ಕೋಲಾರ ಜ 07 : ರಾಜ್ಯದಲ್ಲಿ ನೂತನವಾಗಿ ಹೊರಡಿಸುವ ಗೋ ಹತ್ಯೆ ನಿಷೇದದ ಕಾಯದೆಯ ಸುಗ್ರಿವಾಜ್ಞೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಗುರುವಾರ ನಗರದ ಮೆಕ್ಕೆ ವೃತ್ತದಲ್ಲಿ ಮಾನವ ಸರಪಳಿ ನಡೆಸಿ ಸುಗ್ರಿವಾಜ್ಞೆ ಪ್ರತಿಯನ್ನು ಸುಟ್ಟು ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಜಾನುವಾರು ಹತ್ಯೆ ಪ್ರತಿಭಂದಕ ಮತ್ತು ಸಂರಕ್ಷಣಾ ೨೦೨೦ ಕಾಯ್ದೆಯನ್ನು ಸುಗ್ರಿವಾಜ್ಞೆ ಮೂಲಕ ಜಾರಿ ಮಾಡಲು ಹೊರಟಿರುವುದು ಪ್ರಜಾಪ್ರಭುತ್ವದ ವಿರೋಧಿ ಕ್ರಮವಾಗಿದೆ ಈ ಕಾಯ್ದೆಯಿಂದ ಹೈನುಗಾರಿಕೆಯನ್ನೇ ಜೀವಾಳವಾಗಿಸಿಕೊಂಡಿರುವ ಕುಟುಂಬಗಳ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬೀಳಲಿದೆ ಜಿಲ್ಲೆಯಲ್ಲಿ ರೈತರು ಹೈನುಗಾರಿಕೆಯನ್ನು ಉಪಕಸುಬನ್ನಾಗಿಸಿ ಸಾಕಷ್ಟು ಕುಟುಂಬಗಳು ಅವಲಂಭಿಸಿ ಜೀವನ ನಡೆಸುತ್ತಿವೆ ಹೀಗಿರುವಾಗಿ ಅನುಪಯುಕ್ತ ಜಾನುವಾರುಗಳು, ಬಂಜೇತನದ ರಾಸುಗಳು, ಗಂಡು ಕರುಗಳನ್ನು ಮಾರಾಟದಿಂದ ಅಲ್ಪಸ್ವಲ್ಪ ಅರ್ಥಿಕವಾಗಿ ಸಹಾಯವಾಗುತ್ತಿತ್ತು ಇತ್ತೀಚೆಗೆ ರಾಜ್ಯದಲ್ಲಿ ಹೊರಡಿಸಿರುವ ಗೋ ಹತ್ಯೆ ನಿಷೇಧದ ಸುಗ್ರಿವಾಜ್ಞೆಯಿಂದ ರೈತರಿಗೆ ಸಾಕಷ್ಟು ಹೊರೆ ಬೀಳಲಿದೆ ಎಂದು ಅಕ್ರೋಶ ವ್ಯಕ್ತ ಪಡಿಸಿದರು.
ಗೋವಾ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತ ನಡೆಸುತ್ತಿದ್ದು ಅಲ್ಲಿ ಗೋಮಾಂಸ ಕೊರತೆ ಉಂಟಾಗಿ ಗೋವುಗಳು ಮತ್ತು ಗೋಮಾಂಸ ವನ್ನು ಪೂರೈಸುವಂತೆ ದೇಶದ ಇತರೇ ರಾಜ್ಯಗಳನ್ನು ವಿನಂತಿಸುತ್ತಿದ್ದಾರೆ ಆದರೆ ನಮ್ಮ ರಾಜ್ಯದಲ್ಲಿ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ಒಂದೇ ಸಮುದಾಯವನ್ನು ಗುರಿಯನ್ನಾಗಿಸಿಕೊಂಡು ಗೋಹತ್ಯೆ ನಿಷೇಧಿಸಿ ರಾಜ್ಯಪಾಲರ ಮೂಲಕ ಸುಗ್ರಿವಾಜ್ಞೆ ಹೊರಡಿಸುವ ಮೂಲಕ ರೈತರ ಅರ್ಥಿಕತೆ ಹೊಡೆತದ ಜೊತೆಗೆ ದಲಿತರು ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರ ಆಹಾರ ಪದ್ದತಿಯ ಹಕ್ಕಿನ ಮೇಲೆ ದಾಳಿ ನಡೆಸುತ್ತಿದೆ ಎಂದು ಹೇಳಿದರು.
