‘ಜಿ20 ಸರ್ವಂ ಮೋದಿ ಮಯಂ!’ | 12ಕಿ.ಮೀ. ವ್ಯಾಪ್ತಿಯ ರಸ್ತೆಯಲ್ಲಿ 963 ಜಾಹಿರಾತು!

ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜಿ20 ಸಭೆ ಸೆಪ್ಟೆಂಬರ್ 9 ಮತ್ತು 10 ರಂದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ವಿಶ್ವದಾದ್ಯಂತ 40 ದೇಶಗಳ ನಾಯಕರು ಭಾಗವಹಿಸಲಿದ್ದಾರೆ. ಅದಾಗ್ಯೂ ಕಾರ್ಯಕ್ರಮದ ಹಿನ್ನಲೆಯಲ್ಲಿ ಪ್ರಧಾನಿ ಮೋದಿಯ ಚಿತ್ರವಿರುವ ಪೋಸ್ಟರ್‌ಗಳು, ಹೋರ್ಡಿಂಗ್‌ಗಳು, ಬಿಲ್‌ಬೋರ್ಡ್‌ಗಳು ನಗರರಾದ್ಯಂತ ಪ್ರದರ್ಶಿಸಲಾಗಿದೆ ಎಂದು ವರದಿಯಾಗಿದೆ. ಈ ಎಲ್ಲಾ ಪೋಸ್ಟರ್‌ಗಳಲ್ಲಿ ಪ್ರಧಾನಿ ಮೋದಿಯನ್ನು ಬಿಟ್ಟರೆ ಬೇರೆ ಯಾವುದೆ ನಾಯಕರ, ಗಣ್ಯರ ಚಿತ್ರಗಳನ್ನು ಪ್ರದರ್ಶಿಸಲಾಗಿಲ್ಲ ಎಂದು ವರದಿಯಾಗಿದ್ದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಚಿತ್ರವನ್ನು ಕೂಡಾ ಪ್ರದರ್ಶಿಸಲಾಗಿಲ್ಲ ಎಂದು ವರದಿಯಾಗಿದೆ.

ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹಿಡಿದು ಹೋರ್ಡಿಂಗ್‌, ಪೆಟ್ರೋಲ್ ಪಂಪ್‌ಗಳು, ಸಾರ್ವಜನಿಕ ಶೌಚಾಲಯಗಳು, ಮರಗಳು, ಬಸ್ ನಿಲ್ದಾಣಗಳು, ಫ್ಲೈಓವರ್‌ಗಳು, ಬೇಲಿಗಳು ಹಾಗೂ ಮೆಟ್ರೋ ನಿಲ್ದಾಣದ ಮುಂಭಾಗದವರೆಗೆ ಅನೇಕ ಸ್ಥಳಗಳಲ್ಲಿ ಪ್ರಧಾನಿ ಮೋದಿಯ ವಿವಿಧ ಗಾತ್ರಗಳ ಚಿತ್ರಗಳನ್ನು ಪ್ರದರ್ಶನ ಮಾಡಲಾಗಿದೆ.

ಇದನ್ನೂ ಓದಿ: ‘ಮೋದಿ ಹೈ ತೋ ಮನು ಹೈ’ | ಪ್ರಧಾನಿಯನ್ನು ಮನುವಿಗೆ ಹೋಲಿಸಿದ ಕಾಂಗ್ರೆಸ್ ಸಂಸದ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ಐಷಾರಾಮಿ ITC ಮೌರ್ಯ ಮತ್ತು ತಾಜ್ ಪ್ಯಾಲೇಸ್ ಹೋಟೆಲ್‌ಗಳ ನಡುವಿನ 12 ಕಿಮೀ ವಿಸ್ತಾರದ ರಸ್ತೆಯ ಎರಡೂ ಬದಿಗಳಲ್ಲಿ ಕನಿಷ್ಠ 963 ಜಿ20 ಪ್ರಚಾರದ ಜಾಹಿರಾತುಗಳನ್ನು ಹಾಕಲಾಗಿದೆ ಎಂದು ನ್ಯೂಸ್‌ ಲಾಂಡ್ರಿ ಮಾಡಿದೆ. ಇವುಗಳಲ್ಲಿ 236 ಜಾಹಿರಾತುಗಳು ಮೋದಿಯ ಚಿತ್ರವನ್ನು ಹೊಂದಿದೆ ಎಂದು ವರದಿ ಉಲ್ಲೇಖಿಸಿದೆ. ಪ್ರತಿ ಕಿಲೋಮೀಟರ್‌ನಲ್ಲಿ ಬೇರೆ ಬೇರೆ ರೀತಿಯ 80 ಜಾಹಿರಾತುಗಳನ್ನು ಪ್ರದರ್ಶಿಸಲಾಗಿದ್ದು, ಅವುಗಳಲ್ಲಿ ಸುಮಾರು 20 ಮೋದಿ ಚಿತ್ರವನ್ನು ಒಳಗೊಂಡಿದೆ ಎಂದು ವರದಿ ಉಲ್ಲೇಖಿಸಿದೆ.

ಅಮೇರಿಕ ಅಧ್ಯಕ್ಷ ಜೋ ಬಿಡನ್ ಮತ್ತು ಅವರ ದೇಶದ ಇತರ ಪ್ರತಿನಿಧಿಗಳಿಗೆ ಐಟಿಸಿ ಮೌರ್ಯ ಆತಿಥ್ಯ ವಹಿಸಲಿದೆ. ನೆರೆಯ ತಾಜ್ ಪ್ಯಾಲೆಸ್‌ ಚೀನಾದ ನಿಯೋಗ ಸೇರಿದಂತೆ ಅನೇಕ ವಿದೇಶಿ ಗಣ್ಯರನ್ನು ಸ್ವಾಗತಿಸುತ್ತದೆ.

ಪ್ರಧಾನಿ ಮೋದಿ ಅವರ ಚಿತ್ರವಿರುವ ಪೋಸ್ಟರ್‌ಗಳು ಅತ್ಯಂತ ಜನನಿಬಿಡ ಮತ್ತು ಹೆಚ್ಚು ಗೋಚರಿಸುವ ಮಾರ್ಗಗಳಲ್ಲಿ ಹಾಕಲಾಗಿದೆ. ಅದಾಗ್ಯೂ ಈ ಯಾವುದೆ ಪೋಸ್ಟರ್‌ಗಳಲ್ಲಿ ಯಾವುದೆ ವಿದೇಶಿ ಅಥವಾ ಭಾರತೀಯ ನಾಯಕರ ಚಿತ್ರವನ್ನು ಮುದ್ರಿಸಲಾಗಿಲ್ಲ. ದೇಶದ ಪ್ರಥಮ ಪ್ರಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಎಲ್ಲಾ G20 ನಾಯಕರನ್ನು ಶೃಂಗಸಭೆಗೆ ಅಧೀಕೃತವಾಗಿ ಆಹ್ವಾನಿಸಿದ್ದರೂ, ಯಾವುದೆ ಜಾಹಿರಾತಿನ ಪೋಸ್ಟರ್‌ಗಳಲ್ಲಿ ಅವರಿಗೆ ಸ್ಥಾನ ಸಿಕ್ಕಿಲ್ಲ.

“ಎಲ್ಲರಿಗೂ ಪ್ರಾತಿನಿಧ್ಯ”, “ವೈವಿಧ್ಯತೆಯನ್ನು ಗೌರವಿಸುವುದು ಮಾತ್ರವಲ್ಲದೆ ಅದನ್ನು ಆಚರಿಸುವುದು” ಎಂದು ಬರೆದಿರುವ ಹಲವು ಸಂದೇಶಗಳನ್ನು ಪೋಸ್ಟರ್‌ಗಳಲ್ಲಿ ಮುದ್ರಿಸಲಾಗಿದೆಯಾದರೂ, ಪೋಸ್ಟರ್‌ಗಳಲ್ಲಿ ಮೋದಿ ಅವರನ್ನು ಬಿಟ್ಟರೆ ಬೇರೆ ಯಾವುದೆ ಚಿತ್ರಗಳನ್ನು ಮುದ್ರಿಸಲಾಗಿಲ್ಲ.

