ಜಿ. ಪರಮೇಶ್ವರ್​ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಕಲ್ಲು ತೂರಾಟ : ಪೊಲೀಸರಿಂದ 2 ಆಯಾಮಗಳಲ್ಲಿ ತನಿಖೆ

ತುಮಕೂರು : ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್​ ಮೇಲೆ ಕೊರಟಗೆರೆ ಕ್ಷೇತ್ರದಲ್ಲಿ ಕಲ್ಲು ತೂರಾಟ ನಡೆದ ಪ್ರಕರಣ ಇದೀಗ ಸಾಕಷ್ಟು ಅನುಮಾಗಳಿಗೆ ಎಡೆಮಾಡಿಕೊಟ್ಟಿದೆ. ಹೀಗಾಗಿ ಪೊಲೀಸರು ಎರಡು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

ವಿರೋಧಿಗಳಿಗೆ ಮಾಜಿ ಡಿಸಿಎಂ ಟಾರ್ಗೆಟ್ ಆದರೇ ? ಅನ್ನೋ ಪ್ರಶ್ನೆ ಉದ್ಭವವಾಗಿದೆ. ಪರಮೇಶ್ವರ್‌ ಅವರಿಗೆ ಒಂದಲ್ಲ ಎರಡು ಬಾರಿ ಕಲ್ಲು ಎಸೆತವಾಗಿದೆ. ಮೊದಲ ಬಾರಿ ನಡೆದ ದಾಳಿಯಲ್ಲಿ ಅದೃಷ್ಟವಶಾತ್ ಪರಮೇಶ್ವರ್‌ ಪಾರಾಗಿದ್ದರು. ಎರಡನೇ ಬಾರಿ ನಡೆದ ದಾಳಿಯಲ್ಲಿ‌ ಪರಂಗೆ ಕಲ್ಲೇಟು ಬಿದ್ದಿದೆ. ಪರಮೇಶ್ವರ್‌ ಅವರು ಗೆಲ್ಲುವುದು ಖಚಿತ, ಹೀಗಾಗಿ ಕಲ್ಲು ಎಸೆತದಲ್ಲಿ ವಿರೋಧಿಗಳ ಕೈವಾಡ ಇದೆ ಎಂದು ಪರಮೇಶ್ವರ್‌ ಆಪ್ತರು ಆರೋಪ ಮಾಡಿದ್ದಾರೆ.

ಕೂಡಲೇ ಬಂಧಿಸಿ :
ಇಷ್ಟೇ ಅಲ್ಲದೆ, ಪರಮೇಶ್ವರ್‌ ಆಪ್ತರು ಪೊಲೀಸ್ ಇಲಾಖೆ ಮೇಲೆ‌ ಆರೋಪ ಮಾಡಿದ್ದಾರೆ. ಒಬ್ಬ ಮಾಜಿ ಡಿಸಿಎಂಗೆ ಭದ್ರತೆಯಿಲ್ಲ ಅಂದರೆ, ನಮ್ಮಂತ ಸಾಮಾನ್ಯರ ಗತಿ ಏನು ಎಂದು ಪ್ರಶ್ನೆ ಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಿ, ಇಲ್ಲದಿದ್ದರೆ, ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ : ನನಗೂ ಮುಖ್ಯಮಂತ್ರಿಯಾಗುವ ಆಸೆ ಇದೆ: ಶಾಸಕ ಡಾ.ಜಿ. ಪರಮೇಶ್ವರ್‌

ತ್ರಿಕೋನ ಸ್ಪರ್ಧೆ :
ಈ ಬಾರಿ ಕೊರಟಗೆರೆ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಡುವೆ ತೀವ್ರ ಪೈಪೋಟಿ ಇದೆ. ಬಿಜೆಪಿ ಹಾಗೂ ಜೆಡಿಎಸ್​ನವರೇ ಈ ಕೃತ್ಯ ಎಸಗಿದ್ದಾರೆಂದು ಜಿ. ಪರಮೇಶ್ವರ್​ ಬೆಂಬಲಿಗರು ಆರೋಪ ಮಾಡಿದ್ದಾರೆ. ಪರಮೇಶ್ವರ್​ಗೆ ತಗುಲಿದ ಕಲ್ಲನ್ನೇ ಹುಡುಕಿ ತಂದು ಪೊಲೀಸರಿಗೆ ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *