ಬೆಂಗಳೂರು: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿರುವುದು ಎಫ್ ಎಸ್ ಎಲ್ ವರದಿಯಲ್ಲಿ ಸಾಬೀತಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಪ್ರಕರಣದಲ್ಲಿ ಮೂವರ ಬಂಧನದ ಹಿನ್ನಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಎಫ್ ಎಸ್ ಎಲ್ ರಿಪೋರ್ಟ್ ಅಧಾರದ ಮೇಲೆ ಆರೋಪಿಗಳನ್ನು ಬಂಧನ ಮಾಡಲಾಗಿದೆ. ಖಾಸಗಿಯಾಗಿಯೂ ಎಫ್ ಎಸ್ ಎಲ್ ರಿಪೋರ್ಟ್ ರಿಲೀಸ್ ಮಾಡಿದ್ರು. ಅದನ್ನು ನಾವು ಅಧಿಕೃತ ಎಂದು ಪರಿಗಣಿಸಿಲ್ಲ. ನಮ್ಮ ಎಫ್ ಎಸ್ ಎಲ್ ರಿಪೋರ್ಟ್ ಆಧಾರದ ಮೇಲೆ ಪೊಲೀಸರು ಬಂಧಿಸಿದ್ದಾರೆ ಎಂದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರ ಮುಲಾಜೂ ಇಲ್ಲದೇ ಕ್ರಮ ತಗೆದುಕೊಳ್ಳುವೆ ಎಂದು ಸದನದಲ್ಲೂ ಹೇಳಿದ್ದೆ. ಹಿಂದೆ ಬಿಜೆಪಿ ಸರ್ಕಾರವೇ ಇತ್ತು.. ಆಗ ಮಂಡ್ಯದಲ್ಲಿ ಬಿಜೆಪಿಯವರೇ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ರು ಹಿಂದೆ ಬಿಜೆಪಿಯವರು ಯಾಕೆ ಕ್ರಮ ಕೈಗೊಳ್ಳಲಿಲ್ಲ? ಎಂದು ಪ್ರಶ್ನಿಸಿದರು.
ಇವರ ವಿರುದ್ಧ ಕ್ರಮ ಕೈಗೊಂಡ ಮೇಲೆ ಅವರ ವಿರುದ್ಧನೂ ಆಗಬೇಕಲ್ಲ. ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗು ಎಲ್ಲಾ ಒಂದೇ ಅಲ್ವಾ? ಎಂದು ಪ್ರಶ್ನಿಸಿದರು.
ಮಂಡ್ಯದಲ್ಲಿ ಎಸ್ ಪಿ ಅವರು ಕ್ರಮ ತಗೋತಾರೆ. ಈ ಕುರಿತಾಗಿಯೂ ಪ್ರಕರಣ ದಾಖಲಾಗಿದೆ. ಅದನ್ನು ಪರಿಶೀಲನೆ ಮಾಡಲಾಗ್ತಿದೆ. ಎಫ್ ಎಸ್ ಎಲ್ ವರದಿ ಬಗ್ಗೆ ಅಧಿಕೃತವಾಗಿ ಈಗ ನಾವು ಹೇಳಿದ್ದೇವೆ. ಇದೇ ಅಧಿಕೃತ ಎಂದರು.