ಇದನ್ನೂ ಓದಿ: ಸೌಜನ್ಯಾ ಪ್ರಕರಣದ ಮರು ತನಿಖೆ ಅರ್ಜಿ ವಜಾ ಮಾಡಿದ ಹೈಕೋರ್ಟ್‌

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ITC ಮೌರ್ಯವರೆಗೆ

ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ITC ಮೌರ್ಯ ಹೋಟೆಲ್‌ಗೆ ತೆರಳುವ 12 ಕಿಲೋಮೀಟರ್ ವ್ಯಾಪ್ತಿಯ ರಸ್ತೆಯಲ್ಲಿ ಪ್ರಧಾನಮಂತ್ರಿ ಚಿತ್ರವಿದೆ. ದೊಡ್ಡ ಗಾತ್ರದಲ್ಲಿ ಅವರ ಚಿತ್ರಗಳನ್ನು ಬಿಲ್‌ಬೋರ್ಡ್‌ಗಳು ಮತ್ತು ಪೋಸ್ಟರ್‌ಗಳಲ್ಲಿ ಪ್ರದರ್ಶಿಸಲಾಗಿದೆ. ಆದರೆ ಮೋದಿ ಬ್ಯಾನರ್‌ಗಳು ಮತ್ತು ಜಾಹೀರಾತು ಫಲಕಗಳು ಹೆಚ್ಚಾಗಿ ದೆಹಲಿ ಕಂಟೋನ್ಮೆಂಟ್ ಮತ್ತು ಧೌಲಾ ಕುವಾನ್ ನಡುವಿನ 4 ಕಿಮೀ ವಿಸ್ತಾರದಲ್ಲಿ ಮತ್ತು ಸರ್ದಾರ್ ಪಟೇಲ್ ಮಾರ್ಗದಲ್ಲಿ 2 ಕಿಮೀ ವಿಸ್ತಾರದಲ್ಲಿ ಕೇಂದ್ರೀಕೃತವಾಗಿವೆ. ಈ ಎರಡೂ ಪ್ರದೇಶಗಳು 12 ಕಿಮೀ ರಸ್ತೆ ಮಾರ್ಗದ ಭಾಗವಾಗಿದೆ.

ದೆಹಲಿ ಕಂಟೋನ್ಮೆಂಟ್ ಮತ್ತು ಧೌಲಾ ಕುವಾನ್ ನಡುವಿನ 4 ಕಿಮೀ ವ್ಯಾಪ್ತಿಯಲ್ಲಿ 122 ಬ್ಯಾನರ್‌ಗಳು ಮೋದಿ ಅವರ ಚಿತ್ರದಿಂದ ಅಲಂಕರಿಸಲಾಗಿದೆ. ಇಲ್ಲಿ ಪ್ರತಿ 100 ಮೀಟರ್‌ಗೆ ಮೂರು ಚಿತ್ರಗಳಂತೆ ಮೋದಿಯ ಚಿತ್ರವಿದೆ. ITC ಮೌರ್ಯದಲ್ಲಿನ 2 ಕಿಮೀ ವಿಸ್ತಾರದ ರಸ್ತೆಯಲ್ಲಿ 86 ಮೋದಿ ಬ್ಯಾನರ್‌ಗಳು ಹೊಂದಿದೆ.

ಈ ವರ್ಷದ ಏಪ್ರಿಲ್‌ವರೆಗೆ ಭಾರತದ ಜಿ20 ಕಾರ್ಯಕ್ರಮದ ನಡೆಯುವ ಸುತ್ತಲಿನ ಹೊರಾಂಗಣ ಜಾಹೀರಾತುಗಳಿಗಾಗಿ 50 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ.

ಸೆಪ್ಟೆಂಬರ್ 9 ಮತ್ತು 10 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ 40 ಕ್ಕೂ ಹೆಚ್ಚು ದೇಶಗಳ ರಾಷ್ಟ್ರಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತವು ಡಿಸೆಂಬರ್ 1, 2022 ರಂದು ಇಂಡೋನೇಷ್ಯಾದಿಂದ ಜಿ20 ಅಧ್ಯಕ್ಷ ಸ್ಥಾನವನ್ನು ಔಪಚಾರಿಕವಾಗಿ ವಹಿಸಿಕೊಂಡಿತು. ಪ್ರಧಾನಿ ಇದನ್ನು “ಭಾರತದ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸುವ ಅವಕಾಶ” ಎಂದು ಕರೆದಿದ್ದಾರೆ.

ವಿಡಿಯೊ ನೋಡಿ: ಸತ್ತವರಿಗೆ ಚಿಕಿತ್ಸೆ, ಶಸ್ತ್ರಚಿಕಿತ್ಸೆಗೆ ಮುನ್ನ ಡಿಸ್ಚಾರ್ಜ್ ಇದು ಆಯುಷ್ಮಾನ್ ಭಾರತ್ ಕಥೆ ವ್ಯಥೆ

Donate Janashakthi Media

Leave a Reply

Your email address will not be published. Required fields are marked *