ರೈತರು ಹೈನುಗಾರಿಕೆಯನ್ನು ಬಿಡಬೇಕಾದ ಪರಿಸ್ಥಿತಿಯು ಬರಲಿದೆ. ಈಗಾಗಲೇ ಉತ್ತರಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತಿತರರ ರಾಜ್ಯಗಳಲ್ಲಿ ಇಂತಹ ಕಾಯ್ದೆಯನ್ನು ಜಾರಿ ಮಾಡಿದರಿಂದ ಅಲ್ಲಿನ ರೈತರು ಅನುಪಯುಕ್ತ ಹಸು, ಎಮ್ಮೆಗಳನ್ನು ಬೀದಿಯಲ್ಲಿ ಬಿಟ್ಟಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯದಲ್ಲಿ ಬಂದರೂ ಆಶ್ಛರ್ಯಪಡಬೇಕಾಗಿಲ್ಲ ಎಂದು ಸರಕಾರದ ಕ್ರಮವನ್ನು ಪ್ರಶ್ನಿಸಿದರು
ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡಲು ಕಾರ್ಪೋರೇಟ್ ಕಂಪನಿಗಳು ಗೋವುಗಳನ್ನು ಕಟಾವು ಮಾಡಲು ಅವಕಾಶ ಕಲ್ಪಿಸಿ, ದೇಶೀಯವಾಗಿ ಗೋವುಗಳನ್ನು ಕಟಾವು ಮಾಡಲು ಅವಕಾಶ ನಿರಾಕರಿಸುತ್ತಿರುವುದರ ಹಿಂದೆ ಇವರ ಕೀಳು ಮಟ್ಟದ ರಾಜಕೀಯ ಇದೆ ರೈತರ ಹಿತ ಕಾಯುವ ನೆಪದಲ್ಲಿ ಗೋಹತ್ಯೆ ನಿಷೇದದ ಸುಗ್ರಿವಾಜ್ಞೆ ಹೊರಡಿಸಿರುವ ಬಿಜೆಪಿ ಸರ್ಕಾರವು ಈ ಕೂಡಲೇ ಕಾಯ್ದೆಯನ್ನು ವಾಪಸ್ ಪಡೆಯಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಪತ್ರಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಿಐಟಿಯು ಮುಖಂಡ ಗಾಂಧಿನಗರ ನಾರಾಯಣಸ್ವಾಮಿ, ನಗರಸಭೆ ಸದಸ್ಯ ಅಂಬರೀಷ್, ಡಿಎಸ್ಎಸ್ ವಕ್ಕಲೇರಿ ರಾಜಪ್ಪ, ರೈತ ಸಂಘಟನೆಯ ಅಬ್ಬಣಿ ಶಿವಪ್ಪ, ರಾಮೇಗೌಡ, ಶ್ರೀನಿವಾಸಗೌಡ ಕೆಪಿಆರ್ ಎಸ್ ಟಿ.ಎಂ.ವೆಂಕಟೇಶ್, ಎನ್ ಎನ್ ಶ್ರೀರಾಮ್, ದಲಿತ ಸಂಘಟನೆಯ ಮುಂಖಡರಾದ ಐಪಲ್ಲಿ ನಾರಾಯಣಸ್ವಾಮಿ, ಹೂಹಳ್ಳಿ ನಾಗೇಶ್ ನಾಗರಾಜ್ , ಡಿಎಚ್ಎಸ್ ವಿ.ಅಂಬರೀಷ್ ಅಲ್ಪಸಂಖ್ಯಾತ ಮುಖಂಡರಾದ ಅಲ್ಲಾವುದ್ದೀನ್ ಬಾಬು, ಅಫ್ರಜ್, ಶಾಫಿ, ಅಬ್ದುಲ್, ಖಾಧಿರ್ ಪಾಷ, ಮತ್ತಿತರರು ಉಪಸ್ಥಿತರಿದ್ದರು.