ಬೆಂಗಳೂರು: ಬರದಿಂದ ನೀರಲ್ಲದೇ ಮಳೆಯಿಲ್ಲದೇ ಕಂಗೆಟ್ಟಿದ್ದ ರೈತಾಪಿ ಚಟುವಟಿಕೆಗಳಿಗೆ ಮುಂಗಾರು ಖುಷಿ ತಂದಿದೆ ಎಂದು ಸಿಎಂ ಕಚೇರಿ ಹೇಳಿದೆ. ರೈತರು
ಈ ಬಾರಿಯ ಭರ್ಜರಿ ಮುಂಗಾರು ಮಳೆಯಿಂದ ಉತ್ತೇಜಿತರಾಗಿರುವ ನಾಡಿನ ರೈತರು ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ತೋರಿರುವುದರಿಂದ 33 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಪೂರ್ಣಗೊಂಡಿದೆ. ಜೂನ್ ಅಂತ್ಯದ ವೇಳೆಗೆ ಈ ವರ್ಷದ ಉದ್ದೇಶಿತ ಬಿತ್ತನೆ ಗುರಿಯ ಶೇ.40 ರಷ್ಟು ಸಾಧನೆಯಾಗಿರುವುದು ಅತ್ಯಂತ ಸಂತಸದ ಸುದ್ದಿ ಎಂದು ಹೇಳಿದೆ.
ಇದನ್ನು ಓದಿ : ಮೆಟ್ರೊ ಕಾಮಗಾರಿ ಎಫೆಕ್ಟ್ : ನಾಗವಾರ ರಸ್ತೆ ಕುಸಿತ!
ಮುಂದಿನ ಎರಡು ತಿಂಗಳ ಕಾಲ ಸಮೃದ್ಧ ಮಳೆಯಾಗಲಿದ್ದು, ನಾಡಿನ ರೈತರ ಕೃಷಿ ಕಾರ್ಯಕ್ಕೆ ಅಗತ್ಯವಿರುವ ಬೀಜ, ರಾಸಾಯನಿಕ ಗೊಬ್ಬರವನ್ನು ಒದಗಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಿಎಂ ಟ್ವೀಟ್ ಮೂಲಕ ದೃಢಪಡಿಸಿದ್ದಾರೆ.
ಕೃಷಿಗೆ ಪೂರಕವಾಗಿರುವ ಹವಾಮಾನದ ಸಂಪೂರ್ಣ ಸದುಪಯೋಗ ಪಡೆದುಕೊಂಡು ರಾಜ್ಯದ ರೈತಾಪಿ ವರ್ಗ ಹೆಚ್ಚು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲಿ, ನಿಮ್ಮ ಶ್ರಮಕ್ಕೆ ಬೆಂಬಲವಾಗಿ ನಮ್ಮ ಸರ್ಕಾರ ನಿಲ್ಲಲಿದೆ ಎಂಬ ವಾಗ್ದಾನ ನೀಡುತ್ತೇನೆ ಎಂದು ಸಿಎಂ ಹೇಳಿದ್ದಾರೆ.
ಇದನ್ನು ನೋಡಿ : ಸೌಹಾರ್ದತೆಯ ತಾಣ, ಮೊಹಮ್ಮದ್ ಗವಾನ್ ಮದರಸಾ Janashakthi Media