ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪದ ಹಿನ್ನೆಲೆಯಲ್ಲಿ ಈಗಾಗಲೇ 7 ಜನರನ್ನು ಕರೆಸಿ ವಿಚಾರಣೆ ಮಾಡಲಾಗಿದೆ. ಅಲ್ಲದೆ, ಅವರ ವಾಯ್ಸ್ ರೆಕಾರ್ಡ್ ಕೂಡ ಸಂಗ್ರಹ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ತಿಳಿಸಿದರು. ಎಫ್‍ಎಸ್‍ಎಲ್
ನಗರದಲ್ಲಿ ಶುಕ್ರವಾರ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಎಸ್‌ಎಲ್ ವರದಿ ಇನ್ನೂ ಕೈಸೇರಿಲ್ಲ. ಆದಷ್ಟು ಬೇಗ ವರದಿಯನ್ನು ಕೊಡಿ ಎಂದು ಹೇಳಿದ್ದೇವೆ. ಘೋಷಣೆ ಕೂಗಿದ್ದಕ್ಕೆ ಸಂಬಂಧಿಸಿದಂತೆ ಕೇವಲ ಒಂದು ವಿಡಿಯೋ ಮಾತ್ರವಲ್ಲ, ಹಲವು ವಿಡಿಯೋಗಳು ಇವೆ. ಇದೆಲ್ಲವನ್ನು ಪರಿಶೀಲನೆ ಮಾಡಬೇಕಿದೆ ಎಂದರು.
ಇದನ್ನೂ ಓದಿ : ಸುಳ್ಳು ಹೇಳಿದ ಬಿಜೆಪಿ ನಾಯಕರು; ಅದನ್ನು ಹರಡಿದ ಪ್ರಜಾವಾಣಿ ಸಹಿತ ಕನ್ನಡದ ಮಾಧ್ಯಮಗಳು!
ರಾಜ್ಯಸಭೆ ಚುನಾವಣೆ ಫಲಿತಾಂಶದ ಬಳಿಕ ಕಾಂಗ್ರೆಸ್ ನಿಂದ ಆಯ್ಕೆಯಾದ ಸಂಸದ ಸೈಯದ್ ನಾಸಿರ್ ಹುಸೇನ್ ಬೆಂಬಲಿಗರೊಬ್ಬರು ಸಂಭ್ರಮಾಚರಣೆ ವೇಳೆ ವಿಧಾನಸೌದದಲ್ಲೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ಘಟನೆ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿ ನಡುವೆ ಮಾರಾಮಾರಿಗೆ ಕಾರಣವಾಗಿದೆ.
ವಿಡಿಯೋ ನೋಡಿ : ಕೂಗಿದ್ದು ನಾಸೀರ್‌ಸಾಬ್ ಜಿಂದಾಬಾದ್ ಸೃಷ್ಟಿಸಿದ್ದು ಪಾಕಿಸ್ತಾನ್ ಜಿಂದಾಬಾದ್ ಬೆತ್ತಲಾದ ಮಾಧ್ಯಮಗಳು