ಮಂಡ್ಯ: ಸಾರ್ವಜನಿಕ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ರೈತನೋರ್ವ ಬೇಲಿ ಹಾಕಿದ ಹಿನ್ನೆಲೆಯಲ್ಲಿ ಶವ ಸಾಗಿಸಲಾಗದೇ ರಸ್ತೆ ಮಧ್ಯೆಯೆ ಅಂತ್ಯಕ್ರಿಯೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಹೆಬ್ಬಾಡಿಹುಂಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಗ್ರಾಮದ ಸತೀಶ್ ಎಂಬ ಎಂಬಾತ ನಿನ್ನೆ ಮೃತಪಟ್ಟಿದ್ದ. ಆತನ ಶವ ಸಾಗಿಸಲು ರಸ್ತೆಗೆ ಬೇಲಿ ಹಾಕಿಕೊಂಡಿದ್ದ ರೈತ ಒಪ್ಪದ ಹಿನ್ನೆಯಲ್ಲಿ ನಡು ರಸ್ತೆಯಲ್ಲಿ ಅಂತ್ಯಕ್ರಿಯೆ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ :-18 ಮಂದಿ ಬಿಜೆಪಿ ಶಾಸಕರ ಅಮಾನತನ್ನು ಸಮರ್ಥಿಸಿದ ಜಿ.ಟಿ.ದೇವೇಗೌಡ
ಅಂದಹಾಗೆ ಹೆಬ್ಬಾಡಿಹುಂಡಿ ಗ್ರಾಮದ ಸ್ಮಶಾನಕ್ಕೆ ಸಂಪರ್ಕ ಕಲ್ಪಿಸಲು ನೂರಾರು ವರ್ಷಗಳಿಂದಲೂ ಕಾಲು ರಸ್ತೆ ಇತ್ತು. ಸ್ಮಶಾನ ಮಾತ್ರವಲ್ಲದೆ ಕೆರೆ ಹಾಗೂ ನೂರಾರು ರೈತರು ತಮ್ಮ ಜಮೀನಿಗಳಿಗೆ ತೆರಳಲು ಇದೇ ರಸ್ತೆ ಅವಲಂಬಿಸಿದ್ರು. ಕಳೆದ ಒಂದು ವಾರದ ಹಿಂದೆ ಅದೇ ಗ್ರಾಮದ ರೈತ ಅಂದಾನಿಗೌಡ ಎಂಬಾತ ಈ ಸ್ಮಶಾನ ರಸ್ತೆ ತನಗೆ ಸೇರಿದೆಂದು ಬೇಲಿ ಹಾಕಿದ್ದಾನೆ. ಅಂತ್ಯಕ್ರಿಯೆಗೆ ಶವ ತೆಗೆದುಕೊಂಡು ಹೋಗಲು ಜಾಗ ಕೊಡದಿದ್ದರಿಂದ ಆಕ್ರೋಶಗೊಂಡ ಗ್ರಾಮಸ್ಥರು ಸ್ಮಶಾನ ರಸ್ತೆಯ ಮಧ್ಯೆ ವ್ಯಕ್ತಿಯ ಅಂತ್ಯ ಅಂಸ್ಕಾರ ನೆರವೇರಿಸಿದ್ದಾರೆ.
ಇದನ್ನು ಓದಿ :-ವಿಶೇಷ ಚೇತನ ಮಗನನ್ನು ಮೀನಿನ ಬುಟ್ಟಿಯಲ್ಲಿ ಹೊತ್ತು ತಂದ ಪಾಲಕರು
ಇನ್ನು ಸ್ಮಶಾನ ರಸ್ತೆಗೆ ಬೇಲಿ ಹಾಕಿದ ರೈತನ ವಿರುದ್ದ ಕ್ರಮ ಜರುಗಿಸುವಂತೆ ಪ್ರತಿಭಟನೆ ನಡೆಸಿದ್ರು. ಕೂಡಲೇ ಅಧಿಕಾರಿಗಳು ಹಾಗೂ ಕ್ಷೇತ್ರದ ಶಾಸನ ರಮೇಶ್ ಬಂಡಿಸಿದ್ದೇಗೌಡ ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಪರಿಹರಿಸಬೇಕು. ಇಲ್ಲದಿದ್ರೆ ತಾಲೂಕು ಕಚೇರಿ ಮುಂದೆ ಶವ ತಂದು ಅಂತ್ಯ ಸಂಸ್ಕಾರ ನಡೆಸುವ ಎಚ್ಚರಿಕೆ ನೀಡಿದ್ದಾರೆ.