ಮಂಡ್ಯ:ಮಂಡ್ಯ ಜಿಲ್ಲೆಯ ಪಾಂಡವಪುರದಲ್ಲಿ ಹೆಣ್ಣು ಭ್ರೂಣ ಹತ್ಯೆ ಮಾಡಲು 20 ಸಾವಿರ ರೂಪಾಯಿ ನಿಗದಿ ಮಾಡಲಾಗುತ್ತಿತ್ತು ಎಂದು ಇತ್ತಿಚೆಗೆ ಸರ್ಕಾರಿ ಆಸ್ಪತ್ರೆಯ ಕ್ವಾಟ್ರಸ್ ಒಂದರಲ್ಲಿ ಹೆಣ್ಣು ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿನ ನರ್ಸ್ ವಿಚಾರಣೆ ಹೇಳಿದ್ದಾರೆ.
ಅಷ್ಟೇ ಅಲ್ಲ, ಹೇಗೆ ಗರ್ಭಿಣಿಯರನ್ನು ಟಾರ್ಗೆಟ್ ಸ್ಕ್ಯಾನಿಂಗ್ಗೆ, ಭ್ರೂಣಹತ್ಯೆಗೆ 15ರಿಂದ 20 ಸಾವಿರ ರೂಪಾಯಿ ನಿಗದಿ ಮಾಡಿ ಈ ದಂಧೆ ನಡೆಸಲಾಗುತ್ತಿತ್ತು ಎಂದು ರೇಟಿಂಗ್ ಬಗ್ಗೆ ಹೇಳಿಕರುವ ಆಕೆ ಹೇಗೆ ಇದಕ್ಕೆ ಗಾಳ ಹಾಕಲಾಗುತ್ತಿತ್ತು ಎನ್ನುವುದನ್ನು ಎಳೆಎಳೆಯಾಗ ಆಕೆ ವಿವರಿಸಿದ್ದಾಳೆ.
ಬಂಧಿತ ನರ್ಸ್ ಹೇಳುವಂತೆ, ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸ್ಕಾನಿಂಗ್ ಸೆಂಟರ್ಗಳಿಗೆ ಬರುವ ಗರ್ಭಿಣಿಯರನ್ನು ಟಾರ್ಗೆಟ್ ಮಾಡಿ ಎರಡನೇ ಮಗುವಿನ ಸ್ಕ್ಯಾನಿಂಗ್ಗೆ ಬಂದಿದ್ದಾರೆ ಎಂದರೆ ಗಾಳ ಹಾಕುತ್ತಿದ್ದರು. ಅವರು ಅಂದರೆ ತಾಯಿ, ಮತ್ತು ಆಕೆಯ ಕಡೆಯವರು ಸ್ಕ್ಯಾನಿಂಗ್ ವರದಿ ನೋಡಿ ಒಂದುವೇಳೆ ಹೆಣ್ಣು ಮಗು ಬಗ್ಗೆ ನಿರಾಸಕ್ತಿ ತೋರಿಸಿದಲ್ಲಿ ಅವರನ್ನು ಭ್ರೂಣಹತ್ಯೆಗೆ ಅಪ್ರೋಚ್ ಮಾಡುತ್ತಿದ್ದ ಬಗ್ಗೆಯೂ ಅಲ್ಲದೇ ಸ್ಕ್ಯಾನಿಂಗ್ ಸೆಂಟರ್‌ಗಳು ಭ್ರೂಣ ಲಿಂಗ ಪರೀಕ್ಷೆ ಮಾಹಿತಿ ನೀಡುತ್ತಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ವರದಿಯಾದ ಡೆಂಗ್ಯೂ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ
ಎಲ್ಲವೂ ಎಂದುಕೊಂಡಂತೆ ನಡೆದು ಒಪ್ಪಿಗೆಯಾದಲ್ಲಿ ಒಂಟಿ ಮನೆಯಲ್ಲಿ ಸ್ಕ್ಯಾನಿಂಗ್ ನಡೆಸಿ ಹೆಣ್ಣು ಭ್ರೂಣ ಎಂದು ಖಚಿತವಾದರೆ ಪಾಂಡವಪುರಕ್ಕೆ ಗರ್ಭಿಣಿಯನ್ನು ಶಿಫ್ಟ್ ಮಾಡಿ ಬಳಿಕ ಸರ್ಕಾರಿ ಹೆಲ್ತ್ ಕ್ವಾರ್ಟರ್ಸಿನಲ್ಲಿ ಅಬಾರ್ಷನ್ ಮಾಡುತ್ತಿದ್ದರು ಎಂದು ನರ್ಸ್ ಮಾಹಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾಳೆ.
ಪ್ರಕರಣ ಸಂಬಂಧ ಪಾಂಡವಪುರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.ಇದುವರೆಗೆ 9 ಮಂದಿಯನ್ನು ಅರೆಸ್ಟ್ ಮಾಡಲಾಗಿದೆ. ಮತ್ತಿಬ್ಬರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ನರ್ಸ್ ನೀಡಿದ ಮಾಹಿತಿಯ ಪ್ರಕಾರ ಕೇವಲ ಎರಡೇ ತಿಂಗಳಲ್ಲಿ 15ಕ್ಕೂ ಹೆಚ್ಚು ಭ್ರೂಣ ಹತ್ಯೆ ನಡೆದಿದೆ. ಈ ದಂಧೆಯಲ್ಲಿ ಕೆಲ ಖಾಸಗಿ ಕ್ಲಿನಿಕ್ಗಳ ನರ್ಸ್ಗಳು ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಪ್ರಕರಣದ ಸಂಬಂಧ ಪಾಂಡವಪುರ ಎಸಿಯಿಂದಲೂ ಕೋರ್ಟ್ ಗೆ ದೂರು ದಾಖಲಾಗಿದೆ
ಇದನ್ನೂ ನೋಡಿ: ಪಂಜಾಬ್ ಲೋಕಸಭೆ : ” ದೆಲ್ಲಿ ದಾರಿ ಬಂದ್ ಮಾಡಿದ್ದ ಬಿಜೆಪಿಗೆ ಹಳ್ಳಿ ದಾರಿ ಬಂದ್ ” ವ್ಯಾಪಕಗೊಂಡ ಅನ್ನದಾತರ ಆಕ್ರೋಶ