಪದ ಪ್ರಜಾಪ್ರಭುತ್ವದಲ್ಲಿ ‘ನೈಜ ಅಧಿಕಾರ’ ಜನರ ಚುನಾಯಿತ ಪ್ರತಿನಿಧಿಗಳಿಗೆ ನೀಡಲ್ಪಟ್ಟಿದೆ ಎಂದು ನ್ಯಾಯಾಲಯದ ತೀರ್ಪು ಹೇಳಿದೆ.
“ಸರ್ಕಾರದ ಕ್ಯಾಬಿನೆಟ್ ರೂಪದಲ್ಲಿರುವ ಸರ್ಕಾರದ ಸದಸ್ಯರು ಶಾಸಕಾಂಗದ ಪರಿಶೀಲನೆಗೆ ಜವಾಬ್ದಾರರಾಗಿರುತ್ತಾರೆ ಮತ್ತು ಒಳಪಟ್ಟಿರುತ್ತಾರೆ. ರಾಷ್ಟ್ರಪತಿಗಳ ನೇಮಕವಾಗಿರುವ ರಾಜ್ಯಪಾಲರು ರಾಜ್ಯದ ನಾಮಸೂಚಕ ಮುಖ್ಯಸ್ಥ ಮಾತ್ರ’’ ಎಂದು ನ್ಯಾಯಪೀಠ ಹೇಳಿದೆ.
ಜೂನ್ ತಿಂಗಳ 20ರಂದು ಅಂಗೀಕರಿಸಲಾದ ನಾಲ್ಕು ಮಸೂದೆಗಳಿಗೆ ಪಂಜಾಬ್ ರಾಜ್ಯಪಾಲರು ಒಪ್ಪಿಗೆ ನೀಡದಿರುವ ಬಗ್ಗೆ ಸಲ್ಲಿಸಲಾಗಿರುವ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ಪೀಠವು, ರಾಜ್ಯಪಾಲರ ಸಾಂವಿಧಾನಿಕ ಜವಾಬ್ದಾರಿಗಳ ಬಗ್ಗೆ ಹೇಳಿದೆ. ರಾಜ್ಯಪಾಲರು ತಮಗೆ ಮಂಡಿಸಿದ ಮಸೂದೆಗಳ ಮೇಲೆ ತಮ್ಮ ಅಧಿಕಾರವನ್ನು ಹೇಗೆ ಚಲಾಯಿಸಬೇಕು ಎಂಬುದರ ಕುರಿತು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ ಪೀಠ, ರಾಜ್ಯಪಾಲರು ಸಂವಿಧಾನದ 200 ನೇ ವಿಧಿಯ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದೆ.
ಇದನ್ನೂ ಓದಿ: ಬಿಬಿಸಿ ಇಸ್ರೇಲ್ ಪರವಾಗಿ ಪಕ್ಷಪಾತಿ ವರದಿ ಮಾಡುತ್ತಿದೆ | ಅದೇ ಸಂಸ್ಥೆಯ ಪತ್ರಕರ್ತರಿಂದಲೆ ಆರೋಪ
ಆರ್ಟಿಕಲ್ 200 ರ ಪ್ರಕಾರ, ಒಂದು ವೇಳೆ ರಾಜ್ಯಪಾಲರು ಮಸೂದೆಯನ್ನು ಹಿಂತಿರುಗಿಸಿದಾಗ, ಸದನವು ಮಸೂದೆಯನ್ನು ಮರುಪರಿಶೀಲಿಸುತ್ತದೆ ಮತ್ತು ರಾಜ್ಯಪಾಲರು ಸೂಚಿಸಿದ ಬದಲಾವಣೆಗಳೊಂದಿಗೆ ಅಥವಾ ಯಾವುದೆ ಬದಲಾವಣೆ ಇಲ್ಲದೆಯೇ ಅದನ್ನು ರಾಜ್ಯಪಾಲರ ಅನುಮೋದನೆಗೆ ಮತ್ತೆ ಕಳುಹಿಸುತ್ತದೆ. ಎರಡನೇ ಬಾರಿಗೆ ಮಸೂದೆಯನ್ನು ಸದನವು ಅಂಗೀಕರಿಸಿದ ನಂತರ, ರಾಜ್ಯಪಾಲರು ಮರು-ಅಂಗೀಕಾರಗೊಂಡ ಮಸೂದೆಗೆ “ಸಮ್ಮತಿಯನ್ನು ತಡೆಹಿಡಿಯುವಂತಿಲ್ಲ”.
ಆರ್ಟಿಕಲ್ 200 ರಾಜ್ಯಪಾಲರಿಗೆ ವಿಧೇಯಕಕ್ಕೆ ಒಪ್ಪಿಗೆ ನೀಡುವುದನ್ನು ತಡೆಹಿಡಿಯಲು ಅಧಿಕಾರ ನೀಡಿದ್ದರೂ, ರಾಜ್ಯಪಾಲರು ಸರಿಯಾದ ಕ್ರಮವನ್ನು ಅನುಸರಿಸಬೇಕು ಮತ್ತು ‘ಸಾಧ್ಯವಾದಷ್ಟು ಬೇಗ’ ವಿಧಾನಸಭೆಗೆ ಕಾರಣವನ್ನು ತಿಳಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾನೂನು
ಇದನ್ನೂ ಓದಿ: ರೈತ-ಕಾರ್ಮಿಕ-ದಲಿತರ 72 ಗಂಟೆಗಳ ಮಹಾಧರಣಿ ಭಾನುವಾರದಿಂದ ಪ್ರಾರಂಭ
ರಾಜ್ಯಪಾಲರ ವಿರುದ್ಧ ಇತರ ರಾಜ್ಯಗಳ ಪ್ರಕರಣಗಳು
ಕೇರಳ ಮತ್ತು ತಮಿಳುನಾಡು ಸರ್ಕಾರಗಳು ಇದೇ ರೀತಿಯ ಕಳವಳಗಳನ್ನು ವ್ಯಕ್ತಪಡಿಸಿದ್ದವು. ಹೀಗಾಗಿ ಸುಪ್ರೀಂ ಕೋರ್ಟ್ನ ಈ ತೀರ್ಪು ಮಹತ್ವದ್ದಾಗಿದೆ. ಕೇರಳದ ರಾಜ್ಯಪಾಲರಾದ ಆರಿಫ್ ಮೊಹಮ್ಮದ್ ಖಾನ್ ಮತ್ತು ತಮಿಳುನಾಡಿನ ರಾಜ್ಯಪಾಲ ಆರ್ಎನ್ ರವಿ ವಿರುದ್ಧ ಈಗಾಗಲೆ ಆಯಾ ರಾಜ್ಯಗಳ ಅರ್ಜಿ ಸಲ್ಲಿಸಿವೆ.
ಈ ವಾರದ ಆರಂಭದಲ್ಲಿ, ರಾಜ್ಯ ಸರ್ಕಾರವು ಅಂಗೀಕರಿಸಿದ ಮಸೂದೆಗಳಿಗೆ ಒಪ್ಪಿಗೆ ನೀಡಲು ವಿಳಂಬ ಮಾಡಿದ್ದಕ್ಕಾಗಿ ಪ್ರತಿಕ್ರಿಯೆಯನ್ನು ಕೋರಿ, ಸುಪ್ರೀಂ ಕೋರ್ಟ್ ಕೇರಳ ರಾಜ್ಯಪಾಲರಿಗೆ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತ್ತು, ರಾಜ್ಯಪಾಲರ ಒಪ್ಪಿಗೆಗಾಗಿ ಮಂಡಿಸಿದ ಎಂಟು ಮಸೂದೆಗಳಲ್ಲಿ ಮೂರು ಮಸೂದೆಗಳು ಎರಡು ವರ್ಷಗಳಿಗೂ ಹೆಚ್ಚು ಕಾಲ ರಾಜ್ಯಪಾಲರ ಬಳಿ ಬಾಕಿ ಉಳಿದಿದ್ದು, ಮೂರು ಮಸೂದೆಗಳು ಒಂದು ವರ್ಷದಿಂದ ಬಾಕಿ ಉಳಿದಿವೆ ಎಂದು ಕೇರಳ ಸರ್ಕಾರ ಸುಪ್ರೀಂ ಕೋರ್ಟ್ಗೆ ದೂರು ನೀಡಿವೆ.
ವಿಡಿಯೊ ನೊಡಿ: ರಾಜ್ಯದಲ್ಲಿ ಸರ್ಕಾರ ಬದಲಾಗಿದೆ, ನಿಲುವುಗಳಲ್ಲಿ ಬದಲಾವಣೆ ಇಲ್ಲ – ಬಿ.ಸುರೇಶ್ Janashakthi Media ಕಾನೂನು