ಬೆಂಗಳೂರು: ಆಗಾಗ ಪೊಲೀಸ್ ನೇಮಕಾತಿಯಲ್ಲಿ ಅಕ್ರಮ ನಡೆಯುತ್ತಿರುವುದು ಸುದ್ಧಿಯಾಗುತ್ತಲೇ ಇದ್ದೂ, ಅದರಲ್ಲೂ 2022ರಲ್ಲಿ ನಡೆದ ಪಿಎಸ್‌ಐ ನೇಮಕಾತಿ ಹಗರಣ ಭಾರೀ ಸದ್ದು ಮಾಡಿತ್ತು. ಹಾಗಾಗಿ ಈ ನೇಮಕಾತಿ ಅಕ್ರಮಕ್ಕೆ ಕಡಿವಾಣ ಹಾಕಲು ಮಂಡಳಿ ರಚಿಸಲು ಪ್ರಸ್ತಾಪ ಮಾಡಲಾಗಿದ್ದು, ಶೀಘ್ರದಲ್ಲೇ ಆದೇಶ ಹೊರಬೀಳುವ ಸಾಧ್ಯತೆ ಇದೆ.
ಪೊಲೀಸ್ ನೇಮಕಾತಿ ಅಕ್ರಮಗಳಿಗೆ ಶಾಶ್ವತವಾಗಿ ತಡೆ ಹಾಕಲು ತಯಾರಿ ನಡೆಸಲಾಗಿದೆ. ನೇಮಕಾತಿ ವಿಭಾಗದ ಮುಖ್ಯಸ್ಥರು, ಡಿಜಿಪಿ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಐವರು ಹಿರಿಯ ಐಪಿಎಸ್ ಅಧಿಕಾರಿಗಳನ್ನೊಳಗೊಂಡ ಮಂಡಳಿ ರಚಿಸುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿದೆ.
ಈಗಾಗಲೇ ಗೃಹ ಹಾಗೂ ಹಣಕಾಸು ಇಲಾಖೆಗಳ ಮಧ್ಯೆ ಸಭೆ ನಡೆಸಲಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಪೊಲೀಸ್ ನೇಮಕಾತಿ ಮಂಡಳಿ ರಚನೆ ಬಗ್ಗೆ ಅಧಿಕೃತ ಆದೇಶವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಕಲ್ಬುರ್ಗಿ – ಜ.17-19ವರೆಗೆ ಬಹುತ್ವ ಸಂಸ್ಕೃತಿ ಭಾರತೋತ್ಸವ
2022ರಲ್ಲಿ ನಡೆದಿದ್ದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ಗಳ ನೇಮಕಾತಿ ಹಗರಣವು ರಾಷ್ಟ್ರ ಮಟ್ಟದಲ್ಲಿ ರಾಜ್ಯ ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ಉಂಟಾಗಿತ್ತು. ಅಮೃತ್ ಪಾಲ್ ಸೇರಿದಂತೆ ಕೆಲ ಅಧಿಕಾರಿಗಳು ಜೈಲು ಸೇರಿದ್ದರು. ಹೀಗಾಗಿ ನೇಮಕಾತಿ ವಿಭಾಗದ ಎಡಿಜಿಪಿ ಕೆ.ವಿ.ಶರತ್ ಚಂದ್ರರಿಂದ ಸರ್ಕಾರಕ್ಕೆ ಮಂಡಳಿ ರಚಿಸಲು ಕೋರಿ ಮನವಿ ಮಾಡಿದ್ದಾರೆ.
ಒಂದು ಬಾರಿ ನೇಮಕಾತಿ ನಡೆಸಲು 5 ರಿಂದ 6 ಕೋಟಿಯಷ್ಟು ಹಣ ಖರ್ಚಾಗಲಿದೆ. ಕೆಇಎ ಮಾದರಿಯಲ್ಲೇ ನೇಮಕಾತಿ ಮಂಡಳಿಗೂ ಸ್ವತಂತ್ರ ನಿರ್ವಹಣೆಗೆ ಅವಕಾಶ ನೀಡಬೇಕು. ಪ್ರಶ್ನೆ ಪತ್ರಿಕೆಗಳ ತಯಾರಿಕೆ, ವಿತರಣೆ, ಫಲಿತಾಂಶ ಹೀಗೆ ಇಡೀ ನೇಮಕಾತಿ ಪ್ರಕ್ರಿಯೆಯ ಹೊಣೆಗಾರಿಕೆಯನ್ನು ಮಂಡಳಿ ಹೊರಲಿದೆ ಎಂದು ಎಡಿಜಿಪಿ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಇದನ್ನೂ ನೋಡಿ: ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು