ಕೇಪ್ ಕೆನವೆರಲ್: ನಾಸಾದ ಇಬ್ಬರು ಗಗನಯಾತ್ರಿಗಳಾದ ಭಾರತೀಯ ಮೂಲದ ಅಮೆರಿಕನ್ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಮತ್ತು ಅವರ ಬಾಹ್ಯಾಕಾಶ ಸಂಗಾತಿ ವಿಲ್ಮೋರ್ ಬುಚ್ ಅವರು ಯೋಜಿಸಿದ್ದಕ್ಕಿಂತ ಸ್ವಲ್ಪ ಬೇಗ ಭೂಮಿಗೆ ಮರಳಬಹುದು ಎಂದು ನಾಸಾ ತಿಳಿಸಿದೆ.
ಬುಚ್ ವಿಲ್ಮೋರ್ ಮತ್ತು ಸುನೀತಾ ವಿಲಿಯಮ್ಸ್ ಅವರನ್ನು ಏಪ್ರಿಲ್ ಬದಲಿಗೆ, ಮಾರ್ಚ್ ಅಂತ್ಯ ಅಥವಾ ಮಾರ್ಚ್ ಮಧ್ಯದಲ್ಲಿ ಭೂಮಿಗೆ ಮರಳಿ ಕರೆತರಲಿದೆ ಎಂದು ನಾಸಾ ಮೂಲಗಳು ತಿಳಿಸಿವೆ. ಇದು ಈ ಹಿಂದೆ ಘೋಷಿಸಲಾದ ಗಡುವಿಗಿಂತ ಸುಮಾರು ಎರಡು ವಾರಗಳ ಮುಂಚೆಯೇ ಆಗಿರುವುದು ಗಮನಾರ್ಹ.
ಇದನ್ನು ಓದಿ :-ಹಾಸನ| ಮೈಕ್ರೋ ಫೈನಾನ್ಸ್ ಹಾಕಿದ್ದ ಬೀಗ ಒಡೆದ ರೈತ ಸಂಘ
ಸ್ಪೇಸ್‌ಎಕ್ಸ್ ಮುಂಬರುವ ಗಗನಯಾತ್ರಿ ಹಾರಾಟಗಳಿಗೆ ಕ್ಯಾಪ್ಸುಲ್‌ಗಳನ್ನು ಬದಲಾಯಿಸುತ್ತದೆ ಎಂದು ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳವಾರ ಘೋಷಿಸಿದೆ. ಈ ಬದಲಾವಣೆಯು ಸ್ಪೇಸ್‌ಎಕ್ಸ್‌ನ ಕ್ರೂ-10 ಮಿಷನ್‌ಗಾಗಿ ಬಾಹ್ಯಾಕಾಶ ನೌಕೆ ನಿಯೋಜನೆಯಲ್ಲಿನ ಬದಲಾವಣೆಗೆ ಸಂಬಂಧಿಸಿದೆ.
ಜೂನ್ ಮೊದಲ ವಾರದಲ್ಲಿ ಸುನೀತಾ ಕೇವಲ ಒಂದು ವಾರ ಬಾಹ್ಯಾಕಾಶಕ್ಕೆ ಹೋಗಿದ್ದರು. ಆದರೆ ಅವರ ಬಾಹ್ಯಾಕಾಶ ನೌಕೆಯಲ್ಲಿ ತಾಂತ್ರಿಕ ಸಮಸ್ಯೆ ಇತ್ತು. ಇದರಿಂದಾಗಿ ಅವರಿಬ್ಬರ ಮರಳುವಿಕೆ ಮುಂದೂಡಲ್ಪಡುತ್ತಲೇ ಇತ್ತು. ನಂತರ ಎಲಾನ್ ಮಸ್ಕ್ ಅವರ ಸ್ಪೇಸ್‌ಎಕ್ಸ್ ಇಬ್ಬರ ಮರಳುವಿಕೆಯನ್ನು ಘೋಷಿಸಿತು.
ಮಾನವ ಬಾಹ್ಯಾಕಾಶ ಹಾರಾಟವು ಅನಿರೀಕ್ಷಿತ ಸವಾಲುಗಳಿಂದ ತುಂಬಿದೆ ಎಂದು ನಾಸಾದ ವಾಣಿಜ್ಯ ಸಿಬ್ಬಂದಿ ಕಾರ್ಯಕ್ರಮ ವ್ಯವಸ್ಥಾಪಕ ಸ್ಟೀವ್ ಸ್ಟಿಚ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.