ಯಲಬುರ್ಗಿ : ಕೆಲಸ ಮುಗಿಸಿ ರಾತ್ರಿ ಮನೆಗೆ ವಾಪಸ್ ಆಗುತ್ತಿದ್ದ ಒಂದೇ ಗ್ರಾಮದ ನಾಲ್ವರು ಮಹಿಳೆಯರು ಮಾರ್ಗದಲ್ಲೇ ದುರಂತ ಅಂತ್ಯಕಂಡ ಘಟನೆ ಯಲಬುರ್ಗಾ ತಾಲೂಕಿನ ಸಂಕನೂರು ಗ್ರಾಮದಲ್ಲಿ ನಡೆದಿದೆ.
ಭುವನೇಶ್ವರಿ(32), ಗೀರಿಜಾ(28), ರೇಖಾ(40) ಮತ್ತು ವೀಣಾ(22) ಎನ್ನುವವರು ನೀರಿನಲ್ಲಿ ಕೊಚ್ಚಿಹೋದವರಾಗಿದ್ದಾರೆ. ಈ ನಾಲ್ವರು ಶನಿವಾರ ಬೆಳಗ್ಗೆ ಹತ್ತಿ ಜಿನ್ನಿಂಗ್ನಲ್ಲಿ ಕೆಲಸಕ್ಕೆ ತೆರಳಿದ್ದರು. ಕೆಲಸ ಮುಗಿಸಿ ರಾತ್ರಿ ಗ್ರಾಮಕ್ಕೆ ವಾಪಸಾಗುವ ವೇಳೆ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು.
ಭಾನುವಾರ ಬೆಳಗ್ಗೆ ಮೂವರ ಮೃತದೇಹಗಳು ಪತ್ತೆಯಾಗಿತ್ತು. ಮಧ್ಯಾಹ್ನ ಮತ್ತೊಬ್ಬರ ಮೃತದೇಹ ಸಿಕ್ಕಿದೆ.