ಕೆರೆಯಲ್ಲಿ ಕರಗದ ಗಣೇಶ : ಮೂರ್ತಿಗಳನ್ನು ಒಡೆದು ತೆರವುಗೊಳಿಸಬೇಕಾದ ಅನಿವಾರ್ಯತೆ

ಬೆಂಗಳೂರು: ಗಣೇಶ ಹಬ್ಬದ ನಂತರದಲ್ಲಿ ಕೆರೆಯನ್ನು ಸ್ವಚ್ಛಗೊಳಿಸಬೇಕಾದ ಸಂದರ್ಭದಲ್ಲಿ ಪಿಒಪಿ ಸೇರಿದಂತೆ ಇತರೆ ವಸ್ತುಗಳಿಂದ ಮಾಡಿರುವ ಬೃಹತ್‌ ಗಾತ್ರದ ಗಣೇಶ ಮೂರ್ತಿಗಳು ಕೆರೆಯ ನೀರಿನಲ್ಲೂ ಕರಗದೇ ಇರುವ ಕಾರಣ ಮೂರ್ತಿಗಳನ್ನು ಒಡೆದು ತೆರವುಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಗಣೇಶ

ಹಲವು ರೀತಿಯ ಅರಿವಿನ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಯಲ್ಲೇ ಹಾಗೂ ಕೆಲವೊಂದು ಕಡೆ ಪಿಒಪಿ ಮೂರ್ತಿಗಳ ದಾಸ್ತಾನನ್ನು ಜಪ್ತಿ ಮಾಡಲಾಗಿತ್ತು. ಆದರೂ, ನಗರದಲ್ಲಿ ಪಿಒಪಿ ಮೂರ್ತಿಗಳನ್ನು ಪೂಜೆಗೆ ಬಳಸುವುದು ಈ ಬಾರಿಯೂ ನಿಲ್ಲಲಿಲ್ಲ. ‘ಪರಿಸರಸ್ನೇಹಿ ಮೂರ್ತಿಗಳನ್ನು ಪೂಜಿಸಿ’ ಎಂದು ಬಿಬಿಎಂಪಿ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ, ಕೆಲವು ಸಂಘ–ಸಂಸ್ಥೆಗಳೂ ಇದಕ್ಕೆ ಮನ್ನಣೆ ನೀಡುತ್ತಿಲ್ಲ. ಆದ್ದರಿಂದಲೇ, ಕೆರೆಗಳು, ಕಲ್ಯಾಣಿಗಳ ಬಳಿ ಮೂರ್ತಿಗಳ ಭಗ್ನಾವಶೇಷಗಳು ಕಾಣುತ್ತಿವೆ.

ಇದನ್ನು ಓದಿ : ಗಣಪತಿ ಮೂರ್ತಿ ವಿಸರ್ಜನೆ ವೇಳೆ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತ

ಹಲಸೂರು ಕೆರೆಯಲ್ಲಿ ವಿಸರ್ಜನೆಯಾಗಿರುವ ದೊಡ್ಡ ಮೂರ್ತಿಗಳು ಕರಗಿಲ್ಲ. ಪಿಒಪಿ ಸೇರಿದಂತೆ ನಾರು, ಕಟ್ಟಿಗೆಯಂತಹ ಗಟ್ಟಿ ವಸ್ತುಗಳನ್ನು ಬಳಸಿ ತಯಾರಿಸಿರುವ ಮೂರ್ತಿಗಳಿವು. ಈ ಕರಗದ ಮೂರ್ತಿಗಳನ್ನು ಹೊರಕ್ಕೆ ತೆಗೆದಿರುವ ಬಿಬಿಎಂಪಿ ಸಿಬ್ಬಂದಿ, ಅವುಗಳ ಭಗ್ನಾವಶೇಷಗಳನ್ನು ವಿಂಗಡಿಸಲು ಹರಸಾಹಸ ಪಟ್ಟರು. ಕೊನೆಗೆ ಕೊಡಲಿ, ಸುತ್ತಿಗೆ, ಕ್ರೇನ್‌ಗಳ ಮೊರೆ ಹೊಕ್ಕರು. ಕರಗದ ಮೂರ್ತಿಗಳನ್ನು ಒಡೆಯಲು ಸ್ವಚ್ಛತಾ ಸಿಬ್ಬಂದಿ ಸುತ್ತಿಗೆಗಳನ್ನು ಬಳಸಿದರು. ಅದರಿಂದಲೂ ಪುಡಿಯಾಗದ ಮೂರ್ತಿಗಳನ್ನು ಕ್ರೇನ್‌ಗಳ ಸಹಾಯದಿಂದ ಮೇಲಕ್ಕೆ ಎತ್ತಿ ಕೆಳಗೆ ಬಿಸಾಡಿದರು. ಆದರೂ ಅವು ಒಡೆದುಹೋಗಲಿಲ್ಲ. ಕೊಡಲಿಯಿಂದ ಕಟ್ಟಿಗೆ ಕಡಿಯುವಂತೆ ಸಿಗಿದರು. ಇಂತಹ ಹಲವು ರೀತಿಯ ಪ್ರಯತ್ನಗಳನ್ನು ಮಾಡಿ ತ್ಯಾಜ್ಯಗಳನ್ನು ಪ್ರತ್ಯೇಕಿಸಲು ಇನ್ನಿಲ್ಲದಂತೆ ಪ್ರಯತ್ನಪಟ್ಟರು.

‘ಹಲವು ರೀತಿಯ ಅರಿವು ಮೂಡಿಸಿದರೂ ನಾಗರಿಕರು ಪಿಒಪಿ ಹಾಗೂ ಕರಗದ ವಸ್ತುಗಳಿಂದ ತಯಾರಿಸಿದ ಮೂರ್ತಿಗಳನ್ನು ಬಳಸುತ್ತಿದ್ದಾರೆ. ಸ್ಥಾಪನೆ ಹಾಗೂ ವಿಸರ್ಜನೆ ವೇಳೆಯಲ್ಲಿ ವಿರೋಧಿಸಿದರೆ ಧಾರ್ಮಿಕ ಆಚರಣೆಗೆ ಅಡ್ಡಿಯಾಗುತ್ತಾರೆ ಎಂದು ದೂರುತ್ತಾರೆ. ನಾಗರಿಕರು ಅರಿತುಕೊಂಡು ಪರಿಸರಸ್ನೇಹಿ ಮೂರ್ತಿಗಳನ್ನು ಬಳಸಿದರೆ ಇಂತಹ ಭಗ್ನಾವಶೇಷಗಳು ಉಳಿಯುವುದಿಲ್ಲ. ನಾವೂ ಈ ರೀತಿ ಕಷ್ಟಪಡಬೇಕಿಲ್ಲ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಬಿಎಂಪಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಇದನ್ನು ನೋಡಿ : ಬಾಕಿ ವೇತನ ಬಿಡುಗಡೆ ಹಾಗೂ ವೇತನ ಹೆಚ್ಚಳಕ್ಕೆ ಸಾರಿಗೆ ನೌಕರರ ಪಟ್ಟುJanashakthi Media

Donate Janashakthi Media

Leave a Reply

Your email address will not be published. Required fields are marked *