ಇಸ್ರೇಲ್ ದೇಶಕ್ಕೆ ವೀಸಾ ಕೊಡಿಸುವುದಾಗಿ ನಂಬಿಸಿ ₹ 7.5 ಲಕ್ಷ ಹಣ ಪಡೆದು ವಂಚನೆ: ಮಹಿಳೆ ದೂರು ದಾಖಲು

ಮಂಗಳೂರು: ಇಸ್ರೇಲ್ ದೇಶದಲ್ಲಿ ಪತಿಗೆ ಉದ್ಯೋಗದ ವೀಸಾ ಕೊಡಿಸುವುದಾಗಿ ನಂಬಿಸಿ ₹ 7.5 ಲಕ್ಷ ಹಣ ಪಡೆದು ವಂಚಿಸಿದ ಬಗ್ಗೆ ಮಹಿಳೆಯೊಬ್ಬರು ದೂರು ದಾಖಲಿಸಿದ್ದಾರೆ.

ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ಪತಿಗೆ ಪರಿಚಯವಿದ್ದ ‌ಜೆರಾಲ್ಡ್ ಫ್ರಾನ್ಸಿಸ್ ಡಿಸೋಜ ಅವರು ಇಸ್ರೇಲ್ ದೇಶದಲ್ಲಿ ಉದ್ಯೋಗದ ನಿಮಿತ್ತ ವೀಸಾ ಕೊಡಿಸುವುದಾಗಿ ನಂಬಿಸಿದ್ದರು.

ಇದನ್ನೂ ಓದಿ : ಉಡುಪಿ: ಇನ್ಸ್ಟಾಗ್ರಾಂ ಲಿಂಕ್ ಒತ್ತಿ ಹೂಡಿಕೆ ಮಾಡಿ 12,46,000 ರೂ. ಹಣ ಕಳೆದುಕೊಂಡ ಯುವತಿ

ಇದಕ್ಕೆ ಕಾಗದ ಪತ್ರ ಸಿದ್ಧಪಡಿಸಲು ಎರಡೂವರೆ ವರ್ಷಗಳ ಹಿಂದೆ ಆತನ ಸಹಪಾಠಿಯೊಬ್ಬನಿಗೆ ₹ 2 ಲಕ್ಷ ಹಣವನ್ನು ನೀಡಿದ್ದೆ. ಅದೂ ಸೇರಿ ಒಟ್ಟು ₹ 7.50 ಲಕ್ಷ ಹಣವನ್ನು ಆರೋಪಿಗೆ ನೀಡಿದ್ದೆವು.

ಆರೋಪಿ ಈವರೆಗೂ ನನ್ನ ಪತಿಗೆ ವೀಸಾವನ್ನು ಮಾಡಿಸಿಕೊಡದೆ, ಪಡೆದ ಹಣವನ್ನೂ ಮರಳಿಸದೇ ವಂಚಿಸಿದ್ದಾರೆ’ ಎಂದು ಸಂತ್ರಸ್ತ ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ನೋಡಿ : ಸೈಬರ್‌ ಕಳ್ಳರ ಬಗ್ಗೆ ಎಚ್ಚರವಿರಲಿ Janashakthi Media #Cybercrime #Cyberfraud #CyberPolice

Donate Janashakthi Media

Leave a Reply

Your email address will not be published. Required fields are marked *