ಶಾಲಾ ಮಕ್ಕಳ ಸಮವಸ್ತ್ರ ಹಂಚಿಕೆಯಲ್ಲಿ ಗೋಲ್‌ಮಾಲ್‌ – ಕೆಹೆಚ್ಡಿಸಿ ಹಿಂದಿನ ವ್ಯವಸ್ಥಾಪಕ ಸೇರಿ ಮೂವರ ಮೇಲೆ ಎಫ್ಐಆರ್

ಬೆಂಗಳೂರು: ಸರ್ಕಾರಿ ಶಾಲೆಯ ಮಕ್ಕಳಿಗೆ ಕಳಪೆ ಗುಣಮಟ್ಟದ ಸಮವಸ್ತ್ರ ಒಟ್ಟೆ ಕೊಟ್ಟು ಕೋಟಿ ಕೋಟಿ ಹಣ ಲೋಟಿ ಮಾಡಲಾಗುತ್ತಿದೆ. ಎಂದು ಆರೋಪಿಸಿ ಜವಳಿ ಆಯುಕ್ತರ ಪಿಎ ಬಿ ಶ್ರೀಧರ್ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ದೂರಿನ ಅನ್ವಯ ಶೇಷಾದ್ರಿಪುರಂ ಪೊಲೀಸರು. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮವಸ್ತ್ರ ಹಗರಣ ನಡೆದಿದೆ ಎನ್ನಲಾಗಿದ್ದು, ಗುಣಮಟ್ಟದ ಸಮವಸ್ತ್ರ ಬಟ್ಟೆ ನೀಡದೆ ಹಣ ನುಂಗಿದ್ದಾರೆ ಎಂದು ಕೇಸ್ ದಾಖಲಾಗಿದೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಈ ಹಗರಣ ನಡೆದಿದ್ದು ಹಿಂದಿನ ವ್ಯವಸ್ಥಾಪಕ ಮುದ್ದಯ್ಯ ಎಸ್, ಶ್ರೀಧರ್ ಹಾಗೂ ಲಕ್ಷ್ಮಣ್ ಬಿ ವಿರುದ್ಧ ಐಪಿಸಿ ಸೆಕ್ಷನ್ 406, 420ಯಡಿ ಕೇಸ್ ದಾಖಲಾಗಿದೆ.

2021 -22 ಶೈಕ್ಷಣಿಕ ಸಾಲಿನಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸಮವಸ್ತ್ರ ನೀಡಲು ರಾಜ್ಯಾದ್ಯಂತ 1,34,05,729 ಮೀಟರ್ ಬಟ್ಟೆಯನ್ನು ನೀಡಲಾಗಿತ್ತು. ಒಂದರಿಂದ 10ನೇ ತರಗತಿವರೆಗಿನ ಗಂಡು ಮಕ್ಕಳಿಗೆ ಮತ್ತು ಒಂದರಿಂದ ಏಳನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಸಮವಸ್ತ್ರ ನೀಡಲಾಗಿದೆ. ಅದರಲ್ಲಿ ಎಂಟರಿಂದ 10ನೇ ತರಗತಿವರೆಗಿನ ಹೆಣ್ಣು ಮಕ್ಕಳಿಗೆ ಚೂಡಿದಾರ್‌ ಸೇರಿ ಎರಡು ಜೊತೆ ಸಮವಸ್ತ್ರ ನೀಡಲಾಗಿದೆ.

ಈ ಕೆಲಸವನ್ನು ಸರ್ಕಾರ ಕರ್ನಾಟಕ ಕೈ ಮಗ್ಗ ಅಭಿವೃದ್ಧಿ ನಿಗಮಕ್ಕೆ ನೀಡಿತ್ತು. ಆದ್ರೆ ಮೊದಲು ಹೇಳಿದ್ದಷ್ಟು ಒಳ್ಳೆಯ ಗುಣಮಟ್ಟದ ಬಟ್ಟೆ ನೀಡಿಲ್ಲಾ ಎಂದು ದೂರು ದಾಖಲಿಸಲಾಗಿದೆ. ನಿಗಮ ಪೂರೈಸಿದ ಬಟ್ಟೆಯು ಕಳಪೆ ಗುಣಮಟ್ಟದ್ದು. ಕಳಪೆ ಗುಣಮಟ್ಟದ ಬಟ್ಟೆ ನೀಡಿ ಕೋಟಿ ಕೋಟಿ ಹಣ ಲೋಟಿ ಮಾಡಲಾಗಿದೆ ಎಂದು ಜವಳಿ ಆಯುಕ್ತರ ಪಿಎ ಬಿ ಶ್ರೀಧರ್ ಆರೋಪಿಸಿದ್ದಾರೆ. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ನಿಯಮಿತದ ಹಿಂದಿನ ವ್ಯವಸ್ಥಾಪಕ ಮುದ್ದಯ್ಯ ಎಸ್, ಶ್ರೀಧರ್, ಲಕ್ಷ್ಮಣ್ ಬಿ ವಿರುದ್ಧ ಐಪಿಸಿ ಸೆಕ್ಷನ್ 406, 420ಯಡಿ ಕೇಸ್ ದಾಖಲಾಗಿದೆ.

Donate Janashakthi Media

Leave a Reply

Your email address will not be published. Required fields are marked *