ನೆರೆಹಾನಿಯಿಂದ ಬೆಳೆಹಾನಿಗೊಂಡ ರೈತರಿಗೆ ಬೆಳೆವಿಮೆ ಬಿಡುಗಡೆ

ಬೆಂಗಳೂರು: ಪ್ರಕೃತಿ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ಪರಿಹಾರ ಪಾವತಿಸಲು ರಾಜ್ಯ ಸರ್ಕಾರ ಮುಂದಾಗಿದ್ದೂ, ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಜಿಲ್ಲಾಧಿಕಾರಿಗಳಿಗೆ ಹಾಗೂ ನಿರ್ದೇಶಕರು, ಕೆಎಸ್ಎನ್‌ಡಿಸಿ ಅವರಿಗೆ ಅನುದಾನ ಬಿಡುಗಡೆ ಮಾಡಿ ಎಂದು ಆದೇಶಿಸಿದೆ. ಈ ಮೂಲಕ ನೆರೆಹಾನಿಯಿಂದ ಬೆಳೆಹಾನಿಗೊಂಡ ರೈತರಿಗೆ ಗುಡ್ ನ್ಯೂಸ್ ನೀಡಲಾಗಿದೆ. ನೆರೆ

ಈ ಸಂಬಂಧ ಕಂದಾಯ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ ನಡವಳಿಯನ್ನು ಹೊರಡಿಸಿದ್ದಾರೆ. ಅದರಲ್ಲಿ 2024-25ನೇ ಸಾಲಿನಲ್ಲಿ ನೈಸರ್ಗಿಕ ವಿಕೋಪಗಳಿಂದ ಸ್ಥಳೀಯವಾಗಿ ಉಂಟಾಗುವ ಬೆಳೆ ಹಾನಿಗೆ ಕೇಂದ್ರ ಸರ್ಕಾರದ ಗೃಹ ಮಂತ್ರಾಲಯವು ದಿನಾಂಕ: 11.07.2023 ರಂದು ಹೊರಡಿಸಿರುವ Revised Items of Expenditure and Norms of assistance from the State Disaster Response Fund (SDRF) ರ ಮಾರ್ಗಸೂಚಿಗಳನ್ವಯ ನಿಯಮಾನುಸಾರ ರಾಜ್ಯ ವಿಪತ್ತು ಪರಿಹಾರ ನಿಧಿಯಿಂದ ಪಾವತಿಸಬಹುದಾದ ಪರಿಹಾರ ಮೊತ್ತವನ್ನು ಸಂಬಂಧಪಟ್ಟ ಜಿಲ್ಲೆಯ ಜಿಲ್ಲಾಧಿಕಾರಿಗಳ ಹಂತದಲ್ಲಿಯೇ ಪರಿಹಾರ ತಂತ್ರಾಂಶದ ಮುಖಾಂತರ ಮಾತ್ರವೇ ನಿಯಮಾನುಸಾರ ಅರ್ಹ ರೈತ ಫಲಾನುಭವಿಗಳಿಗೆ ಅರ್ಹತೆಗನುಗುಣವಾಗಿ ಪಾವತಿಸಲು, ಕಾರ್ಯವಿಧಾನ ಹಾಗೂ ಷರತ್ತು ನಿಬಂಧನೆಗಳನ್ನು ಮೇಲೆ ಓದಲಾದ (1) ರ ಆದೇಶದಲ್ಲಿ ನಿಗದಿಪಡಿಸಲಾಗಿದೆ ಎಂದಿದ್ದಾರೆ. ನೆರೆ

ಮುಂಬರುವ ದಿನಗಳಲ್ಲಿ ನೈಸರ್ಗಿಕ ವಿಕೋಪಗಳಿಂದಾಗಿ ಉಂಟಾಗುವ ಮೂಲಭೂತ ಸೌಕರ್ಯಗಳ ಹಾನಿ ಹಾಗೂ ಬೆಳೆ ಹಾನಿಗಳಿಗೆ ನಿಯಮಾನುಸಾರ ಪರಿಹಾರ ಪಾವತಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮೇಲೆ ಓದಲಾದ (2) ರಿಂದ (7) ರ ಪತ್ರಗಳಲ್ಲಿ, ಹಾಸನ, ಬೀದರ್, ಶಿವಮೊಗ್ಗ, ಧಾರವಾಡ, ಮೈಸೂರು ಹಾಗೂ ರಾಯಚೂರು ಜಿಲ್ಲೆಯ ಜಿಲ್ಲಾಧಿಕಾರಿಗಳು ಕೋರಿರುತ್ತಾರೆ. ನೆರೆ

ಇದನ್ನೂ ಓದಿ: ಮಧ್ಯಪ್ರದೇಶ| ಬಡ ಯುವಕನಿಗೆ 6 ಕೋಟಿ ರೂ. ತೆರಿಗೆ ನೋಟಿಸ್

ಕೇಂದ್ರ ಸರ್ಕಾರದ 15 ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ 2024-25 ನೇ ಸಾಲಿನಲ್ಲಿ ರಾಜ್ಯ ವಿಪತ್ತು ಪರಿಹಾರ ನಿಧಿಗೆ ಕೇಂದ್ರ ಸರ್ಕಾರದಿಂದ 2 ನೇ ಕಂತಿನ ಅನುದಾನ ರೂ. 366.00 ಕೋಟಿಗಳನ್ನು ಮೇಲೆ ಓದಲಾದ (7) ರ ಪತ್ರದಲ್ಲಿ ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುತ್ತದೆ. ಮೇಲೆ ಓದಲಾದ (8) ರ ಹಿಂಬರಹದಲ್ಲಿ ಆರ್ಥಿಕ ಇಲಾಖೆಯು 2 ನೇ ಕಂತಿನ ರಾಜ್ಯದ ಪಾಲು ರೂ. 122.00 ಕೋಟಿಗಳನ್ನು ಬಿಡುಗಡೆ ಮಾಡಿರುತ್ತದೆ. ನೆರೆ

