ಪುತ್ತೂರು: ಪುತ್ತೂರು ಪಡೀಲ್ ನಲ್ಲಿರುವ ಬಾಲಕೀಯರ ಹಾಸ್ಟೆಲ್ ಒಳಗೆ ಆಗಂತುಕ ಓರ್ವ ನುಗ್ಗಿದ ಘಟನೆ ನಡೆದಿದ್ದು ದೂರು ನೀಡಿದ್ದರೂ ಪರಿಸ್ಥಿತಿಯ ಗಂಭೀರತೆ ಅರಿಯದೆ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ನುಗ್ಗಿದ
ಈ ಘಟನೆ ನವಬರ್ 6 ರಂದು ನಡೆದಿದ್ದು, ಬಾಲಕಿಯರೇ ಇರುವ ಹಾಸ್ಟೆಲ್ ಗೆ ಅಪರಿಚಿತ ವ್ಯಕ್ತಿಯೋರ್ವನು ನುಗ್ಗಿದ್ದಾನೆ. ಹಾಸ್ಟೆಲ್‌ನ ಸಿಸಿ ಕಾ ಮಾರಾದಲ್ಲಿ ಆಗಂತುಕನ ಚಲನವಲನ ದಾಖಲಾಗಿದೆ. ಮಧ್ಯ ರಾತ್ರಿ ಸುಮಾರು 2.30 ರಿಂದ 3. ರ ವರೆಗೆ ಈ ಆಗಂತುಕ ಹಾಸ್ಟೆಲ್ ಒಳಗೇ ಇದ್ದ ಎನ್ನಲಾಗಿದೆ.
ಇದನ್ನೂ ಓದಿ: ಟ್ರಂಪ್ ಮತ್ತೆ ಅಧ್ಯಕ್ಷ : ಅಮೆರಿಕನ್ನರು ‘ಮಗ’ನಿಗೆ ಮಣೆ ಹಾಕಿ, ಮಗಳನ್ನು ಮನೆಗೆ ಕಳಿಸಿದ್ದು ಯಾಕೆ? | ಭಾಗ 2
ಆಗಂತುಕನ ಚಲನವಲನವನ್ನು ಹಾಸ್ಟೆಲ್ ಬಾಲಕಿಯೋರ್ವಳು ಧೈರ್ಯ ಮಾಡಿ ವಿಡಿಯೋ ಕೂಡ ಮಾಡಿದ್ದಾಳೆ ಮತ್ತು ಹಾಸ್ಟೆಲ್ ನ ಮೇಲ್ವಿಚಾರಕಿಗೆ ಮಾಹಿತಿ ನೀಡಿದ್ದಾಳೆ. ಬಳಿಕ ಹಾಸ್ಟೆಲ್ ಸಿಸಿ ಕ್ಯಾಮಾರಾ ಪರಿಶೀಲಿಸಿದ ಹಾಸ್ಟೆಲ್ ವಾರ್ಡನ್ ಪುತ್ತೂರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆದ್ರೆ ಇದರ ಗಂಭೀರತೆ ಅರಿಯದ ಪುತ್ತೂರು ಮಹಿಳಾ ಠಾಣೆ ಪೊಲೀಸರು ಪ್ರಕರಣ ದಾಖಲಿಸಲು ಉದಾಸೀನತೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಬಳಿಕ ಉನ್ನತ ಅಧಿಕಾರಿಗಳ ಗಮನಕ್ಕೆ ಈ ವಿಷಯವನ್ನು ತರಲಾಗಿದ್ದು ನ.10 ರಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರ ನಿರ್ಲಕ್ಷಕ್ಕೆ, ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇದನ್ನೂ ನೋಡಿ: ದೇಶದಲ್ಲಿ ಯಾರೂ ಸಂತೋಷವಾಗಿಲ್ಲ: ನಟ ಪ್ರಕಾಶ್ ರೈ Janashakthi Media