ಕಲ್ಲಿದ್ದಲು ಗಣಿಯೊಳಗೆ ಅನಿಲ ಸೋರಿಕೆ: 11ಮಂದಿ‌ಯ ಸಾವು

ಬಲೂಚಿಸ್ತಾನ: ಕಲ್ಲಿದ್ದಲು ಗಣಿಯೊಳಗೆ ಮೀಥೇನ್ ಅನಿಲ ಸೋರಿಕೆಯಾಗಿ ಉಸಿರಾಟದ ತೊಂದರೆಯಿಂದಾಗಿ 11 ಮಂದಿ ಮೃತಪಟ್ಟಿರುವ ಘಟನೆ ಕ್ವೆಟ್ಟಾದಿಂದ 50 ಕಿ.ಮೀ ದೂರದಲ್ಲಿರುವ ಸಂಜ್ದಿ ಪ್ರದೇಶದಲ್ಲಿ ನಡೆದಿದೆ.

ಈ ದುರಂತದಲ್ಲಿ ಒಂಬತ್ತು ಕಲ್ಲಿದ್ದಲು ಗಣಿ ಕಾರ್ಮಿಕರು, ಕಲ್ಲಿದ್ದಲು ಕಂಪನಿ ವ್ಯವಸ್ಥಾಪಕ ಮತ್ತು ಗುತ್ತಿಗೆದಾರ ಸಾವನ್ನಪ್ಪಿದ್ದಾರೆ. ಕಲ್ಲಿದ್ದಲು ಗಣಿ ಕಾರ್ಮಿಕರು ಗಣಿಯಲ್ಲಿ ಸುಮಾರು 1,500 ಅಡಿ ಆಳದಲ್ಲಿ ಕೆಲಸ ಮಾಡುತ್ತಿದ್ದಾಗ ಅನಿಲ ಸೋರಿಕೆಯಿಂದಾಗಿ ಹಲವರು ಗಣಿ ಕಾರ್ಮಿಕರು ಪ್ರಜ್ಞೆ ತಪ್ಪಿಬಿದ್ದಿದ್ದಾರೆಂದು ಡಾನ್ ಪತ್ರಿ ವರದಿ ಮಾಡಿದೆ.

ಇದನ್ನೂ ಓದಿ: ಅಭ್ಯರ್ಥಿ ಅಜಯ್ ರೈ ವಿರುದ್ಧ ಮೋದಿ ಕೇವಲ 619 ಮತಗಳ ಮುನ್ನಡೆ

ದುರಂತದಲ್ಲಿ ಮತ್ತಷ್ಟು ಸಾವು-ನೋವು ಹೆಚ್ಚಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇನ್ನು ಪ್ರಜ್ಞೆ ತಪ್ಪಿ ಬಿದ್ದ ಕೆಲವು ಕಾರ್ಮಿಕರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ನೋಡಿ: ಇಂದಿನ ಬಂಡವಾಳಶಾಹಿಯನ್ನು ಅರ್ಥಮಾಡಿಕೊಳ್ಳಲು ಬಂಡವಾಳ ಪುಸ್ತಕವನ್ನು ಓದಲೇಬೇಕು -ಡಾ. ಜಿ.ರಾಮಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *