ಅಮ್ಮಾನ್: ಕಳೆದ ಒಂದು ತಿಂಗಳಿನಿಂದ ಇಸ್ರೇಲ್ ನಡೆಸುತ್ತಿರುವ ಪ್ಯಾಲೆಸ್ತೀನಿಯರ ಹತ್ಯಾಕಾಂಡದ ತೀವ್ರತೆ ಹೆಚ್ಚುತ್ತಿದೆ. ಆಸ್ಪತ್ರೆಗಳ ಮೇಲೆ ದಾಳಿ ನಡೆಸುತ್ತಿರುವ ಬಗ್ಗೆ ವಿಶ್ವದಾದ್ಯಂತ ಆಕ್ರೋಶದ ನಡುವೆಯು, ಇಸ್ರೇಲ್ ಯುದ್ಧ ನಿಯಮವನ್ನು ಧಿಕ್ಕರಿಸಿ, ಗಾಝಾದ ಅತಿದೊಡ್ಡ ವೈದ್ಯಕೀಯ ಸೌಲಭ್ಯವಾದ ಅಲ್-ಶಿಫಾಗೆ ತನ್ನ ಟ್ಯಾಂಕ್‌ಗಳು ಮತ್ತು ಸೈನಿಕರನ್ನು ನುಗ್ಗಿಸಿದೆ ಎಂದು ವರದಿಯಾಗಿದೆ.
ಇಸ್ರೇಲ್‌ನ 6 ಟ್ಯಾಂಕ್‌ಗಳು ಮತ್ತು 100 ಕಮಾಂಡರ್‌ಗಳು ರಾತ್ರಿಯಿಡೀ ಆಸ್ಪತ್ರೆಯ ಆವರಣವನ್ನು ಪ್ರವೇಶಿಸಿದ್ದಾರೆ. ಸೇನಾ ಸಿಬ್ಬಂದಿ ಆಸ್ಪತ್ರೆಯ ಪ್ರತಿಯೊಂದು ಕೊಠಡಿಗೆ ತೆರಳಿ ಶಸ್ತ್ರಚಿಕಿತ್ಸಾ ಮತ್ತು ತುರ್ತು ವಿಭಾಗಗಳನ್ನು ಹೊರತುಪಡಿಸಿ 16ರಿಂದ 40 ವರ್ಷ ವಯಸ್ಸಿನ ಎಲ್ಲ ಪುರುಷರನ್ನು ಆಸ್ಪತ್ರೆಯ ಕಟ್ಟಡವನ್ನು ಬಿಟ್ಟು ಆಸ್ಪತ್ರೆಯ ಅಂಗಳದಲ್ಲಿ ಉಳಿಯಲು ಹೇಳಿದ್ದಾರೆ ಎಂದು ವರದಿಯಾಗದೆ. ಅಲ್ಲದೆ, ಒಳಗೆ ಉಳಿದಿದ್ದವರನ್ನು ಹೊರಗೆ ಬರುವಂತೆ ಒತ್ತಾಯಿಸಲು ಇಸ್ರೇಲ್ ಸೇನೆಯು ಗಾಳಿಯಲ್ಲಿ ಗುಂಡು ಹಾರಿಸಿದ್ದಾಗಿ ವರದಿಗಳು ಹೇಳಿವೆ. ಗಾಝಾ
ಇದನ್ನೂ ಓದಿ: ಪೋಕ್ಸೋ ಪ್ರಕರಣ| 14 ತಿಂಗಳ ಜೈಲು ವಾಸದ ಬಳಿಕ ಮುರುಘಾ ಸ್ವಾಮಿಗೆ ಜಾಮೀನು ಮಂಜೂರು
ಹಮಾಸ್ ಆಸ್ಪತ್ರೆಯೊಳಗೆ ತನ್ನ ಕೇಂದ್ರವನ್ನು ನಿರ್ವಹಿಸುತ್ತಿದೆ ಮತ್ತು ಸಿಸಿಟಿವಿ ಕ್ಯಾಮೆರಾಗಳು ಇಲ್ಲದಿರುವ ಸ್ಥಳಗಳಲ್ಲಿ ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸಲಾಗಿದೆ ಎಂಬ ಗುಪ್ತಚರ ಹಿನ್ನಲೆಯಲ್ಲಿ ಈ ದಾಳಿ ನಡೆಸಿದ್ದೇವೆ ಎಂದು ಇಸ್ರೇಲಿ ಸೇನೆ ಹೇಳಿದೆ. ಗಾಝಾ
ಇಸ್ರೇಲ್ ಸೇನೆಯು ಆಸ್ಪತ್ರೆಯೊಳಗೆ ಗುಂಡಿನ ದಾಳಿ ನಡೆಸಿದೆ ಎಂದು ಪ್ಯಾಲೇಸ್ಟಿನಿಯನ್ ಸುದ್ದಿ ಸಂಸ್ಥೆ ವಾಫಾ ವರದಿ ಹೇಳಿದೆ. ಆಸ್ಪತ್ರೆಯಲ್ಲಿ ಆಶ್ರಯ ಪಡೆದ ಪುರುಷರನ್ನು ಇಸ್ರೇಲ್ ಸೇನೆಯು ವಿವಸ್ತ್ರಗೊಳಿಸಿ ನಗ್ನವಾಗಿಸಿ ಕ್ರೂರವಾಗಿ ಥಳಿಸಿದೆ ಎಂದು ಆಸ್ಪತ್ರೆಯ ಉದ್ಯೋಗಿ ಒಮರ್ ಶಕೌತ್ ಹೇಳಿದ್ದಾರೆ ಎಂದು ವರದಿ ಹೇಳಿದೆ. ಗಾಝಾ
ಪ್ರಸ್ತುತ 700 ರೋಗಿಗಳು ಆಸ್ಪತ್ರೆಯಲ್ಲಿ ಉಳಿದುಕೊಂಡಿದ್ದು, ಅವರಲ್ಲಿ 100 ಮಂದಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ತಮ್ಮ ಕೊನೆಯ ಉಸಿರು ಇರುವವರೆಗೂ ರೋಗಿಗಳ ಬೆಂಬಲಕ್ಕೆ ನಿಲ್ಲುವುದಾಗಿ ಆಸ್ಪತ್ರೆಯ ವೈದ್ಯರು ಹೇಳಿದ್ದಾರೆ.
ಈ ನಡುವೆ ಆಸ್ಪತ್ರೆಗಳು ಯುದ್ಧಭೂಮಿಗಳಲ್ಲ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ. ಆಸ್ಪತ್ರೆಯ ಮೇಲೆ ಇಸ್ರೇಲ್‌ನ ಆಕ್ರಮಣವು ಮಾನವೀಯತೆಯ ವಿರುದ್ಧದ ಅಪರಾಧ ಎಂದು ಹಮಾಸ್ ಮತ್ತು ಪ್ಯಾಲೆಸ್ಟೈನ್ ಪ್ರಾಧಿಕಾರ ಹೇಳಿದೆ. ಈ ಮಧ್ಯೆ ಇಸ್ರೇಲ್ ಆಸ್ಪತ್ರೆಗೆ ನೆರವು ನೀಡುವುದಾಗಿ ಹೇಳಿದ್ದು, ವ್ಯಾಪಕ ವ್ಯಂಗಕ್ಕೀಡಾಗಿದೆ.
ವಿಡಿಯೊ ನೋಡಿ: ಗೂಗಲ್ ಮತ್ತು ಯುಟ್ಯೂಬ್ ಹ್ಯಾಕ್ ಆಗದಂತೆ ಎಚ್ಚರಿಕೆ ವಹಿಸೋದು ಹೇಗೆ? – ಡಾ. ಎನ್. ಬಿ. ಶ್ರೀಧರ್