ವಿವತ್ತು ನಿರ್ವಹಣೆಯ ಸನ್ನದ್ಧತೆ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಕೇಂದ್ರ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ವಿಪತ್ತು ನಿರ್ವಹಣೆಯ ಸನ್ನದ್ಧತೆ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ದೇಶಕರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ರವರಿಗೆ ಹಾಗೂ ನೈಸರ್ಗಿಕ ವಿಕೋಪಗಳನ್ನು ಪರಿಣಾಮಕಾರಿಯಾಗಿ ತಕ್ಷಣ ನಿಭಾಯಿಸಲು ಜಿಲ್ಲಾಧಿಕಾರಿಗಳ ಪಿಡಿ ಖಾತೆಗೆ ಅನುದಾನ ಬಿಡುಗಡೆ ಮಾಡುವುದು ಅವಶ್ಯಕವಾಗಿರುತ್ತದೆ.

ಸನ್ನದ್ಧತೆ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ನಿರ್ದೇಶಕರು, ಕೆಎಸ್‌ಎನ್‌ಡಿಎಂಸಿ ರವರಿಗೆ ರಾಜ್ಯ ವಿಪತ್ತು ಪರಿಹಾರ ನಿಧಿಯ ಲೆಕ್ಕ ಶೀರ್ಷಿಕೆ 2245-80-102-0-01-051 ರಲ್ಲಿ Oo.25.00 ಕೋಟಿಗಳ ಅನುದಾನ ಬಿಡುಗಡೆಗೊಳಿಸಲು ಹಾಗೂ ಮುಂದಿನ ದಿನಗಳಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ನಿಯಮಾನುಸಾರ ತಕ್ಷಣ ಸ್ಪಂದಿಸಲು ಹಾಗೂ ಭಾರತ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಪರಿಹಾರವನ್ನು ಪಾವತಿಸಲು ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ರಾಜ್ಯ ವಿಪತ್ತು ಪರಿಹಾರ ನಿಧಿಯ ಲೆಕ್ಕ ಶೀರ್ಷಿಕೆ 2245-80-102-0-01- 059 ರಲ್ಲಿ ಹಾಗೂ ಲೆಕ್ಕ ಶೀರ್ಷಿಕೆ 2245-80-102-0-01-140 ರಲ್ಲಿ ಲಭ್ಯವಿರುವ ಅನುದಾನದಿಂದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅನುದಾನ ಬಿಡುಗಡೆಗೊಳಿಸಲು ಸರ್ಕಾರವು ತೀರ್ಮಾನಿಸಿ ಈ ಕೆಳಕಂಡಂತೆ ಆದೇಶಿಸಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಭಾರತ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿರುವ ಸನ್ನದ್ಧತೆ ಮತ್ತು ಸಾಮರ್ಥ್ಯಾಭಿವೃದ್ಧಿ ಮಾರ್ಗಸೂಚಿಯನ್ವಯ ಸನ್ನದ್ಧತೆ ಮತ್ತು ಸಾಮರ್ಥ್ಯಾಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರೂ. 25.00 ಕೋಟಿಗಳನ್ನು ನಿರ್ದೇಶಕರು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ರವರಿಗೆ ಲೆಕ್ಕ ಶೀರ್ಷಿಕೆ 2245-80-102-0-01-051 ರಲ್ಲಿ ಹಾಗೂ ಮುಂದಿನ ದಿನಗಳಲ್ಲಿ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ನಿಯಮಾನುಸಾರ ತಕ್ಷಣ ಸ್ಪಂದಿಸಲು ಭಾರತ ಸರ್ಕಾರದ ಗ್ರಹ ಮಂತ್ರಾಲಯವು ಹೊರಡಿಸಿರುವ ಮಾರ್ಗಸೂಚಿಗಳನ್ವಯ ಪರಿಹಾರವನ್ನು ಪಾವತಿಸಲು ಹಾಗೂ ತುರ್ತು ಕ್ರಮಗಳನ್ನು ಕೈಗೊಳ್ಳಲು ಅನುವಾಗುವಂತೆ ಲೆಕ್ಕ ಶೀರ್ಷಿಕೆ 2245-80-102-0-01-059 ರಲ್ಲಿ ಹಾಗೂ ಲೆಕ್ಕ ಶೀರ್ಷಿಕೆ 2245-80-102-0-01-140 ರಲ್ಲಿ ಲಭ್ಯವಿರುವ ಅನುದಾನದಿಂದ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಕೆಳಗಿನ ಷರತ್ತುಗಳ ಪಾಲನೆಗೊಳಪಟ್ಟು ಅನುದಾನ ಬಿಡುಗಡೆ ಮಾಡಿ ಆದೇಶಿಸಿದೆ.

ಇದನ್ನೂ ನೋಡಿ: ತರಬೇತಿ! ತರಬೇತಿ! ಕಲಿಸಲಾಗದ ಅಸಹಾಯಕ ಸ್ಥಿತಿಯಲ್ಲಿ ಶಿಕ್ಷಕ! – ಸಿ.ಆರ್.‌ಬಾಬುಖಾನ್‌ ಮತ್ತು ಗುರುರಾಜ ದೇಸಾಯಿ ಮಾತುಕತೆ

Donate Janashakthi Media

Leave a Reply

Your email address will not be published. Required fields are marked *