17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವ (BIFFes) 2026ರ ಜನವರಿ 29 ರಿಂದ ಫೆಬ್ರವರಿ 6 ರವರೆಗೆ ನಡೆಯುತ್ತಿದೆ. ‘ಸ್ತ್ರೀ ಎಂದರೇ ಅಷ್ಟೇ ಸಾಕೆ’ ಎಂಬ ಮಹಿಳಾ ಸಬಲೀಕರಣದ ಥೀಮ್‌ನೊಂದಿಗೆ, 60ಕ್ಕೂ ಹೆಚ್ಚು ದೇಶಗಳ ಸುಮಾರು 110ಕ್ಕೂ ಹೆಚ್ಚು ಚಿತ್ರಗಳನ್ನು ರಾಜಾಜಿನಗರದ ಲುಲು ಮಾಲ್, ಸುಚಿತ್ರಾ ಫಿಲ್ಮ್ ಸೊಸೈಟಿ ಮತ್ತು ಡಾ. ರಾಜ್‌ಕುಮಾರ್ ಭವನದಲ್ಲಿ ಪ್ರದರ್ಶಿಸಲಾಗುತ್ತಿದೆ. ಕೆಲ ಚಿತ್ರಗಳ ಬಗ್ಗೆ ಸಿನಿಮಾಸಕ್ತರಾದ ಎಂ. ನಾಗರಾಜ ಶೆಟ್ಟಿ ಪರಿಚಯಿಸಿದ್ದಾರೆ.

Kontinrntal 25
ಚಿಂದಿ ಆಯುವವನೊಬ್ಬನನ್ನು ಆತನಿರುವ ಜಾಗದಿಂದ ಖಾಲಿ ಮಾಡಿಸಲು ಹೇಳಿದಾಗ ಆತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದಕ್ಕೆ ತಾನು ಕಾರಣಳಾದೆ ಎಂದು ನೊಂದುಕೊಳ್ಳುವ ಮಹಿಳೆ ಈ ನೋವಿನಿಂದ ಹೊರಬರಲು ಒದ್ದಾಡುತ್ತಾಳೆ.ಗೆಳತಿಯ ಸಾಂತ್ವನ, ತಾಯಿಯೊಂದಿಗೆ ಸಂವಾದ, ಪಾದರ್ ಸಲಹೆ ಯಾವುದೂ ಆಕೆಯನ್ನು ನೋವಿನಿಂದ ಮುಕ್ತಗೊಳಿಸುವುದಿಲ್ಲ. ಡೆಲಿವರಿ ಹುಡುಗ-ತನ್ನ ಹಳೆಯ ವಿದ್ಯಾರ್ಥಿಯೊಂದಿಗೆ ಸೇರುವುದರಿಂದ ತಾತ್ಕಾಲಿಕ ಸಮಾಧಾನವಷ್ಟೇ ಸಿಗುತ್ತದೆ.ಚಿತ್ರದಲ್ಲಿ ಕಾಫ್ಕ, ಜೆನ್, ಬುದ್ಧ, ಬೈಬಲ್ ಗಳ ಬಹಳಷ್ಟು ಉಕ್ತಿಗಳಿವೆ. ಉಕ್ರೇನ್, ಗಾಜಾ, ಪುಟಿನ್ ರಷ್ಯಾ ವಿಷಯಗಳನ್ನು ಚರ್ಚಿಸಲಾಗಿದೆ.
ಇದನ್ನೂ ಓದಿ : ಬೆಂಗಳುರು | ಯುಜಿಸಿ ನಿಯಮಗಳಿಗೆ ಎಸ್‌ಎಫ್‌ಐ ಸ್ವಾಗತ
ರುಮೇನಿಯಾದಲ್ಲಿ ಹೊಸ ಹೊಸ ಮಹಲ್ಲುಗಳು, ಅಪಾರ್ಟ್ ಮೆಂಟ್ ಗಳು ಬರುತ್ತಿದ್ದರೂ ನಿರ್ಗತಿಕರಿಗೆ,ಸಾಮಾನ್ಯ ಜನರಿಗೆ ನೆಲೆ ಇರದ ಸ್ಥಿತಿಯನ್ನು ಚಿತ್ರ ಹೇಳುವಂತಿದೆ.ನಮ್ಮಂತವರು ಚಿತ್ರದ ಮಹಿಳೆಯಂತೆ ಏನೂ ಮಾಡಲಾರದೆ ಸುಮ್ಮನೇ ಒದ್ದಾಡುವುದನ್ನು ಚಿತ್ರ ಸೂಚಿಸುತ್ತದೆ.
ನೋಡಲೇ ಬೇಕಾದ ಸಿನಿಮಾಗಳಲ್ಲೊಂದು.
A Poet

ವಿಕ್ಷಿಪ್ತ ಮನಸ್ಸಿನ ಕವಿಯೊಬ್ಬ ಕುಡಿತಕ್ಕೆ ಬಲಿಯಾಗಿ ಕುಟುಂಬದವರ, ಸಮಾಜದ ಅಲಕ್ಷ್ಯಕ್ಕೆ ಗುರಿಯಾಗಿರುತ್ತಾನೆ. ತಾನು ಪ್ರತಿಭಾವಂತ ಕವಿ, ತನಗೆ ಸಿಗಬೇಕಾದ ಮಾನ್ಯತೆ ಸಿಗಲಿಲ್ಲ ಎಂದು ತಿಳಿದ ಆತ ಕುಡಿತ ಚಟಕ್ಕೆ ಸಿಲುಕಿ ಯಾವ ಕೆಲಸವನ್ನೂ ಮಾಡುವುದಿಲ್ಲ. ಆತ ಸಹೋದರಿ ಬಲವಂತದಿಂದ ಪೊಯೆಟ್ರಿ ಕಲಿಸುವ ಉದ್ಯೋಗ ಕೊಡಿಸುತ್ತಾಳೆ. ಇದನ್ನೂ ಕುಡಿದೇ ಮಾಡುತ್ತಿರುವ ಆತ ಪ್ರತಿಭಾವಂತ ವಿದ್ಯಾರ್ಥಿಯೊಬ್ಬಳನ್ನು ಗುರುತಿಸುತ್ತಾನೆ. ಆಕೆಯ ಮೂಲಕ ದೂರವಾದ ಮಗಳಿಗೆ ಹತ್ತಿರವಾಗುವುದು ಅವನ ಇಚ್ಛೆ. ಆದರೆ ಆ ಹುಡುಗಿಯ ಇಷ್ಟವೇ ಬೇರೆ.ಇದರಿಂದಾಗ ಅತ ತೊಂದರೆ ಸಿಲುಕಿಕೊಳ್ಳಬೇಕಾಗುತ್ತದೆ.
ವಾಸ್ತವವನ್ನು ಅರಿಯಲಾರದ ದುರಂತ, ಭ್ರಮೆಗೂ,ನಿಜಕ್ಕೂ ಇರುವ ಅಂತರವನ್ನು ಹೇಳುವ ಚಿತ್ರದಲ್ಲಿ ಪೋಯೆಟ್ ಪಾತ್ರದ ಅಭಿನಯ ನೆನಪಲ್ಲಿ ಉಳಿಯುತ್ತದೆ. ಅರ್ಥವತ್ತಾದ ಅಂತ್ಯ ಇರುವ ಚಿತ್ರ.
SIRAT

ಮೈ ಮರೆತು ನೃತ್ಯ ಮಾಡುತ್ತಿರುವ ಪ್ರದೇಶಕ್ಕೆ ತಂದೆ ಮತ್ತು ಎಂಟತ್ತು ವರ್ಷದ ಮಗ ಬರುತ್ತಾರೆ. ಮಗಳು ರೇವ್ ನೃತ್ಯ ಮಾಡುವಲ್ಲಿ ಕಳೆದುಹೋಗಿರುತ್ತಾಳೆ. ಮೊರಕ್ಕೋದ ಮತ್ತೊಂದು ಭಾಗದಲ್ಲಿ ರೇವ್ ನೃತ್ಯ ಇದೆಯೆಂದು ತಿಳಿಯುತ್ತದೆ. ಅವಳನ್ನು ಹುಡುಕುವ ಪ್ರಯತ್ನದಲ್ಲಿ ನೃತ್ಯ ಮಾಡುತ್ತಿದ್ದ ಕೆಲವರು ಜೊತೆಯಾಗುತ್ತಾರೆ. ಅಪನಂಬಿಕೆಯಿಂದ ಮೂರು ವಾಹನಗಳಲ್ಲಿ ಆರಂಭವಾದ ಪಯಣ ಪರಸ್ಪರರನ್ನು ಬೆಸೆಯುತ್ತದೆ. ದಾರಿಯದ್ದಕ್ಕೂ ಹಲವು ಅನುಭವಗಳಾಗುತ್ತವೆ. ಹೊಳೆ ದಾಟಿಸುವುದು, ಪೆಟ್ರೋಲ್, ಆಹಾರ ಹಂಚಿಕೊಳ್ಳುವುದು ಮತ್ತು ತಮಾಷೆಯ ಪ್ರಸಂಗಗಳೂ ನಡೆಯುತ್ತಿರುವಾಗ
ವಾಹನವೊಂದು ಹಿಂದಕ್ಕೆ ಜರಗುವುದರೊಂದಿಗೆ ದುರ್ಘಟನೆಗಳು ಒಂದರ ಮೇಲೊಂದು ನಡೆಯುತ್ತವೆ.
ಚಿತ್ರದಲ್ಲಿ ಹಾಡು, ಕುಣಿತ ಮತ್ತು ಹಿನ್ನೆಲೆ ಸಂಗೀತ ಪರಿಣಾಮಕಾರಿಯಾಗಿದೆ. ಮೊರಕ್ಕಾದ ಮರುಭೂಮಿ,ಕಲ್ಲಿನ ಬೆಟ್ಟಗಳು, ಕಡಿದಾದ ರಸ್ತೆ ಇವನ್ನು ಅದ್ಭುತವಾಗಿ ಚಿತ್ರೀಕರಿಸಲಾಗಿದೆ.
ಸೈರಾಟ್ ಎಂದರೆ ಅರೆಬಿಕ್ ನಲ್ಲಿ ಸ್ವರ್ಗ ತಲುಪುವ ಕಡಿದಾದ ದಾರಿ ಎನ್ನುವ ಅರ್ಥವಂತೆ. ಮೇಲ್ನೋಟಕ್ಕೆ ಕಾಣುವುದಕ್ಕಿಂತ ಹೆಚ್ಚಿನ ಅರ್ಥವನ್ನು ಕಂಡುಕೊಳ್ಳಲು ಪ್ರೇರೆಪಿಸುವ ಚಿತ್ರ ಒಳ್ಳೆಯ ಸಿನಿಮಾಟಿಕ್ ಅನುಭವ ನೀಡುತ್ತದೆ.
ಇದನ್ನೂ ನೋಡಿ : ಬೆಂಗಳೂರು ಚಲನಚಿತ್ರೋತ್ಸವ| ಪ್ಯಾಲೆಸ್ತೀನ್ ಸಿನಿಮಾಗಳಿಗೆ ನಿರ್ಬಂಧ – ಪ್ರಕಾಶ್ ರಾಜ್ ಆಕ್ರೋಶ Janashakthi Media
