ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಖಚಿತ ಪಡಿಸಬೇಕು – ಡಾ ಹೇಮಲತಾ

ತಮಿಳುನಾಡು: ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ, ಸಮಾನ ಕೂಲಿ, ಆರೋಗ್ಯ, ಸುರಕ್ಷತೆ ಹಾಗೂ ಸಾಮಾಜಿಕ ಭದ್ರತೆಯನ್ನು ನೀಡಬೇಕು ಎಂದು ಸಿಐಟಿಯು ಅಖಿಲ ಭಾರತ ಅಧ್ಯಕ್ಷರಾದ ಡಾ ಹೇಮಲತಾ ಹೇಳಿದರು. 

ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆಯುತ್ತಿರುವ ಅಖಿಲ ಭಾರತ ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರಥಮ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸೇರಿ ವಿವಿಧ ರಾಜ್ಯ ಸರ್ಕಾರಗಳು ಹೇಗೆ ಕಾರ್ಮಿಕ ವಿರೋಧಿ ಹಾಗೂ ಮಹಿಳಾ ವಿರೋಧಿ ನಿಲುವುಗಳನ್ನು ಕೈಗೊಂಡಿದೆ ಎನ್ನುವುದನ್ನು ವಿವರಿಸಿದರು.

ಇದನ್ನೂ ಓದಿ:ಸಾಮಾಜಿಕ ಭದ್ರತೆಗಾಗಿ ಮಹಿಳಾ ಕಟ್ಟಡ ನಿರ್ಮಾಣ ಕಾರ್ಮಿಕರ ಪ್ರಥಮ ರಾಜ್ಯ ಮಟ್ಟದ ಸಮಾವೇಶ

ವಿವಿಧ ರಾಜ್ಯಗಳಲ್ಲಿ ಲಭ್ಯವಿರುವ ಕಟ್ಟಡ ಕಾರ್ಮಿಕ‌ ನಿಧಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಮತ್ತು ಇದರ ವಿರುದ್ದ ಕಾರ್ಮಿಕರು ಹೋರಾಟಗಳನ್ನು ನಡೆಸುತ್ತಿರುವ ಬಗ್ಗೆ ಡಾ ಹೇಮಲತಾ ಬೆಳಕು ಚೆಲ್ಲಿದರು. ಮಹಿಳಾ

ಸಮಾವೇಶವು ನಿರ್ಮಾಣ ವಲಯಗಳಲ್ಲಿ ಮಹಿಳಾ ಕಾರ್ಮಿಕರು ಎದುರಿಸುತ್ತಿರುವ ಕನಿಷ್ಠ ವೇತನ,ಕೆಲಸದ ಸ್ಥಳಗಳಲ್ಲಿ ಎದುರಿಸುತ್ತಿರುವ ಹಲವು ವಿವಿಧ ಸಮಸ್ಯೆಗಳು ಅದಕ್ಕೆ ಇರುವ ಪರಿಹಾರಗಳು ಮತ್ತು ಮಹಿಳಾ ಕಾರ್ಮಿಕರಲ್ಲಿ ಅಗತ್ಯವಿರುವ ಸಂಘಟನಾ ಜಾಗೃತಿ ಮೊದಲಾದ ಅಂಶಗಳ ಕುರಿತು ಸಮಾವೇಶವು ಚರ್ಚಿಸಿ ತೀರ್ಮಾನ ಕೈಗೊಳ್ಳಲಿದೆ ಎಂದರು.

ದೇಶದ ಹಲವು ರಾಜ್ಯಗಳಿಂದ ನಿರ್ಮಾಣ ವಲಯಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಮಹಿಳಾ ಕಾರ್ಮಿಕರು ಈ ಸಮಾವೇಶದಲ್ಲಿ ಭಾಗಿಯಾಗಿಯಾಗಿದ್ದರು.

ಸಮಾವೇಶದಲ್ಲಿ CWFI ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಯು.ಪಿ ಜೋಸೆಫ್, ಮಹಿಳಾ ಉಪ ಸಮಿತಿ ಸಂಚಾಲಕಿ ಶೀಲ,ಕರ್ನಾಟಕದ ಮಹಿಳಾ ಉಪಸಮಿತಿ ಸಂಚಾಲಕಿ ಕುಮಾರಿ ಸೇರಿದಂತೆ ಹಲವು ರಾಜ್ಯಗಳ ಮಹಿಳಾ ಮುಖಂಡರು ವೇದಿಕೆಯಲ್ಲಿ ಉಪಸ್ಥಿತರಿದ್ದರು ರಾಜ್ಯದ ದ.ಕನ್ನಡ ಉಡುಪಿ,ಉ.ಕನ್ನಡ,ತುಮಕೂರು, ರಾಯಚೂರು, ವಿಜಯನಗರ, ಬೆಂಗಳೂರು ಉತ್ತರ ಹಾಗೂ ದಕ್ಷಿಣ ಕೋಲಾರ, ಮಂಡ್ಯ, ಮೈಸೂರು,ಕೊಪ್ಪಳ ಮುಂತಾದ ಜಿಲ್ಲೆಗಳಿಂದ 19ಜನ ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮಹಿಳಾ

ವಿಡಿಯೋ ನೋಡಿ: ಮಹಿಳಾ

Donate Janashakthi Media

Leave a Reply

Your email address will not be published. Required fields are marked *