ಪೊನ್ನಣ್ಣ ಕ್ಷೇತ್ರದಲ್ಲಿ ಪ್ರಥಮ ಪ್ರಗತಿಫಥ ರಸ್ತೆ ಯೋಜನೆಗೆ ಚಾಲನೆ

ಮಡಿಕೇರಿ: ಗ್ರಾಮೀಣ ಪ್ರದೇಶಗಳಲ್ಲಿ ಸಾರಿಗೆ ಸಂಪರ್ಕ ಉನ್ನತೀಕರಣದ ಹಿನ್ನಲೆ ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಪ್ರಗತಿಪಥ ರಸ್ತೆ ಯೋಜನೆಯ ಪ್ರಪ್ರಥಮ ಯೋಜನೆಗೆ ಮಾನ್ಯ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರ ಕ್ಷೇತ್ರ ವ್ಯಾಪ್ತಿಯಲ್ಲಿ ಚಾಲನೆ ದೊರಕಿದೆ.

ಇದನ್ನು ಓದಿ :-ಬೆಂಗಳೂರು| ವಿಧಾನಪರಿಷತ್‌ನ 4 ಸ್ಥಾನಗಳಿಗೆ 40ಕ್ಕೂ ಹೆಚ್ಚು ಮಂದಿ ಪೈಪೋಟಿ

ಮಡಿಕೇರಿ ತಾಲೂಕಿನ ಬೆಟ್ಟಗೇರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೆರವನಾಡು ಗ್ರಾಮದ ಅಪ್ಪಂಗಳದಿಂದ ಅರುವತ್ತೋಕ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಎ.ಎಸ್.ಪೊನ್ನಣ್ಣ ನವರು ತುರ್ತು ದೆಹಲಿಗೆ ತೆರಳಿದ ಹಿನ್ನಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿ ಗ್ರಾಮಸ್ಥರು ಚಾಲನೆ ನೀಡಿದರು.

ಈ ಸಂಧರ್ಭದಲ್ಲಿ ಮಾತನಾಡಿದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾರವರು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು 2025-26 ನೇ ಸಾಲಿನ ಬಜೆಟ್ ನಲ್ಲಿ ರಾಜ್ಯದ 186 ಗ್ರಾಮೀಣ ವಿಧಾನ ಸಭಾ ಕ್ಷೇತ್ರಗಳಲ್ಲಿ ಗ್ರಾಮಗಳಗೆ ಸಂಪರ್ಕಿಸುವ 7110 ಕಿ.ಮೀ. ರಸ್ತೆಗಳ ನಿರ್ಮಾಣ ಮತ್ತು ಅಭಿವೃದ್ಧಿ ಗಾಗಿ 8500 ಕೋಟಿ ರೂಗಳನ್ನು ಪ್ರಗತಿಪಥ ಯೋಜನೆಗೆ ಮೀಸಲಿಟ್ಟಿದ್ದು ಪ್ರತಿ ವಿಧಾನ ಸಭಾ ಕ್ಷೇತ್ರಗಳಿಗೆ 40ರಿಂದ 50 ಕಿ.ಮೀ. ಗ್ರಾಮೀಣ ರಸ್ತೆಗಳು ನಿರ್ಮಾಣಕ್ಕೆ ನಿಗದಿಪಡಿಸಲಾಗಿದೆ.
ಕೊಡಗು ಜಿಲ್ಲೆಯನ್ನು ವಿಶೇಷವಾಗಿ ಪರಿಗಣಿಸಿ ಪ್ರತಿ ಕ್ಷೇತ್ರದಲ್ಲಿ 100 ಕಿ.ಮೀ. ನಂತೆ ಮಡಿಕೇರಿ ಮತ್ತು ವಿರಾಜಪೇಟೆ ಕ್ಷೇತ್ರಗಳಿಗೆ ಒಟ್ಟು 200 ಕಿ.ಮೀ ಗೆ ಸಚಿವ ಸಂಪುಟದಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಇದನ್ನು ಓದಿ :-ಸ್ವತಂತ್ರ ಭಾರತದಲ್ಲೂ ದಲಿತರ ಬದುಕು ಚಿಂತಾಜನಕ – ಡಾ.ಕ್ರಷ್ಣಪ್ಪ ಕೊಂಚಾಡಿ

ಪ್ರಗತಿಪಥ ಯೋಜನೆಯಲ್ಲಿ ಸುಸಜ್ಜಿತ ಸರ್ವ ಋತು ಗುಣಮಟ್ಟದ ರಸ್ತೆಗಳು ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಗಮದಿಂದ ನಿರ್ಮಾಣವಾಗುತ್ತಿದ್ದು ಐದು ವರ್ಷಗಳ ಅವಧಿಯ ನಿರ್ವಹಣೆಯನ್ನು‌ ಇಲಾಖೆಯೇ ನಿರ್ವಹಿಸಲಿದೆ ಎಂದು ವಿವರಿಸಿದರು.ಇಂತಹ
ಉತ್ತಮ ಯೋಜನೆಯು ಎ.ಎಸ್.ಪೊನ್ನಣ್ಣ ನವರ ಪ್ರಯತ್ನದಿಂದ ಪ್ರಥಮವಾಗಿ ಕೊಡಗಿನಲ್ಲಿ ಅನುಷ್ಠಾನ ವಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿದರು.

ಗ್ರಾಮಸ್ಥರಾದ ಪೂಜಾರಿರ ಹರ್ಷ ಕೇಶವ ರವರು ಮಾತನಾಡಿ ಕಳೆದ ಎರಡು ದಶಕಗಳಿಂದ ಕಾಲು ದಾರಿಯಾಗಿರುವ ಈ ರಸ್ತೆಯನ್ನು ವಾಹನ ಸಂಚರಿಸುವ ಮೇಲ್ದರ್ಜೆಯ ರಸ್ತೆಯನ್ನಾಗಿ ಮಾರ್ಪಡಿಸಲು ಪ್ರಯತ್ನ ಪಟ್ಟಿದ್ದು ಈಗ ಎ.ಎಸ್.ಪೊನ್ನಣ್ಣ ನವರ ಸಹಕಾರದಿಂದ ಸಾಕಾರಗೊಳ್ಳುತ್ತಿದೆ.

ರಸ್ತೆ ಉದ್ಘಾಟನೆ ಗೆ ಪೊನ್ನಣ್ಣನವರು ಆಗಮಿಸುವುದಾಗಿ ಮಾತು ಕೊಟ್ಟಿದ್ದು ಆ ಸಂಧರ್ಭದಲ್ಲಿ ಅವರನ್ನು ಗೌರವದಿಂದ ಬರಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ರಸ್ತೆ ನಿರ್ಮಾಣಕ್ಕೆ ಸಹಕರಿಸಿದ ಮುಖಂಡರಾದ ತೆನ್ನಿರ ಮೈನಾ,ಪೂಜಾರಿರ ಪ್ರದೀಪ್ ಕುಮಾರ್ ಹಾಗೂ ಬಾಳಾಡಿ ಪ್ರತಾಪ್ ರವರಿಗೆ ಧನ್ಯವಾದಗಳನ್ನು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *