ಹೊಸದಿಲ್ಲಿ: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿದ್ದ ಹೋರಾಟಗಾರ ಗೌತಮ್ ನವ್ಲಾಖ ಅವರಿಗೆ, ಈಗ ನಾಲ್ಕು ವರ್ಷಗಳ ನಂತರ ಸುಪ್ರೀಂ ಕೋರ್ಟ್ ಜಾಮೀನು ಮಂಜೂರು ಮಾಡಲಾಗಿದೆ.
ಕಳೆದ ನಾಲ್ಕು ವರ್ಷಗಳಿಂದ ಗೌತಮ್ ನವ್ಲಾಖ ಬಂಧನದಲ್ಲಿದ್ದರು. ನವ್ಲಾಖ ಅವರ ವಯಸ್ಸು ಹಾಗೂ ವಿಚಾರಣೆ ಸದ್ಯದಲ್ಲೇ ಮುಗಿಯುವ ಲಕ್ಷಣವಿಲ್ಲ ಎಂಬ ಅಂಶಗಳನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದೆ. ಈ ಪ್ರಕರಣದ ಸಹ ಆರೋಪಿಗಳಿಗೂ ಜಾಮೀನು ಮಂಜೂರು ಮಾಡಲಾಗಿದೆ ಎಂದೂ ಸುಪ್ರೀಂ ಕೋರ್ಟ್ ಹೇಳಿದೆ.
ಇದನ್ನು ಓದಿ : ಡೋನೆಷನ್ ಹಾವಳಿ ತಡೆಗಟ್ಟಿ, ಸರಕಾರದ ನಿಯಮ ಗಾಳಿಗೆ ತೂರಿದ ಖಾಸಗಿ ಶಾಲೆಗಳ ಮಾನ್ಯತೆ ರದ್ದಿಗೆ ಎಸ್.ಎಫ್.ಐ ಆಗ್ರಹ
ಗೃಹ ಬಂಧನದಲ್ಲಿದ್ದಾಗ ನವ್ಲಾಖ, ತಾನು ಪಡೆದ ಭದ್ರತೆಗಾಗಿ ನವ್ಲಾಖ ರೂ. 20 ಲಕ್ಷವನ್ನು ಭದ್ರತಾ ವೆಚ್ಚವನ್ನಾಗಿ ಪಾವತಿಸಬೇಕು ಎಂದೂ ಸುಪ್ರೀಂ ಕೋರ್ಟ್ ಸೂಚಿಸಿದೆ.
ಎಪ್ರಿಲ್ 14, 2020ರಿಂದ ನವಲ್ಖಾ ಬಂಧನದಲ್ಲಿದ್ದು, ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶದನ್ವಯ ಅವರನ್ನು ಅವರ ನವಿ ಮುಂಬೈ ನಿವಾಸದಲ್ಲಿ ಗೃಹ ಬಂಧನದಲ್ಲಿಡಲಾಗಿತ್ತು. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಅವರಿಗೆ ಬಾಂಬೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತಾದರೂ, ರಾಷ್ಟ್ರೀಯ ತನಿಖಾ ದಳದ ಮನವಿಯ ಮೇರೆಗೆ ತನ್ನ ಆದೇಶದ ಮೇಲೆ ಮೂರು ವಾರಗಳ ತಡೆ ಹೇರಿತ್ತು. ಜನವರಿ 5ರಂದು ನವ್ಲಾಖ ಅವರಿಗೆ ಜಾಮೀನು ಮಂಜೂರು ಮಾಡಿದ್ದ ತನ್ನ ಆದೇಶದ ಮೇಲೆ ಬಾಂಬೆ ಹೈಕೋರ್ಟ್ ಹೇರಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ವಿಸ್ತರಿಸಿತ್ತು.
ಇದನ್ನು ನೋಡಿ : ಚಪಾತಿ ನಂಗೆ ಅಲರ್ಜಿ ಅಂತಾ ಗೊತ್ತಾಗಿದ್ದೆ ಡಾಕ್ಟರ್ ಹತ್ರ ಹೋದಮೇಲೆ! – ರವೀಂದ್ರ ಭಟ್ಟ ಮಾತುಗಳು Janashakthi Media