ನವದೆಹಲಿ, ಜ 06 : ಫೆಬ್ರವರಿ 01 ರಂದು ಕೇಂದ್ರ ಬಜೆಟ್ ಮಂಡನೆಯಾಗಲಿದೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ಬಜೆಟ್ ಅಧಿವೇಶನದ ಮೊದಲ ಹಂತ ಜನವರಿ 29 ರಿಂದ ಆರಂಭವಾಗಲಿದ್ದು ಫೆಬ್ರವರಿ 15ರಂದು ಮುಕ್ತಾಯವಾಗಲಿದೆ. ಯಾವುದೇ ಅಡೆತಡೆಗಳಿಲ್ಲದೆ ಬಜೆಟ್ ಅಧಿವೇಶನವನ್ನು ಸಂಪೂರ್ಣಗೊಳಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಜೋಷಿ ಅವರು ನಿನ್ನೆ ಬಜೆಟ್ ಅಧಿವೇಶನ ದಿನಾಂಕವನ್ನು ಘೋಷಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿತ್ತಾ ಪ್ರತಿಕ್ರೀಯೆ ನೀಡಿದ್ದಾರೆ.
ಬಜೆಟ್ ಅಧಿವೇಶನದ ಮೊದಲಾರ್ಧ ಜನವರಿ 29ರಂದು ರಾಷ್ಟ್ರಪತಿಗಳು ಸಂಸತ್ತನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ರಾಷ್ಟ್ರಪತಿಗಳ ಭಾಷಣದ ಮೇಲೆ ಚರ್ಚೆಗಳು ನಡೆಯಲಿದೆ. ಫೆಬ್ರವರಿ 1ರಂದು ಕೇಂದ್ರ ಬಜೆಟ್ ಮಂಡಿಸಲಾಗುತ್ತದೆ. ಯಾವುದಾದರೂ ತುರ್ತು ಮಸೂದೆ ಅಥವಾ ವಿದೇಯಕವನ್ನು ತರಬೇಕೆಂದಿದ್ದರೆ ಮೊದಲ ಹಂತದಲ್ಲಿ ಅದಕ್ಕೆ ಆದ್ಯತೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.