ಬೆಂಗಳೂರು ;ಜ.30 :ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಮಹಾತ್ಮಾ ಗಾಂಧಿಯವರ ಹುತಾತ್ಮ ದಿನದ ಭಾಗವಾಗಿ ಕೃಷಿ ಸಂಬಂಧಿತ ಕಾಯ್ದೆಗಳ ರದ್ದತಿಗಾಗಿ, ಸಂಘರ್ಷ ಸಂಕಲ್ಪ ದಿನ, ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕಾರ್ಯಕ್ರಮ ನಡೆಯುತ್ತಿದೆ.
ರೈತರ ಉಪವಾಸ ಸತ್ಯಾಗ್ರಹವನ್ನು ಉದ್ದೇಶಿಸಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಬಡಗಲಪುರ ನಾಗೇಂದ್ರ ಮಾತನಾಡುತ್ತಿದ್ದವೇಳೆ, ಸುವರ್ಣ ಟಿವಿಯ ವರದಿಗಾರರು ವಾಕ್ ಥ್ರೂ ನಡೆಸಲು ಮುಂದಾದರು,
ಬಡಗಲುಪುರ ನಾಗೇಂದ್ರ ಅವರ ಮಾತಿನ ನಂತರ ನೀವು ಮಾಡಬಹುದು ಎಂದು ಹೇಳಿದಾಗಲ್ಲೂ, ಉದ್ದೇಶ ಪೂರ್ವಕವಾಗಿ ವಾಕ್ ತ್ರು ಮಾಡಿದಕ್ಕೆ ಪ್ರತಿಭಟನಾಕಾರರು ವಿರೋಧವನ್ನು ವ್ಯಕ್ತಪಡಿಸಿದರು.
ಪ್ರತಿಭಟನಾ ನಿರತ ಹೋರಾಟಗಾರರು ಗೋದಿಮೀಡಿಯಾಗೆ ಧಿಕ್ಕಾರ, ಗೋದಿಮೀಡಿಯಾಗೆ ಧಿಕ್ಕಾರವೆಂದು ಸುವರ್ಣ ಟಿವಿಯನ್ನು ಬಹಿಷ್ಕರಿಸಿದರು.
ಇದನ್ನು ಓದಿ : ರಾಷ್ಟ್ರವ್ಯಾಪಿ ರೈತರ ಸಾಮೂಹಿಕ ಉಪವಾಸ ಸತ್ಯಾಗ್ರಹ
ನೀವು ಹೋರಾಟದ ದಿಕ್ಕನ್ನು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಿರಿ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.
ನೀವು ರೈತರ ಪರವಾಗಿಲ್, ಇಡೀ ಹೋರಾಟದ ದಿಕ್ಕನ್ನು ತಪ್ಪಿಸಲು ನೀವು ಬಂದಿದ್ದಿರಿ, ನೀವು ಇಲ್ಲಿಂದ ಹೋಗಿ ಎಂದು ಪ್ರತಿಭಟನಾಕಾರರು ಸುವರ್ಣ ಟಿವಿ ವಿರುದ್ದ ಘೋಷಣೆಗಳನ್ನು ಕೂಗಿದರು.