ಮಥುರಾ: ಮಹಾರಾಷ್ಟ್ರದಲ್ಲಿ ಸಾವಿರಾರು ಜನರಿಗೆ ರೂ. 300 ಕೋಟಿಗೂ ಅಧಿಕ ವಂಚಿಸಿದ್ದ ವ್ಯಕ್ತಿಯೊಬ್ಬ ಬಂಧನದಿಂದ ತಪ್ಪಿಸಿಕೊಳ್ಳಲು ಮಥುರಾದಲ್ಲಿ ಸ್ವಾಮೀಜಿ ಸೋಗಿನಲ್ಲಿ ವಾಸಿಸುತ್ತಿದ್ದುದನ್ನು ಪತ್ತೆ ಹಚ್ಚಿದ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
ವೃಂದಾವನದ ಕೃಷ್ಣ ಬಲರಾಮ ದೇವಸ್ಥಾನದ ಬಳಿ ವೃಂದಾವನ ಮತ್ತು ಬೀಡ್ ಜಿಲ್ಲಾ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಬಬನ್ ವಿಶ್ವನಾಥ್ ಶಿಂಧೆ ಅವರನ್ನು ಬಂಧಿಸಿದ್ದಾರೆ.
ಇದನ್ನು ಓದಿ : ಪ್ರಧಾನಮಂತ್ರಿ ತುಂಬಾ ಶಕ್ತಿಶಾಲಿಯಾಗಿರಬಹುದು, ಆದರೆ ಅವರು ದೇವರಲ್ಲ: ಅರವಿಂದ್ ಕೇಜ್ರಿವಾಲ್
ಸುಮಾರು ರೂ. 300 ಕೋಟಿಗೂ ಅಧಿಕ ವಂಚನೆಯಲ್ಲಿ ಹಲವು ಎಫ್ ಐಐರ್ ಗಳಿಗೆ ಸಂಬಂಧಿಸಿದಂತೆ ಶಿಂಧೆ ಪೊಲೀಸರಿಗೆ ಬೇಕಾಗಿದ್ದಾರೆ ಎಂದು ಮಥುರಾ ಪೊಲೀಸರು ತಿಳಿಸಿದ್ದಾರೆ.
ಶಿಂಧೆ ಸ್ವಾಮೀಜಿ ಸೋಗಿನಲ್ಲಿ ದೆಹಲಿ, ಅಸ್ಸಾಂ, ನೇಪಾಳ ಮತ್ತು ಉತ್ತರ ಪ್ರದೇಶದ ಹಲವು ಜಿಲ್ಲೆಗಳಲ್ಲಿ ತಲೆಮರೆಸಿಕೊಂಡಿದ್ದ. ಕೊನೆಗೆ ಆತ ವೃಂದಾವನದಲ್ಲಿ ಅಡಗಿರುವುದು ಕಂಡುಬಂದಿತು ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಕುಮಾರ್ ಸಿಂಗ್ ಹೇಳಿದ್ದಾರೆ.
ಇದನ್ನು ನೋಡಿ : ಮೂಡಾ ವಿಷಯ ಎಂಬುದು ಕೇವಲ ಸಿದ್ದರಾಮಯ್ಯನ ಹೆಸರು ಕೆಡಿಸುವ ಹುನ್ನಾರವಷ್ಟೇ! – ಸಂತೋಷ್ ಲಾಡ್ Janashakthi Media