ಮಕ್ಕಳಿಗೆ ‘ಜೈ ಶ್ರೀರಾಮ್’ ಎಂದು ಜಪಿಸುವಂತೆ ಒತ್ತಾಯ: ನಿರಾಕರಿಸಿದಾಗ ಅವರಿಗೆ ಚಪ್ಪಲಿಯಲ್ಲಿ ಹೊಡೆದ ಯುವಕ

ಮಧ್ಯಪ್ರದೇಶ: ಮಧ್ಯಪ್ರದೇಶದ ರತ್ನಂನಲ್ಲಿ ಮೂವರು ಮಕ್ಕಳ ಮೇಲೆ ಒಬ್ಬ ಯುವಕ “ಜೈ ಶ್ರೀರಾಮ್” ಎಂದು ಕೂಗುವಂತೆ ಒತ್ತಾಯಿಸಿದ್ದು, ಹಲ್ಲೆ ನಡೆಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಯುವಕ “ಜೈ ಶ್ರೀರಾಮ್” ಎಂದು ಕೂಗುವಂತೆ ಒತ್ತಾಯಿಸಿದ್ದು, ಮಕ್ಕಳು ಅದನ್ನು ನಿರಾಕರಿಸಿದಾಗ ಅವರಿಗೆ ಚಪ್ಪಲಿಯಿಂದ ಹೊಡೆದಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ಬಂಧಿಸಲು ತಂಡ ರಚಿಸಿದ್ದಾರೆ.

ಇದನ್ನೂ ಓದಿ : ಚಿಕ್ಕಮಗಳೂರು | ದಲಿತ ಯುವಕರು ದೇವಸ್ಥಾನ ಪ್ರವೇಶಿಸಿದ್ದಕ್ಕೆ ಎರಡು ದಿನಗಳಿಂದ ಪೂಜೆ ಸ್ಥಗಿತ

ಯುವಕನೊಬ್ಬ ಮೂರು ಮಕ್ಕಳಿಗೆ ಚಪ್ಪಲಿಯಿಂದ ಹೊಡೆದು ‘ಜೈ ಶ್ರೀರಾಮ್’ ಎಂದು ಜಪಿಸುವಂತೆ ಒತ್ತಾಯಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ . ಮಕ್ಕಳು ಮುಸ್ಲಿಂ ಸಮುದಾಯದವರೆಂದು ತಿಳಿದುಬಂದಿದ್ದು, ಅವರಲ್ಲಿ ಒಬ್ಬ ಬಾಲಕ ‘ಅಲ್ಲಾಹ’ ಎಂದು ಕೂಗಿದ ತಕ್ಷಣ ಯುವಕ ಅವರಿಗೆ ಚಪ್ಪಲಿಯಲ್ಲಿ ಮನಬಂದಂತೆ ಹೊಡೆಯಲು ಪ್ರಾರಂಭಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಮಧ್ಯಪ್ರದೇಶದ ರತ್ನಂ ಜಿಲ್ಲೆಯಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ.

ಹಲ್ಲೆ ನಡೆಸಿರುವ ವಿಡಿಯೋ ಲಿಂಕ್‌

ಮನಕ್ ಚೌಕ್ ಪೊಲೀಸ್ ಠಾಣೆ ವ್ಯಾಪ್ತಿಯ ಅಮೃತಸಾಗರ್ ತಲಾಬ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ಅಮೂಮೆಂಟ್ ಪಾರ್ಕ್ ಬಳಿ ಈ ಘಟನೆ ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈಗಾಗಲೇ ಪೊಲೀಸರು ವೈರಲ್ ಆದ ವಿಡಿಯೋವನ್ನು ಪರಿಗಣನೆಗೆ ತೆಗೆದುಕೊಂಡಿದ್ದು ಪ್ರಕರಣದ ತನಿಖೆಗಾಗಿ ಸೈಬರ್ ಅಧಿಕಾರಿಗಳನ್ನೊಳಗೊಂಡ ತಂಡವನ್ನು ರಚಿಸಿದ್ದಾರೆ. ಆರೋಪಿಗಳ ವಿರುದ್ಧ ಹಲ್ಲೆ, ನಿಂದನೆ, ಕೊಲೆ ಬೆದರಿಕೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳ ಪತ್ತೆಗೆ ಪ್ರಯತ್ನ ಕೂಡ ನಡೆಯುತ್ತಿದೆ.

ಇದನ್ನೂ ನೋಡಿ : ಶಾಹಿ,ಗ್ನಾನವ್ಯಾಪಿ,ಸಂಭಾಲ್,ಅಜ್ಮೀರ್ ಚಿಸ್ತಿ ದರ್ಗಾ,ಮಸೀದಿಗಳ ಸಮೀಕ್ಷೆಯೂ, ಪೂಜಾ ಸ್ಥಳ ಸಂರಕ್ಷಣಾ ಕಾಯ್ದೆ ಉಲ್ಲಂಘನೆಯೂ

Donate Janashakthi Media

Leave a Reply

Your email address will not be published. Required fields are marked *