ಕಲಬುರಗಿ: ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಯುವಕನೊಂದಿಗೆ 15 ವರ್ಷದ ಬಾಲಕಿಯ ವಿವಾಹ ಮಾಡಿಸಿದ ಆರೋಪದಡಿ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಸೇರಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
ಬಾಲಕಿಯನ್ನು ಮದುವೆಯಾದ ಹಾಗರಗಾ ಕ್ರಾಸ್ ನಿವಾಸಿ ಸೈಯದ್ ಅಹಮದ್‌ರಾಜ್, ಕುರಾನ್ ಪಠಿಸಿ ಮದುವೆ ಮಾಡಿಸಿದ ವಿ.ಕೆ. ಸಲಗರ ಗ್ರಾಮದ ಶಿಕ್ಷಕ ಅಕ್ರಂ ಪಾಷಾ, ಚಿಂಚೋಳಿ ತಾಲ್ಲೂಕಿನ ಪೊಲಕಪಳ್ಳಿಯ ಬಾಲಕಿಯ ತಂದೆ ಶೇಖ್ ಇಸ್ಮಾಯಿಲ್ ಹಾಗೂ ತಾಯಿ ಇರ್ಫಾನಾ ಬೇಗಂ ವಿರುದ್ಧ ಬಾಲ್ಯವಿವಾಹ ನಿಷೇಧ ಕಾಯ್ದೆ ಮತ್ತು ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಮುಂದಿನ ದಿನಗಳಲ್ಲಿ ಎಲ್ಲಾ ಸಂಸ್ಥೆಗಳಲ್ಲೂ ಕನ್ನಡ ಬಾವುಟ ಹಾರಾಟ ಕಡ್ಡಾಯ ಮಾಡುತ್ತೇವೆ: ಡಿಸಿಎಂ ಡಿ.ಕೆ. ಶಿವಕುಮಾರ್
ಬಾಲಕಿಯ ಅನಾರೋಗ್ಯದ ಚಿಕಿತ್ಸೆಗೆಗಾಗಿ ಕಲಬುರಗಿಗೆ ಬಂದಿದ್ದ ಪೋಷಕರು ಸೈಯದ್ ಮನೆಯಲ್ಲಿ ಉಳಿದುಕೊಂಡಿದ್ದರು. ಬಳಿಕ ಸೈಯದ್ ಮನೆಯಲ್ಲಿ ನಿಖಾ (ಮದುವೆ) ಮಾಡಿಸಿದ್ದರು.
ಈ ಸಂಬಂಧ ಮಕ್ಕಳ ಸಹಾಯವಾಣಿಗೆ ದೂರು ಬಂದಿದ್ದು, ನಿಖಾ ಮಾಡಿಸಿದ ವಿಡಿಯೊ ಹಾಗೂ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಪ್ರಕರಣ ದಾಖಲಿಸಲಾಗಿದೆ. ಶಿಕ್ಷಕ ಅಕ್ರಂ ಪಾಷಾ ಇಸ್ಲಾಂ ಧರ್ಮದ ಪ್ರಕಾರ ಕುರಾನ್ ಪಠಿಸಿ ಬಾಲ್ಯವಿವಾಹ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ನೋಡಿ: ಹಿಂದೂ ರಾಷ್ಟ್ರಕ್ಕೆ ಸಂವಿಧಾನ | ಆರ್‌ಎಸ್‌ಎಸ್‌ನ ಅಪಾಯಕಾರಿ ನಡೆ Janashakthi Media