“ಮಣಿಪುರದಲ್ಲಿ ನಿಲ್ಲದ ಸಾವು-ನೋವುಗಳ ನಡುವೆಯೂ ಮಹಾರಾಷ್ಟ್ರದಲ್ಲಿ ಪ್ರಧಾನಿ ಬಂಟರುಗಳ ಪಕ್ಷಾಂತರದ ಹೂಟ”
ಮಣಿಪುರದಲ್ಲಿ ಮಾರಣಾಂತಿಕ ಪ್ರಕ್ಷುಬ್ಧತೆ ಮುಂದುವರಿದಿದೆ. ಸಾವುಗಳು ಸಂಭವಿಸುತ್ತಲೇ ಇವೆ, ಜತೆಗೆ ಪರಿಹಾರ ಶಿಬಿರಗಳಲ್ಲಿ ಮತ್ತು ಇತರೆಡೆ ಜನರ
ಸಂಕಷ್ಟವೂ ಮುಂದುವರೆಯುತ್ತಲೇ ಇದೆ. ಅಪನಂಬಿಕೆ ಮತ್ತು ಅಭದ್ರತೆಯ ವಾತಾವರಣವಿದೆ. ಇಂಟರ್ನೆಟ್ ಮುಚ್ಚಿಕೆಯೂ ಮುಂದುವರೆದಿದ್ದು ಮಣಿಪುರವನ್ನು ದೇಶದ ಇತರ ಭಾಗಗಳಿಂದ ಮುಚ್ಚಿ ಹಾಕಿದೆ. ದುರದೃಷ್ಟವಶಾತ್, ಬಹುತೇಕ ಮುಖ್ಯವಾಹಿನಿಯ ಮಾಧ್ಯಮಗಳು
ಮಣಿಪುರದ ವಿವಿಧ ಜನಾಂಗೀಯ ಗುಂಪುಗಳ ಶೋಚನೀಯ ಸ್ಥಿತಿಯನ್ನು ತೋರಿಸುತ್ತಿಲ್ಲ. ‘ಡಬಲ್ ಇಂಜಿನ್’ ಸರ್ಕಾರದ ಮೂಲಕ ಮಹಾನ್ ಆಳ್ವಿಕೆ ನೀಡುತ್ತೇವೆಂದ ದಾವೆಗಳು ಈಗ ಸಂಪೂರ್ಣ ಟೊಳ್ಳು ಎಂದು ಬಯಲಾಗಿದೆ. ಪ್ರಧಾನಿ ಮತ್ತು ಗೃಹ ಸಚಿವರು ಸೇರಿದಂತೆ ಅವರ ವಿಶ್ವಾಸಾರ್ಹ ಬಂಟರುಗಳು ವಿರೋಧ ಪಕ್ಷಗಳನ್ನು ದುರ್ಬಲಗೊಳಿಸುವಲ್ಲಿಯೇ ಮತ್ತು ಮಹಾರಾಷ್ಟ್ರದಲ್ಲಿ ಪಕ್ಷಾಂತರವನ್ನು ಹೇರುವಲ್ಲಿಯೇ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.
ಇದನ್ನೂ ಓದಿ:ಮಣಿಪುರಕ್ಕೆ ಕೈ ಕೊಟ್ಟ ಮೋದಿ
ಮಣಿಪುರದ ಜನರು ತುರ್ತಾಗಿ ಸಾಮಾನ್ಯ ಸ್ಥಿತಿಯ ಮರುಸ್ಥಾಪನೆ ಮತ್ತು ವಿಭಜಕ ರಾಜಕೀಯದ ಸಂಕೇತವಾಗಿರುವ ಮತ್ತು ಅಧಿಕಾರದಲ್ಲಿ ಮುಂದುವರಿಯಲು ಎಲ್ಲಾ ನ್ಯಾಯಸಮ್ಮತತೆಯನ್ನು ಕಳೆದುಕೊಂಡಿರುವ ಮುಖ್ಯಮಂತ್ರಿಯನ್ನು ತೆಗೆದುಹಾಕುವ ಪ್ರಮುಖ ಬೇಡಿಕೆಯ ಮೇಲೆ ಹೋರಾಟವನ್ನು ಮುಂದುವರೆಸಿದ್ದಾರೆ. ಜೂನ್ 25 ರಂದು ನವದೆಹಲಿಯಲ್ಲಿ ಈ ಬೇಡಿಕೆಗಳ ಮೇಲೆ ನಡೆದ ಒಂದು ರಾಷ್ಟ್ರೀಯ ಸಮಾವೇಶದಲ್ಲಿ ಮಣಿಪುರದಿಂದ 10 ಸಮಾನ ಮನಸ್ಕ ರಾಜಕೀಯ ಪಕ್ಷಗಳು ಮತ್ತು ಚುನಾಯಿತ ಜಿಲ್ಲಾ ಪರಿಷತ್ ಸದಸ್ಯರು ಭಾಗವಹಿಸಿದ್ದರು.
ಸಮಾವೇಶದಲ್ಲಿ ಭಾಗವಹಿಸಿದ್ದ ಸಿಪಿಐ ಮತ್ತು ಸಿಪಿಐ(ಎಂ) ಮಣಿಪುರದ ನೊಂದ ಜನರೊಂದಿಗೆ ಸೌಹಾರ್ದವನ್ನು ಪ್ರದರ್ಶಿಸಲು,ಬುಡಮಟ್ಟದಲ್ಲಿನ ಪರಿಸ್ಥಿತಿಯ ಅಧ್ಯಯನ ಮಾಡಲು ಮತ್ತು ಸಹಜ ಸ್ಥಿತಿಗೆ ಮರಳುವಂತೆ ಮಾಡುವ ಬಗ್ಗೆ ಅಧಿಕಾರಿಗಳೊಂದಿಗೆ ಮಾತನಾಡಲು ಜುಲೈ 6-8 ರವರೆಗೆ 5 ಸಂಸದರ ನಿಯೋಗವನ್ನು ಮಣಿಪುರಕ್ಕೆ ಕಳುಹಿಸಲು ನಿರ್ಧರಿಸಿವೆ. ನಿಯೋಗವು ಚುರಾಚಂದ್‌ಪುರ ಮತ್ತು ಇಂಫಾಲ್ ಕಣಿವೆಯಲ್ಲಿ ಎಲ್ಲಾ ಜನಾಂಗೀಯ ಸಮುದಾಯಗಳ ಜನರನ್ನು ಭೇಟಿ ಮಾಡುತ್ತದೆ. ಜುಲೈ 7 ರಂದು ಸಂಜೆ 5.00 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಲಿರುವ ನಿಯೋಗದ ಸದಸ್ಯರು , ಜುಲೈ 8 ರಂದು ಮಾಧ್ಯಮಗಳನ್ನು ಭೇಟಿ ಮಾಡಿ ತಮ್ಮ ಅನುಭವವನ್ನು ಹಂಚಿಕೊಳ್ಳಲಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿಕೆ ತಿಳಿಸಿದೆ.
ನಿಯೋಗದಲ್ಲಿ ಸಿಪಿಐ(ಎಂ) ರಾಜ್ಯಸಭಾ ಸದಸ್ಯರುಗಳಾಗಿರುವ ಬಿಕಾಶ್ರಂ ಜನ್ ಭಟ್ಟಾಚಾರ್ಯ ಮತ್ತು ಜಾನ್ ಬ್ರಿಟಾಸ್ ಮತ್ತು ಸಿಪಿಐ ರಾಜ್ಯಸಭಾ ಸದಸ್ರುಗಳಾಗಿರುವ ಬಿನೋಯ್ ವಿಶ್ವಂ, ಸಂತೋಷ್ ಕುಮಾರ್ ಪಿ ಮತ್ತು ಕೆ. ಸುಬ್ಬರಾಯನ್ ಇರುತ್ತಾರೆ.