ಸರ್ಕಾರಿ ಗೌರವಗಳೊಂದಿಗೆ ಮುಖ್ಯಸ್ಥ ಡಾ. ಕೆ. ಕಸ್ತೂರಿರಂಗನ್ ರ ಅಂತ್ಯಕ್ರಿಯೆ

ಬೆಂಗಳೂರು: ಏಪ್ರಿಲ್ 25 ರಂದು ಇಸ್ರೋ ಮಾಜಿ ಮುಖ್ಯಸ್ಥ ಡಾ. ಕೆ. ಕಸ್ತೂರಿರಂಗನ್ 84 ನೇ ವಯಸ್ಸಿನಲ್ಲಿ ನಿಧನರಾದ್ದೂ, ಅವರ ಅಂತ್ಯಕ್ರಿಯೆಯನ್ನು ಸರ್ಕಾರಿ ಗೌರವಗಳೊಂದಿಗೆ ನಡೆಸಲಾಯಿತು. ಸರ್ಕಾರಿ

ಕೇರಳದ ಎರ್ನಾಕುಲಂನಲ್ಲಿ 1940ರ ಅಕ್ಟೋಬರ್ 24ರಂದು ಜನಿಸಿದ ಕಸ್ತೂರಿರಂಗನ್, ಮೂರು ದಶಕಗಳ ಕಾಲ ಭಾರತೀಯ ಬಾಹ್ಯಾಕಾಶ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.

ಕೇವಲ ಬಾಹ್ಯಾಕಾಶ ಕ್ಷೇತ್ರದಲ್ಲಷ್ಟೇ ಅಲ್ಲದೆ, ಪರಿಸರ, ಶಿಕ್ಷಣ ಮತ್ತು ಯೋಜನಾ ಆಯೋಗದಲ್ಲಿಯೂ ಇವರ ಕೊಡುಗೆ ಸ್ಮರಣೀಯವಾದದ್ದು.

ಇದನ್ನೂ ಓದಿ: ಬಿಪಿಎನ್‌ಎಲ್ 12, 981 ಹುದ್ದೆಗಳಿಗೆ ಆನ್ಲೈನ್ ಅರ್ಜಿ ಆಹ್ವಾನ

ಕಸ್ತೂರಿರಂಗನ್ 2003ರವರೆಗೆ 9ಕ್ಕೂ ಹೆಚ್ಚು ವರ್ಷಗಳ ಕಾಲ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ನೇತೃತ್ವ ವಹಿಸಿದ್ದರು. ಬಾಹ್ಯಾಕಾಶ ಆಯೋಗದ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯಲ್ಲಿ ಭಾರತ ಸರ್ಕಾರಕ್ಕೆ ಕಾರ್ಯದರ್ಶಿಯಾಗಿ ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದರು.

2003-2009ರವೆಗೆ ರಾಜ್ಯಸಭಾ ಸದಸ್ಯರಾಗಿ ದ್ದರು. ದೇಶದ ಅತ್ಯುನ್ಯತ ನಾಗರಿಕ ಪ್ರಶಸ್ತಿಗಳಾದ ಪದ್ಮಶ್ರೀ (1982), ಪದ್ಮಭೂಷಣ (1992) ಮತ್ತು ಪದ್ಮ ವಿಭೂಷಣ (2000) ಪಡೆದುಕೊಂಡಿದ್ದರು.

ಇದನ್ನೂ ನೋಡಿ: ನಿಶಿಕಾಂತ್ ದುಬೆ, ಧನ್ಕರ್‌ ಅವರ ಸುಪ್ರೀಂಕೋರ್ಟ್ ವಿರುದ್ಧ ಮಾತುಗಳು ನ್ಯಾಯಾಂಗ ನಿಂದನೆಯಲ್ಲವೇ? Janashakthi Media

Donate Janashakthi Media

Leave a Reply

Your email address will not be published. Required fields are marked *