ಬೆಂಗಳೂರು: ನಕಲಿ 3 ರೋಜಸ್ ಟೀ ಪೌಡರ್ ತಯಾರಿಸುತ್ತಿದ್ದ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದು, 200 ಕೆಜಿ ನಕಲಿ ಟೀ ಪೌಡರ್, ಯಂತ್ರವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಉತ್ತರ ತಾಲೂಕಿನ ಗಂಗೊಂಡನಹಳ್ಳಿಯಲ್ಲಿ ಮನೆಯೊಂದರಲ್ಲಿ ನಕಲಿ ಟೀ ಪೌಡರ್ ತಯಾರಿಸುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. 3 Roses
ದಾಳಿ ವೇಳೆ ಮಾಲೀಕ ಮಾಧುಸಿಂಗ್ ಪರಾರಿಯಾಗಿದ್ದಾನೆ. ದಾಳಿಯಲ್ಲಿ 200 ಕೆಜಿ ಟೀ ಪೌಡರ್, ಕೃತ್ಯಕ್ಕೆ ಬಳಸುತ್ತಿದ್ದ ಯಂತ್ರವನ್ನು ಜಪ್ತಿ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ 6 ತಿಂಗಳಿಂದ ಬೆಂಗಳೂರು ಗ್ರಾಮಾಂತರ , ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ 3 ರೋಜಸ್ ಟೀ ಪುಡಿ ವಹಿವಾಟು ಕುಸಿದಿತ್ತು. 3 Roses
ಇದನ್ನು ಓದಿ : ‘ಸೌಹಾರ್ದತೆಗೆ ಸಮಾನತೆ ಅತ್ಯಗತ್ಯ’ – ‘ಸೌಹಾರ್ದ ಕರ್ನಾಟಕ’ ರಾಜ್ಯ ಸಮಾವೇಶದಲ್ಲಿ ಪ್ರೊ. ಬರಗೂರು
ಈ ಹಿನ್ನೆಲೆಯಲ್ಲಿ ಕಂಪನಿ ಸೇಲ್ಸ್ ಟೀಂ ಕಾರಣ ಹುಡುಕಲು ಮುಂದಾದ ವೇಳೆ 3 ರೋಜಸ್ ನಕಲಿ ಟೀ ಪುಡಿ ತಯಾರಾಗುತ್ತಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕಂಪನಿ ಪೊಲೀಸರಿಗೆ ದೂರು ನೀಡಿತ್ತು. ಖಚಿತ ಮಾಹಿತಿ ಮೇರೆಗೆ 3 ರೋಜಸ್ ಕಂಪನಿ ಅಧಿಕಾರಿಗಳು ಹಾಗೂ ಪೊಲೀಸರು ಮನೆ ಮೇಲೆ ದಾಳಿ ನಡೆಸಿ ಪರಿಶೀಲಿಸಿದಾಗ ನಕಲಿ ಟೀ ಪೌಡರ್ ಪತ್ತೆಯಾಗಿದೆ. 3 Roses
ಇದನ್ನು ನೋಡಿ : ನೆಮ್ಮದಿಯ ನಿವೃತ್ತಿಗೆ ಎನ್‌ಪಿಎಸ್ ಎಂಬ ತೂಗುಗತ್ತಿ – ಕೆ. ಮಹಾಂತೇಶ್ Janashakthi Media