ಬರ್ಗರ್: ಬಾಲಸೋರ್ ರೈಲು ದುರಂತ ಜನ ಮಾನಸದಿಂದ ಮರೆಯಾಗುವ ಮುನ್ನವೇ ಈಗ ಒಡಿಶಾದ ಬರ್ಗರ್ ಜಿಲ್ಲೆಯಲ್ಲಿ ಗೂಡ್ಸ್ ರೈಲೊಂದು ಹಳಿತಪ್ಪಿದೆ. ಒಡಿಶಾದ ಬರ್ಗರ್‌ನಲ್ಲಿ, ಬಂಡಿಗಳು, ಸುಣ್ಣದ ಕಲ್ಲುಗಳನ್ನು ಸಾಗಿಸುತ್ತಿದ್ದ ಗೂಡ್ಸ್ ರೈಲಿನ ಐದು ವ್ಯಾಗನ್‌ಗಳು ಹಳಿ ತಪ್ಪಿವೆ. ಯಾವುದೇ ಸಾವು-ನೋವುಗಳ ಬಗ್ಗೆ ವರದಿಯಾಗಿಲ್ಲ.
ಒಡಿಶಾದ ಬರ್ಗರ್ ಜಿಲ್ಲೆಯ ಮೆಂಧಪಾಲಿ ಬಳಿ ಖಾಸಗಿ ಸಿಮೆಂಟ್ ಕಾರ್ಖಾನೆಯೊಂದರ ಗೂಡ್ಸ್ ರೈಲಿನ ಕೆಲವು ವ್ಯಾಗನ್‌ಗಳು ಹಳಿ ತಪ್ಪಿವೆ. ಈ ವಿಚಾರದಲ್ಲಿ ರೈಲ್ವೆ ಪಾತ್ರವಿಲ್ಲ. ಇದು ಸಂಪೂರ್ಣವಾಗಿ ಖಾಸಗಿ ಸಿಮೆಂಟ್ ಕಂಪನಿಯ ನ್ಯಾರೋ ಗೇಜ್ ಸೈಡಿಂಗ್ ಆಗಿದೆ. ರೋಲಿಂಗ್ ಸ್ಟಾಕ್, ಎಂಜಿನ್, ವ್ಯಾಗನ್‌ಗಳು, ರೈಲು ಹಳಿಗಳು (ನ್ಯಾರೋ ಗೇಜ್) ಸೇರಿದಂತೆ ಎಲ್ಲಾ ಮೂಲಸೌಕರ್ಯಗಳನ್ನು ಕಂಪನಿಯು ನಿರ್ವಹಿಸುತ್ತಿದೆ ಎಂದು ಈಶಾನ್ಯ ಕರಾವಳಿ ರೈಲ್ವೆ ಸ್ಪಷ್ಟಪಡಿಸಿದೆ.
5 wagons of goods train derailed in Bargarh, #Odisha#OdishaTrainAccident pic.twitter.com/Y4GoyoAmZ2
— Utkarsh Mishra (उत्कर्ष मिश्रा) (@UtkarshMishra_9) June 5, 2023
ಇದನ್ನೂ ಓದಿ : ಒಡಿಶಾ ರೈಲು ದುರಂತ: ಸಾವಿನ ಸಂಖ್ಯೆ 233ಕ್ಕೆ ಏರಿಕೆ, 900ಕ್ಕೂ ಅಧಿಕ ಮಂದಿಗೆ ಗಾಯ
3 ದಿನಗಳ ಹಿಂದಷ್ಟೇ ಇದೇ ಒಡಿಶಾದ ಬಾಲಾಸೋರ್ ನಲ್ಲಿ ಮೂರು ರೈಲುಗಳ ಅಪಘಾತವಾಗಿ 275 ಮಂದಿ ಸಾವಿಗೀಡಾಗಿ ಸಾವಿರಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಮೊದಲು ರೈಲೊಂದು ಹಳಿ ತಪ್ಪಿ, ಬಳಿಕ ಅದಕ್ಕೆ ಗೂಡ್ಸ್ ರೈಲು ಮತ್ತು ಪ್ಯಾಸೆಂಜರ್ ರೈಲು ಢಿಕ್ಕಿಯಾಗಿ ಇತಿಹಾಸದ ಭೀಕರ ರೈಲು ದುರಂತ ಸಂಭವಿಸಿತ್ತು. ಇದನ್ನು ಭಾರತದಲ್ಲೇ ಸಂಭವಿಸಿದ 3 ಅತ್ಯಂತ ಕೆಟ್ಟ ರೈಲ್ವೆ ಅಪಘಾತಗಳಲ್ಲಿ ಒಂದು ಎಂದು ಹೇಳಲಾಗಿದೆ.