ಕಲಬುರಗಿ:ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ನಕಲಿ ಸಹಿ ಮಾಡಿ ಹಣ ಬಿಡಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಲಿಕೆಯ ಆಯುಕ್ತರ ಆಪ್ತ ಸಹಾಯಕ ಸೇರಿದಂತೆ ಒಟ್ಟು ಐವರನ್ನು ಪೊಲೀಸರು ಬಂಧಿಸಿದ್ದಾರೆ.
ಆಯುಕ್ತರ ಹೆಸರು ಉಲ್ಲೇಖ ಮಾಡಿ ಚೆಕ್ ಬುಕ್ ನಿಂದ 1.32 ಕೋಟಿ ಮೊತ್ತ ಬಳಕೆ ಮಾಡಿರುವ ಹಿನ್ನಲೆ ಆಯುಕ್ತರ ಪಿಎ ಸೇರಿ ಐವರ ಬಂಧನ ಮಾಡಲಾಗಿದೆ.ಪಾಲಿಕೆ ಆಯುಕ್ತರ ಪಿಎ ಮೊಹಮ್ಮದ್ ನಯಿಮೋದ್ದಿನ್, ವಾಜೀದ್ ಇಮ್ರಾನ್, ಮೀರ್ಜಾ ಬೇಗ್, ನಸೀರ್ ಅಹ್ಮದ್,( ಗುತ್ತಿಗೆ ಆದಾರದ ಅಕೌಂಟೆಂಟ್) ಮೊಹಮ್ಮದ್ ರೆಹಮಾನ್ (ಪ್ರಾಜೆಕ್ಟ್ ಮ್ಯಾನೆಜರ್ ) ಬಂಧಿತ ಆರೋಪಿಗಳು.
ಇದನ್ನೂ ಓದಿ : ಅಕ್ರಮ ಹಣ ವರ್ಗಾವಣೆ ಪ್ರಕರಣ: ಅರವಿಂದ್ ಕೇಜ್ರಿವಾಲ್ ವಿಚಾರಣೆಗೆ ಅನುಮೋದನೆ
ಬಂಧಿತರಿಂದ 30 ಲಕ್ಷ ಹಣ ಜಪ್ತಿ ಮಾಡಿದ ಪೊಲೀಸರು, ಬ್ರಹ್ಮಪೂರ ಪೊಲೀಸರಿಂದ ಆರೋಪಿಗಳ ಬಂಧನ. ಮೊದಲು ಒಂದು ಚೆಕ್ ಅನ್ನು ಬ್ಯಾಂಕ್ ಗೆ ಕಳುಹಿಸಿ 35,56,640 ಡ್ರಾ ಮಾಡಿಕೊಂಡಿದ್ದ ಖದೀಮರು. ಬಳಿಕ ಮತ್ತೆರಡೂ ಚೆಕ್ ಗಳನ್ನ ಡ್ರಾ ಮಾಡಲು ಬ್ಯಾಂಕಿಗೆ ಕಳುಹಿಸಿದ್ದರು. ಈ ವೇಳೆ ಅನುಮಾನ ಬಂದು ಆಯುಕ್ತರ ಕಚೇರಿಗೆ ಮಾಹಿತಿ ನೀಡಿದ್ದ ಬ್ಯಾಂಕ್ ಸಿಬ್ಬಂದಿ. ತಕ್ಷಣವೇ ಎಚ್ಚೆತ್ತುಕೊಂಡು ದೂರು ದಾಖಲಿಸಿದ್ದ ಪಾಲಿಕೆ.
ಸದ್ಯ ಪಾಲಿಕೆ ಆಯುಕ್ತ ಪಿಎ ಸೇರಿ ಐವರನ್ನು ಪೊಲೀಸರು ಬಂಧಿಸಿದ್ದಾರೆ, ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಇದನ್ನೂ ನೋಡಿ : ಬೀದಿಬದಿ ವ್ಯಾಪಾರಿಗಳ ಐಕ್ಯತೆಯನ್ನು ಮುರಿದು ಹೋರಾಟವನ್ನು ಹತ್ತಿಕ್ಕಲು ಶಾಸಕ ವೇದವ್ಯಾಸ ಕಾಮತ್ ಕುಮ್ಮಕ್ಕು