ಉಚಿತ ವೈದ್ಯಕೀಯ ಚಿಕಿತ್ಸೆ | ಕೇರಳಕ್ಕೆ ಅಗ್ರ ಸ್ಥಾನ – ಕೇಂದ್ರ ಸರ್ಕಾರದಿಂದ ಪ್ರಶಸ್ತಿ

ತಿರುವನಂತಪುರಂ: ದೇಶದ ಗರಿಷ್ಠ ಸಂಖ್ಯೆಯ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡುವುದಕ್ಕಾಗಿ ಕೇಂದ್ರ ಸರ್ಕಾರ ನೀಡುವ ”ಆರೋಗ್ಯ ಮಂಥನ್-2023” ಪ್ರಶಸ್ತಿಯನ್ನು ಕೇರಳ ರಾಜ್ಯವು ಸತತ ಮೂರನೇ ಬಾರಿಗೆ ಗೆದ್ದುಕೊಂಡಿದೆ. ”ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆ” (ಕೆಎಎಸ್‌ಪಿ) ಯ ಗರಿಷ್ಠ ಬಳಕೆಗಾಗಿ ರಾಜ್ಯಕ್ಕೆ ಈ ಪ್ರಶಸ್ತಿ ಲಭಿಸಿದೆ.

ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ (AB-PMJAY) ವಾರ್ಷಿಕ ಆಚರಣೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಆರೋಗ್ಯ ಮಂಥನ್ 2023 ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

AB-PMJAY ಅಡಿಯಲ್ಲಿ ದೃಷ್ಟಿದೋಷವುಳ್ಳವರಿಗೆ ಅತ್ಯುತ್ತಮ ಸೇವೆಯನ್ನು ಒದಗಿಸಿದ್ದಕ್ಕಾಗಿ ಕೂಡಾ ಕೇರಳ ರಾಜ್ಯವು ಪ್ರಶಸ್ತಿಯನ್ನು ಗೆದ್ದಿದೆ. ರಾಜ್ಯದಲ್ಲಿ ಕೆಎಎಸ್‌ಪಿ ಸೇರಿದಂತೆ ವಿವಿಧ ಯೋಜನೆಗಳ ಮೂಲಕ 3,200 ಕೋಟಿ ರೂ.ಗಳ ಚಿಕಿತ್ಸೆ ಉಚಿತವಾಗಿ ನೀಡಲಾಗಿದೆ. ಇದರಲ್ಲಿ ಕೇಂದ್ರ ಸರ್ಕಾರ ನೀಡಿದ್ದು ಕೇವಲ 151 ಕೋಟಿ ರೂ.ಗಳು ಮಾತ್ರವಾಗಿದ್ದು, ಉಳಿದ ಹಣವನ್ನು ರಾಜ್ಯ ಸರಕಾರ ಭರಿಸುತ್ತಿದೆ.

ಇದನ್ನೂ ಓದಿ: ಬಿಜೆಪಿ ಜೊತೆಗೆ ಹೊಂದಾಣಿಕೆ ಇಲ್ಲ: ಜನರ ತೀರ್ಮಾನವೇ ನನ್ನ ತೀರ್ಮಾನ|ಶಾಸಕಿ ಕರೆಮ್ಮ ಜಿ.ನಾಯಕ್‌

ಪುರಸ್ಕಾರಕ್ಕೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವೆ ವೀಣಾ ಜಾರ್ಜ್, “ಎಲ್ಲರಿಗೂ ಆರೋಗ್ಯ ಸೇವೆ ಒದಗಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ. ಅನಾರೋಗ್ಯವನ್ನು ಎದುರಿಸುವಾಗ ಯಾರೂ ಅಸಹಾಯಕರಾಗಬಾರದು. ಸಾಧ್ಯವಾದಷ್ಟು ಜನರಿಗೆ ಉಚಿತ ಚಿಕಿತ್ಸೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ” ಎಂದು ಅವರು ಹೇಳಿದ್ದಾರೆ.

“ರಾಜ್ಯವು ಎದುರಿಸುತ್ತಿರುವ ಆರ್ಥಿಕ ಅಡೆತಡೆಗಳ ನಡುವೆಯೂ, ಆರ್ಥಿಕವಾಗಿ ಹಿಂದುಳಿದವರಿಗೆ ಚಿಕಿತ್ಸೆ ನೀಡಲು ಎಲ್‌ಡಿಎಫ್ ಸರ್ಕಾರದ ಮಾಡಿರುವ ಪ್ರಯತ್ನಗಳಿಗೆ ಈ ಪ್ರಶಸ್ತಿಯು ಮನ್ನಣೆಯಾಗಿದೆ” ಎಂದು ವೀಣಾ ಹೇಳಿದ್ದಾರೆ.

30 ಲಕ್ಷ ಕ್ಲೇಮ್‌ಗಳ ಮೂಲಕ 13 ಲಕ್ಷ ಫಲಾನುಭವಿಗಳು ಕೆಎಎಸ್‌ಪಿಯಿಂದ ಪ್ರಯೋಜನ ಪಡೆದಿದ್ದಾರೆ. ಸರ್ಕಾರಿ ಮತ್ತು ಖಾಸಗಿ ವಲಯದ 613 ಎಂಪನೆಲ್ಡ್ ಆಸ್ಪತ್ರೆಗಳಿಂದ ಫಲಾನುಭವಿಗಳಿಗೆ ಉಚಿತ ವೈದ್ಯಕೀಯ ಸೇವೆಗಳಿಗೆ ಪ್ರವೇಶವಿದೆ. ಈ ಆಸ್ಪತ್ರೆಗಳು 3 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ಕುಟುಂಬಗಳಿಗೆ ಕಾರುಣ್ಯ ಬೆನೆವೊಲೆಂಟ್ ಫಂಡ್ ಯೋಜನೆಯ ಮೂಲಕ ವೈದ್ಯಕೀಯ ಸೇವೆಗಳನ್ನು ಒದಗಿಸುತ್ತವೆ.

ವಿಡಿಯೊ ನೋಡಿ: ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆಗೆ ವಿರೋಧಿಸಿ ಬೃಹತ್‌ ಪ್ರತಿಭಟನೆ, ಮಂಡ್ಯ ಮದ್ದೂರು ಬಂದ್‌ Janashakthi Media

Donate Janashakthi Media

Leave a Reply

Your email address will not be published. Required fields are marked *