ಜಿ 20 ಶೃಂಗಸಭೆ : ಇಂಡಿಯಾ ಬದಲಿಗೆ ʼಭಾರತ್ʼ ಹೆಸರಿನ ನಾಮಫಲಕ ಪ್ರದರ್ಶನ

ನವದೆಹಲಿ: ಇಂಡಿಯಾ ಹೆಸರು ಬದಲಾವಣೆ ವಿಚಾರ ಕುರಿತು ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿರುವಂತೆಯೇ, ಇದೀಗ ನವದೆಹಲಿಯಲ್ಲಿ ನಡೆಯುತ್ತಿರುವ ಜಿ 20 ಶೃಂಗಸಭೆ ವೇಳೆಯೂ ಇಂಡಿಯಾ ಬದಲಿಗೆ ʼಭಾರತ್ʼ ಎಂಬ ಹಸರು ಪ್ರಸ್ತಾಪವಾಗಿದೆ. ಜಿ 20 ಶೃಂಗಭೆ

ನವದೆಹಲಿಯ ಭಾರತ ಮಂಟಪದಲ್ಲಿ ಶನಿವಾರ ಸೆ- 9 ಆರಂಭವಾಗಿರುವ ಜಿ 20 ಶೃಂಗಸಭೆಯ ಅಧ್ಯಕ್ಷತೆ ವಹಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿದ್ದಾಗ ದೇಶದ ಹೆಸರನ್ನು ʼಭಾರತ್ʼ ಎಂದು ಪ್ರದರ್ಶಿಸಲಾಯಿತು. ಮೈಕ್ನ ನಾಮಫಲಕದಲ್ಲಿಯೂ ಭಾರತ್ ಎಂದು ಬರೆಯಲಾಗಿದೆ.

ಇದನ್ನೂ ಓದಿ:‘ಜಿ20 ಸರ್ವಂ ಮೋದಿ ಮಯಂ!’ | 12ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 963 ಜಾಹಿರಾತು!

ತಮ್ಮ ಉದ್ಘಾಟನಾ ಭಾಷಣಕ್ಕೆ ಮುಂಚಿತವಾಗಿ ಪ್ರಧಾನಿ ಮೋದಿ ಜಿ 20 ಶೃಂಗಸಭೆ ಸ್ಥಳವಾದ ಭಾರತ್ ಮಂಟಪದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಇಂಗ್ಲೆಂಡ್ ಪ್ರಧಾನಿ ರಿಷಿ ಸುನಕ್ ಸೇರಿದಂತೆ ಹಲವು ವಿಶ್ವ ನಾಯಕರನ್ನು ಸ್ವಾಗತಿಸಿದರು.

ಜಿ 20 ಔತಣಕೂಟದ ಆಹ್ವಾನ ಪತ್ರಿಕೆಯಲ್ಲಿ ರಾಷ್ಟ್ರಪತಿಯನ್ನು ʼಪ್ರೆಸಿಡೆಂಟ್ ಆಫ್ ಇಂಡಿಯಾʼ ಬದಲಿಗೆ ʼಪ್ರೆಸಿಡೆಂಟ್ ಆಫ್ ಭಾರತ್ʼ ಎಂದು ಉಲ್ಲೇಖವಾದ ನಂತರ ವಿವಾದಕ್ಕ ಕಾರಣವಾಗಿದೆ. ವಿಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಮೈತ್ರಿ (ಇಂಡಿಯಾ) ಎಂದು ಹೆಸರಿಟ್ಟಿರುವುದರಿಂದ ಹೆಸರು ಬದಲಾವಣೆಗೆ ಸರ್ಕಾರ ನಿರ್ಧರಿಸಿದೆ ಎಂದು ಟೀಕಿಸುತ್ತಿವೆ.

ಕೆಲವು ನಾಯಕರು ʼಇಂಡಿಯಾʼ ಎಂಬ ಇಂಗ್ಲಿಷ್ ಹೆಸರನ್ನು ವಸಾಹತುಶಾಹಿ ಪರಂಪರೆ ಎಂದು ಪ್ರತಿಪಾದಿಸಿದ್ದಾರೆ. ಆದಾಗ್ಯೂ ಸಂವಿಧಾನದಲ್ಲಿ ದೇಶಕ್ಕೆ ಎರಡೂ ಹೆಸರುಗಳನ್ನು ಬಳಸಲಾಗಿದೆ ಎಂದು ಬಿಜೆಪಿಯ ಕೆಲವು ನಾಯಕರು ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *