ಬೆಂಗಳೂರು: ಫಾರಿನ್ ಹ್ಯಾಂಡ್ಲರ್ ಸೂಚನೆಯ ಮೇರೆಗೆ ರಾಷ್ಟ್ರೀಯ ತನಿಖಾ ದಳ ದಿ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಕ್ಕೆ ಸಿಕ್ಕಿತ್ತು ಎನ್ನುವುದನ್ನು ರಾಷ್ಟ್ರೀಯ ತನಿಖಾದಳ ಪತ್ತೆ ಮಾಡಿದೆ. ರಾಮೇಶ್ವರಂ
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಭಯೋತ್ಪಾದನಾ ಸಂಘಟನೆ ಪರ ಗೋಡೆ ಬರಹ ಹಾಗೂ ಕೊಯಮತ್ತೂರಿನ ಕಾರು ಬಾಂಬ್ ಸ್ಫೋಟ ಪ್ರಕರಣದಲ್ಲೂ ವಿದೇಶಿ ಹ್ಯಾಂಡ್ಲರ್ ಕೈವಾಡವಿರುವ ಶಂಕೆ ಎನ್‌ಐಎ ಅಧಿಕಾರಿಗಳಿಗೆ ಬಂದಿತ್ತು. ಆದರೆ, ಹ್ಯಾಂಡ್ಲರ್ ಯಾರು ಎಂಬ ಬಗ್ಗೆ ಮಾಹಿತಿ ದೊರೆತಿರಲಿಲ್ಲ.
ಇದನ್ನೂ ಓದಿ: ಕಂಪೆನಿಯ ಬ್ಲಾಸ್ಟ್‌ನಲ್ಲಿ ಗಾಯಗೊಂಡಿದ್ದ ಕಾರ್ಮಿರಿಬ್ಬರು ಮೃತ
ಈ ಸಂಬಂಧ ಎನ್‌ಐಐ ಈ ಕೃತ್ಯದ ಸಂಚಿನಲ್ಲಿ ಭಾಗಿಯಾಗಿದ್ದಾರೆನ್ನಲಾದ 11 ಮಂದಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ಕಳೆದ ಮಾರ್ಚ್ 1 ರಂದು ಈ ಸ್ಪೋಟ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ ಎನ್‌ಐಎ ಮುಸಾವೀರ್ ಹುಸೇನ್ ಶಾಜೀಬ್ ಹಾಗೂ ಅಬ್ದುಲ್ ಮಥೀನ್ ಅಹಮದ್ ತಾಹಾನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಹಲವು ಮಾಹಿತಿಗಳು ಹೊರಗೆ ಬಿದ್ದಿವೆ.
ʼಕಚ್ಚಾ ಬಾಂಬ್ (ಐಇಡಿ) ತಯಾರಿಸಿ ಹೇಳಿದ ಸ್ಥಳದಲ್ಲಿ ಇಟ್ಟು ಬರುವುದಷ್ಟೇ ನಮ್ಮ ಕೆಲಸ. ವಿದೇಶದಲ್ಲಿರುವ ಹ್ಯಾಂಡ್ಲರ್, ಕೋಡ್ ವರ್ಡ್ ಮೂಲಕ ಸೂಚನೆ ನೀಡಿದ್ದ. ಹೀಗಾಗಿ, ಬಾಂಬ್ ಇಟ್ಟೆವು. ನಮ್ಮ ಕೆಲಸಕ್ಕೆ ಹಲವರು ಹಣಕಾಸು ಹಾಗೂ ಇತರೆ ನೆರವು ನೀಡಿದ್ದಾರೆ’ ಎಂಬುದಾಗಿ ಅಬ್ದುಲ್ ತಾಹಾ ಹಾಗೂ ಮುಸಾವೀರ್ ಬಾಯಿ ಬಿಟ್ಟಿದ್ದಾಗಿ ಮೂಲಗಳು ಹೇಳಿವೆ.
ಇದನ್ನೂ ನೋಡಿ: ಲೈಂಗಿಕ ಹತ್ಯಾಕಾಂಡ :ಪ್ರಜ್ವಲ್ ಬಂಧನ ವಿಳಂಬಕ್ಕೆ ಹೈಕೋರ್ಟ್ ವಕೀಲ ಬಿ.ಟಿ.ವೆಂಕಟೇಶ್ ಆಕ್ರೋಶ