ಯಾದಗಿರಿ: ನಾವು ಸರ್ಕಾರಿ ಪ್ರೌಢಶಾಲೆ ಹೊತಪೇಟ ಶಾಲೆಯಲ್ಲಿ ಓದುತ್ತಿರುವ ಮಕ್ಕಳು. ಈ ಮೂಲಕ ವಿನಂತಿಸಿಕೊಳ್ಳುತ್ತಾ ನಮ್ಮ ಶಾಲೆಯಲ್ಲಿ ಕೆಟ್ಟ ತತ್ತಿಗಳನ್ನು ವಿತರಿಸುತ್ತಿದ್ದು, ಪ್ರಶ್ನಿಸಿದರೆ ಶಿಕ್ಷಕರು ಮತ್ತು ಮುಖ್ಯ ಗುರುಗಳು ಬೆದರಿಸುತ್ತಾರೆ ಮತ್ತು ತರಕಾರಿ ಸರಿಯಾಗಿ ತರುವುದಿಲ್ಲ ಕಡಿಮೆ ತಂದು ಹಾಕುತ್ತಾರೆ ಎಂದು ಎಸ್ಎಫ್ಐ ಆರೋಪಿಸಿದೆ.
ಪ್ರತಿವರ್ಷ ಮಕ್ಕಳಿಂದ ಸಾವಿರಾರು ರೂಪಾಯಿಗಳನ್ನು ದೇಣಿಗೆಯ ಪಡೆದು ಶಾಲೆ ಅಭಿವೃದ್ದಿ ಮಾಡುತ್ತೇನೆ ಎಂದು ಮತ್ತು ನಿಧಿ ಪೆಟ್ಟಿಗೆಯನ್ನು ಇಟ್ಟು ಪ್ರತಿದಿನ ನೀವು ಹಣ ಹಾಕಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದೆ. ಸರ್ಕಾರಿ
ನಾವು ಬಡ ಮಕ್ಕಳು ಆಗಿರುವುದರಿಂದ ನಮ್ಮಿಂದ ಡ್ರೆಸಗೆ ಹಣ ಕೊಡಲೇಬೇಕು ಎಂದು ಹಣ ಸಹ ವಸೂಲಿ ಮಾಡಿದ್ದಾರೆ. ನಮಗೆ ಶಿಕ್ಷಣ ದಿಂದ ಶಾಲೆ ಬಿಡುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದೆ. ಸರ್ಕಾರಿ
ಇದನ್ನೂ ಓದಿ: ಸುದ್ದಿ ಪ್ರಸಾರ ಮಾಡಲು ಮಾಧ್ಯಮಗಳ ಮೇಲೆ ವಿಧಿಸಲಾಗಿದ್ದ ನಿರ್ಬಂಧವನ್ನು ರದ್ದುಗೊಳಿಸಿ ಹೈಕೋರ್ಟ್
ನಮ್ಮ ಶಾಲೆಯ ಮುಖ್ಯಗುರು ಮತ್ತು ಇನ್ನಿತರ ಸಿಬ್ಬಂದಿಗಳು ಮಕ್ಕಳಿಗೆ ಸರಿಯಾಗಿ ಬಿಸಿ ಊಟ ವಿತರಣೆ ಮಾಡದೆ, ಊಟದ ಹಕ್ಕುಗಳನ್ನು ಲಂಘಿಸುತ್ತಿದ್ದಾರೆ. ಅನೇಕ ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ದೂರವಾಗುವ ಪರಿಸ್ಥಿತಿ ಉಂಟಾಗಿದೆ. ಕುಡಿಯುವ ನೀರು ಮತ್ತು ಶೌಚಾಲಯ ಇಲ್ಲದೆ ನರಳುತ್ತಿದ್ದೇವೆ ಎಂದು ಹೇಳಿದೆ.
ಇಂತಹ ತೊಂದರೆಗಳಿಂದ ಮಕ್ಕಳ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ. ಈ ಬಗ್ಗೆ ತಕ್ಷಣದ ತನಿಖೆ ನಡೆಸಿ, ಸಂಬಂಧಿತವರ ವಿರುದ್ಧ ಶಿಸ್ತುಮೂಲಕ ಕ್ರಮ ಕೈಗೊಳ್ಳಬೇಕೆಂದು ನಾವು ವಿನಂತಿಸುತ್ತೇವೆ ಎಂದು ಹೇಳಿಕೊಂಡಿದೆ.
1. ಬಿಸಿ ಊಟ ವಿತರಣೆಯ ಬಗ್ಗೆ ಪರಿಶೀಲನೆ ನಡೆಸುವುದು.
2. ಅಕ್ರಮ ಶುಲ್ಕ ಪಡಿತ್ತಿರುವ ಬಗ್ಗೆ ತನಿಖೆ ನಡೆಸುವುದು.
3. ಸಂಬಂಧಿತ ಸಿಬ್ಬಂದಿಗಳ ವಿರುದ್ಧ ಶಿಸ್ತುಮೂಲಕ ಕ್ರಮ.
4.ಮಕ್ಕಳಿಗೆ ಸಮರ್ಪಕವಾಗಿ ಬಿಸಿ ಊಟ ವಿತರಣೆಯಾಗಬೇಕು.
ಈ ಕುರಿತು ತ್ವರಿತ ಕ್ರಮ ಕೈಗೊಂಡು ಶಾಲೆಯ ಸರಿಯಾದ ನಿರ್ವಹಣೆಗೆ ಸಹಕಾರ ನೀಡಬೇಕೆಂದು ಅಪೇಕ್ಷಿಸುತ್ತೇವೆ ಎಂದು ಹೇಳಿದೆ.
ಎಸ್ಎಫ್ಐ ಜಿಲ್ಲಾ ಸಂಚಾಲಕರಾದ ಇಮಾಮಸಾಬ್ ನದಾಫ್ ಹಾಗೂ ಮುಖಂಡರಾದ ಮಲ್ಲಯ್ಯ, ಭೀಮರಾಯ, ಮನು, ರಾಜೇಶ್ವರಿ, ಮಲ್ಲಮ ಇದ್ದರು.
ಈ ಸಂದರ್ಭದಲ್ಲಿ ಕೆಪಿಆರ್‌ಎಸ್ ತಾಲೂಕ ಕಾರ್ಯದರ್ಶಿ ಭೀಮರಾಯ ಪೂಜಾರಿ ಮತ್ತು ರೈತ ಮುಖಂಡ ದೇವು ಹಾಗೂ ಮಹಿಳಾ ಮುಖಂಡರಾದ ಗೀತಾ ಮತ್ತು ಗ್ರಾಮಸ್ಥರು ಇದ್ದರು.
ಇದನ್ನೂ ನೋಡಿ: ಧರ್ಮಸ್ಥಳದ ಕೊಲೆ ಪ್ರಕರಣ | ಉಗ್ರಪ್ಪ ಸಮಿತಿಯಲ್ಲಿ ಏನಿತ್ತು? ವಿ.ಎಸ್. ಉಗ್ರಪ್ಪ ಜೊತೆ ಮಾತುಕತೆJanashakthi Media
