ಗೋಡೆಗಳ ಮೇಲೆ ಕಮಲ ಚಿಹ್ನೆ-ಸಂಸದ ತೇಜಸ್ವಿ ಸೂರ್ಯ ವಿರುದ್ಧ ಕೇಸು: ಬಿಬಿಎಂಪಿ ಎಚ್ಚರಿಕೆ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅನುಮತಿ ಇಲ್ಲದೆ ಅನಾವಶ್ಯಕವಾಗಿ ಸಾರ್ವಜನಿಕ ಸ್ಥಳದ ಗೋಡೆಗಳ ಮೇಲೆ ಚಿತ್ರ ಬಿಡಿಸುತ್ತಿರುವುದು ಕಂಡು ಬಂದಿದ್ದು,‌ ಇದು ಅಪರಾಧವಾಗಿದೆ, ಅವರ ವಿರುದ್ಧ, ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಲಾಗುವುದೆಂದು ಎಚ್ಚರಿಕೆ ನೀಡಿದೆ.

ಸಂಸದ ತೇಜಸ್ವಿ ಸೂರ್ಯ ಗೋಡೆಗಳ ಮೇಲೆ ಕಮಲ ಚಿತ್ರವನ್ನು ಬಿಡಿಸುತ್ತಿರುವ ಛಾಯಾಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು, ಅದನ್ನು ಗಂಭೀರವಾಗಿ ಪರಿಗಣಿಸಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಎಚ್ಚರಿಕೆ ನೀಡಿದೆ.

ಇದನ್ನು ಓದಿ: ಮತದಾರರಿಗೆ ಉಚಿತ ಉಡುಗೊರೆ-ಹಣದ ಆಮಿಷ: ಕಾನೂನು ಕ್ರಮಕ್ಕೆ ಚುನಾವಣಾ ಆಯೋಗ ಸೂಚನೆ

ತೇಜಸ್ವಿ ಸೂರ್ಯ ಜನವರಿ 31ರಂದು ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೋಗಳನ್ನು ಹಂಚಿಕೊಂಡಿದ್ದು, ಇದೀಗ ಅದು ಚರ್ಚೆಗೆ ಒಳಪಟ್ಟಿದೆ. ತೇಜಸ್ವಿ ಸೂರ್ಯ ಸಂಸದರಾಗಿ ಸಾರ್ವಜನಿಕ ಗೋಡೆಗಳಲ್ಲಿ ಹಾಳು ಮಾಡುತ್ತಿರುವುದರ ಬಗ್ಗೆ ಸರಿ-ತಪ್ಪು ಚರ್ಚೆ ಶುರುವಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ದಾಖಲಿಸಬೇಕೆಂಬುದು ಬಹುತೇಕರ ಆಗ್ರಹವಾಗಿದೆ.

ಬಿಬಿಎಂಪಿ ವಿಶೇಷ ಆಯುಕ್ತ ಜಯರಾಮ್ ರಾಯಪುರ, ದಕ್ಷಿಣ ವಲಯದಲ್ಲಿ ಗೋಡೆ ಮೇಲೆ ಕಮಲ ಚಿತ್ರ ಬಿಡಿಸುತ್ತಿರುವುದು ಬಿಬಿಎಂಪಿ ಗಮನಕ್ಕೆ ಬಂದಿದೆ. ಈ ಬಗ್ಗೆ ನಾವು ಸುಮೋಟೋ ಕೇಸು ದಾಖಲು ಮಾಡುತ್ತೇವೆ. ಯಾರೇ ಆಗಲಿ ಈ ರೀತಿಯ ಕೃತ್ಯ ಮಾಡಿದರೆ ಅದು ಅಪರಾಧ ಕೃತ್ಯವಾಗುತ್ತದೆ ಎಂದಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *