ತುಮಕೂರು : ನಗರದಲ್ಲಿರುವ ಬೀದಿ ಬದಿ ಮಾರಾಟಗಾರರಿಗೆ ಸೂಕ್ತ ಪುರ್ನರ್ ವಸತಿ ಕಲ್ಪಿಸದೆ ಅವರನ್ನ ಎತ್ತಂಗಡಿ ಮಾಡುವುದು ಕಾನೂನು ಬಾಹಿರ ಎಂದು ತುಮಕೂರು ಜಿಲ್ಲಾ ಪುಟ್ ಪಾತ್ ವ್ಯಾಪಾರಿಗಳ ಸಂಘ ತೀವ್ರವಾಗಿ ಖಂಡಿಸಿದೆ.
ಬುಧವಾರ ನಗರದ ಜನಚಳುವಳಿ ಕೇಂದ್ರದಲ್ಲಿ ತುಮಕೂ ಜಿಲ್ಲಾ ಪುಟಪಾತ್ ವ್ಯಾಪಾರಿಗಳ ಸಂಘ .ರಿ ಸಿಐಟಿಯು ಅಯೋಜಿಸಿದ್ದ ನಗರ ಮಟ್ಟದ ಸಮಾವೇಶವನ್ನು ಉಧ್ಘಾಟಿಸಿದ ಕರ್ನಾಟಕ ರಾಜ್ಯ ಬೀದಿ ಬದಿ ಮಾರಾಟಗಾರರ ಫೇಡರೇಷನ್ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಜೀಬ್ ಮಾತನಾಡುತ್ತಾ ಸೂಕ್ತ ಪುರ್ನರ್ ವಸತಿ ಇಲ್ಲದೇ ಬೀದಿ ಬದಿ ಮಾರಾಟಗಾರನ್ನು ಎತ್ತಂಗಡಿ ಮಾಡುವುದು ಕಾನೂನು ಬಾಹಿರವಾದ ಕ್ರಮ, ಸರ್ಕಾರದ ಆಧಿನ ಇಲಾಖೆಗಳು ಇದನ್ನು ಪರಿಪಾಲಿಸದೆ ಇದ್ದರೆ ಕಾನೂನನ್ನು ಉಲ್ಲಂಘಿಸಿದಂತೆ. ಭಾರತ ಸರ್ಕಾರ ಜಾರಿಗೆ ತಂದಿರುವ ಬೀದಿ ಬದಿ ಮಾರಾಟಗಾರ ಜೀವನ ಸಂರಕ್ಷಣೆ ಕಾಯಿದೆ-2014, ಕರ್ನಾಟಕ ಸರ್ಕಾರ ರೂಪಿಸಿರುವ ಬೀದಿ ಬದಿ ಮಾರಟಗಾರ ಜೀವನ ಸಂಕಕ್ಷಣಾ ಅಧಿನಿಯಮಗಳು ಕುರಿತು ಪೋಲಿಸ್, ನಗರ ಸ್ಥಳಿಯ ಸಂಸ್ಥೆಗಳ ಅಧಿಕಾರಿಗಳಿಗೆ ಅರಿವು ಅಗತ್ಯವೆಂದು ಹೇಳಿದರು.
ಇದನ್ನು ಓದಿ : ದೇಶದ ಸಂಪತ್ತು ಮಾರಾಟ- ಸಿಐಟಿಯು – ಸಿಪಿಐ (ಎಂ) ನಿಂದ ಕ್ಯಾಂಡಲ್ ಲೈಟ್ ಪ್ರತಿಭಟನೆ
ತುಮಕೂರು ಜಿಲ್ಲಾ ಪುಟ್ ಪಾತ್ ವ್ಯಾಪಾರಿಗಳ ಸಂಘ ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ಎನ್. ಕೆ ಸುಬ್ರಮಣ್ಯಂ ಅವರು ಮಾತನಾಡಿ ವೆಡಿಂಗ್ ಸಮಿತಿಯು ಮತ್ತಷ್ಟು ವೆಂಡಿಗ್ ಜೋನ್(ವ್ಯಾಪಾರಿ ವಲಂ)ಗಳನ್ನು ಗುರುತಿಸಿ ರೂಪಿಸಬೇಕಾದ ಅಗತ್ಯವಿದೆ ಎಂದರು.
ಸಂಘಟನೆಯ ಗೀತ ಮಾತನಾಡಿ 50 ವರ್ಷಗಿಂತ ಹೆಚ್ಚಿನ ವಯಸ್ಸಿನವರಿಗೆ ಅತ್ಮ ನಿರ್ಭರ್ ಯೋಜನೆ ಸಾಲ ನೀಡದೆ ಇರುವುದ ಸರಿಯಲ್ಲ, ಸಾಲದ ಮೋತ್ತವನ್ನು ಕನಿಷ್ಟ 50,000 ಹೆಚ್ಚಿಸಲು ಕೋರಿದರು.
ಸಮಾವೇಶವು ಎಂ.ಜಿ ರಸ್ತೆಯ ಪುಟ್‌ಪಾಟ್ ವ್ಯಾಪಾರಿಗಳ ಸಮಸ್ಯೆನ್ನು ಸೂಕ್ತವಾಗಿ ಪರಿಹಾರ ಮಾಡಿಲ್ಲ. ಅವರಿಗೆ ತಾತ್ಕಲಿಕವಾಗಿ ಶಿರಾನಿ ರಸ್ತೆಗೆ ವರ್ಗಯಿಸಲಾಯಿತು. ಅಲ್ಲಿ ಸಾರ್ವಜನಿಕರಿಗೆ ತೋಂದರೆ ಇಲ್ಲದಂತೆ ತಮ್ಮ ವೃತ್ತಿ ನಡೆಸಿ ಕೊಂಡು ಹೋಗುತ್ತಿದ್ದಾರೆ, ಅದರೆ ಇತ್ತಿಚೆಗೆ ಪೋಲಿಸರು ಅಲ್ಲಿ ವ್ಯಾಪಾರ ಮಾಡುವವರಿಗೆ ದಂಡ ವಿಧಿಸುವ ಹಾಗು ಕೆಲವರಿಗೆ ನಾಳೆಯಿಂದ ಅಂಗಡಿ ಹಾಕಬಾರದು ಎಂದು ತಿಳಿಸಿದ್ದಾರೆಂದು ವ್ಯಾಪಾರಿಗಳು ಅಳಲು ತೋಡಿಕೊಂಡುರು.
ಸಮಾವೇಶದಲ್ಲಿ ಪಟ್ಟಣ ವ್ಯಾಪಾರಿ ಸಮಿತಿ ಸದಸ್ಯರಾದ ವಸಿಂ ಅಕ್ರಂ, ಮುತ್ತುರಾಜು, ರವಿಕುಮಾರ್, ರಾಜಶೇಖರ್, ಜಗದೀಶ್, ಪಾರ್ವತಮ್ಮ, ಲಕ್ಷಮ್ಮ, ಪುನಿತ್, ಚಾಂದ್ ಪಾಶ, ಶಿರಾಗೇಟ್ , ಅಲ್ಲಾ ಬಕಾಶ್, ಅರ್.ಟಿ.ಓ, ಪ್ರಕಾಶ್, ಸಿದ್ದಗಂಗಮ್ಮ,ರಾಧಾ, ವೆಂಕಟೇಶ, ಚಲಯ್ಯ, ಇನ್ನಿತರರು ಭಾಗವಹಿಸಿದ್ದರು.