ಹೊಸಪೇಟೆ: ದೇವದಾಸಿ ಮಹಿಳೆಯರ ಮಕ್ಕಳ ವಿವಿಧ ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ ರಾಜ್ಯ ಮಟ್ಟದ 2ನೇ ಸಮಾವೇಶ ಫೆಬ್ರವರಿ 25ರಂದು ನಡೆಯಲಿದೆ ಎಂದು ದೇವದಾಸಿ ಮಹಿಳಾ ವಿಮೋಚನಾ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಮಾಳಮ್ಮ ತಿಳಿಸಿದರು.
ಹೊಸಪೇಟೆಯ ಅಮೃತ ರೆಸಿಡೆನ್ಸಿಯಲ್ಲಿ ಸಮಾವೇಶ ನಡೆಯಲಿದ್ದು 100ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ದೇವದಾಸಿಯರ ಮಕ್ಕಳು ಸಮಾವೇಶದಲ್ಲಿ ಪಾಲ್ಗೊಳ್ಳುವ ಸಾಧ್ಯತೆಗಳಿವೆ ಎಂದು ಅವರು ಹೇಳಿದರು.
ದೇವದಾಸಿಯರ ಮಕ್ಕಳ ಶಿಕ್ಷಣ, ಆರೋಗ್ಯ, ಉದ್ಯೋಗ ಹಕ್ಕು ಸೇರಿದಂತೆ ಸಮಗ್ರ ಅಭಿವೃದ್ಧಿಯ ಬದಲಾವಣೆ ಮಾತ್ರ ಅನಿಷ್ಠ ಪದ್ದತಿ ನಿವಾರಣೆ ಆಗಲು ಸಾಧ್ಯ. ಈ ಕುರಿತು ಸಮಾವೇಶದಲ್ಲಿ ಸಕ್ರಿಯವಾಗಿ ಚರ್ಚೆ ನಡೆಸಲಾಗುತ್ತದೆ. ಅಲ್ಲದೇ, ಸೂಕ್ತ ಪರಿಹಾರವನ್ನು ಸರ್ಕಾರಕ್ಕೆ ಸಲಹೆಯಾಗಿ ನೀಡಲಾಗುತ್ತದೆ ಎಂದು ಮಾಳಮ್ಮ ತಿಳಿಸಿದ್ದಾರೆ.