‘ಗಾರ್ಗಿ’ ಮೂಲಕ ಕನ್ನಡಕ್ಕೆ ಕಾಲಿಟ್ಟ ಸಾಯಿಪಲ್ಲವಿ

ದಕ್ಷಿಣ ಭಾರತ ಸಿನಿರಂಗದಲ್ಲಿ ʼಮಲರ್‌ʼ ಎಂದೇ  ಖ್ಯಾತಿ ಗಳಿಸಿರುವ ಸಾಯಿ ಪಲ್ಲವಿ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಅವರ ಹೊಸ ಚಿತ್ರ ‘ಗಾರ್ಗಿ’ ಕನ್ನಡದಲ್ಲಿ ಮೂಡಿಬರುತ್ತಿದೆ. ‘ಗಾರ್ಗಿ ಮೇಕಿಂಗ್ ವಿಡಿಯೋ’ವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಜಿ. ಗೌತಮ್ ರಾಮಚಂದ್ರನ್ ನಿರ್ದೇಶಿಸಿರುವ ಈ ಚಿತ್ರ ಕನ್ನಡದಲ್ಲಿ ಮಾತ್ರವಲ್ಲದೆ ಇನ್ನು 4 ಭಾಷೆಗಳಲ್ಲಿ ತೆರೆಕಾಣುತ್ತಿದೆ. ಹಲವು ಭಾಷೆಗಳಲ್ಲಿ ತೆರೆಗೆ ಬರುತ್ತಿರುವ “ಗಾರ್ಗಿ” ಚಿತ್ರಕ್ಕೆ ಸ್ವತಃ ಸಾಯಿಪಲ್ಲವಿ ಕನ್ನಡದಲ್ಲಿ ಧ್ವನಿಯನ್ನು ನೀಡಲಿದ್ದಾರೆ.

ʻಶ್ಯಾಮ್ ಸಿಂಗ್ ರಾಯ್ʼ ಚಿತ್ರದ ಯಶಸ್ಸಿನ ನಂತರ ಸಾಯಿಪಲ್ಲವಿ ತಮ್ಮ ಹುಟ್ಟಿದ ದಿನದಂದು ಮತ್ತೊದು ಚಿತ್ರದ ಬಗ್ಗೆ ತಮ್ಮ ಕುತೂಹಲ ವ್ಯಕ್ತಪಡಿಸಿದ್ದಾರೆ. ಗಾರ್ಗಿ ಚಿತ್ರವು ಮಹಿಳಾ ಪ್ರಧಾನ ಸಿನಿಮಾವಾಗಿದ್ದು ನ್ಯಾಯಕ್ಕಾಗಿ ಹೋರಾಡುವ ಮಹಿಳೆಯಾಗಿ ಸಾಯಿಪಲ್ಲವಿ ಕಾಣಿಸಿಕೊಳ್ಳಲ್ಲಿದ್ದಾರೆ. ಈ ಚಿತ್ರವು ಕನ್ನಡ, ಮಲಯಾಳಂ, ತೆಲುಗು, ತಮಿಳಿನಲ್ಲಿ ತಯಾರಾಗುತ್ತಿದೆ.

ಈ ಸಿನಿಮಾ ಬಗ್ಗೆ ಮಾತಾಡಲು ನಾನು ಹಲವು ದಿನಗಳಿಂದ ಕಾದಿದ್ದೆ, ಅದು ನನ್ನ ಹುಟ್ಟಿದ ದಿನದಂದೆ ಈ ಚಿತ್ರದ ಬಗ್ಗೆ ಹಂಚಿಕೊಳ್ಳಲು ಹೆಮ್ಮೆ ಪಡುತ್ತೇನೆಂದು ಈ ಚಿತ್ರಕ್ಕೆ ನಿಮ್ಮೆಲ್ಲರ ಆರ್ಶೀವಾದವಿರಲಿ ಎಂದು ಚಿತ್ರದ ಮೊದಲ ‘ಪೋಸ್ಟ್’ ಹಾಗೂ ಕನ್ನಡ-ತೆಲುಗುವಿನ ‘ವಾಯ್ಸ್ ಡಬ್ಬಿಂಗ್’ ಮಾಡುತ್ತಿರುವ ‘ವಿಡಿಯೋ ಶೇರ್’ ಮಾಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *