“ಪಾಕಿಸ್ತಾನ ಫಾಲೋವರ್ಸ್” ಸುಳ್ಳು ಪೋಸ್ಟ್ ಹಂಚಿದ ಮಾಜಿ ಸಚಿವ ಸುರೇಶ್ ಕುಮಾರ್!

ಬೆಂಗಳೂರು: “ಕಾಕ್ರೋಚ್ ಜನತಾ ಪಾರ್ಟಿ” ಹೆಸರಿನ ಇನ್‌ಸ್ಟಾಗ್ರಾಂ ಖಾತೆಯ ಫಾಲೋವರ್‌ಗಳಲ್ಲಿ 49% ಮಂದಿ ಪಾಕಿಸ್ತಾನದಿಂದಿದ್ದಾರೆ ಎಂದು ಹೇಳುವ ಗ್ರಾಫಿಕ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಪೋಸ್ಟ್ ಅನ್ನು ಕರ್ನಾಟಕದ ಮಾಜಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹಂಚಿಕೊಂಡಿದ್ದಾರೆ.

ವೈರಲ್ ಆಗಿರುವ ಗ್ರಾಫಿಕ್‌ನಲ್ಲಿ “Cockroach Janta Party” ಖಾತೆಗೆ 11.2 ಮಿಲಿಯನ್ ಫಾಲೋವರ್ಸ್ ಇದ್ದು, ಅದರಲ್ಲಿ 49% ಪಾಕಿಸ್ತಾನ, 14% ಅಮೆರಿಕ, 14% ಬಾಂಗ್ಲಾದೇಶ ಮತ್ತು ಕೇವಲ 9% ಭಾರತದಿಂದಿದ್ದಾರೆ ಎಂದು ತೋರಿಸಲಾಗಿದೆ.

ಆದರೆ ಈ ಪೋಸ್ಟ್ ಹಲವು ಸುಳ್ಳುಗಳಿಂದ ಕೂಡಿದೆ. ಇನ್‌ಸ್ಟಾಗ್ರಾಂ ಅಥವಾ ಮೆಟಾ ಸಾರ್ವಜನಿಕವಾಗಿ ಯಾವುದೇ ಖಾತೆಯ “country-wise follower analytics” ಮಾಹಿತಿಯನ್ನು ಎಲ್ಲರಿಗೂ ಲಭ್ಯವಾಗುವಂತೆ ನೀಡುವುದಿಲ್ಲ. ಸಾಮಾನ್ಯವಾಗಿ ಈ ವಿವರಗಳು ಖಾತೆಯ ಅಡ್ಮಿನ್ ಅಥವಾ ನಿರ್ವಾಹಕರಿಗೆ ಮಾತ್ರ Meta Insights ಮೂಲಕ ಕಾಣಿಸುತ್ತವೆ.

ಹೀಗಾಗಿ, ಅಡ್ಮಿನ್ ಹೊರತುಪಡಿಸಿ ಬೇರೆಯವರು ಈ ರೀತಿಯ ನಿಖರ analytics ಮಾಹಿತಿ ಪಡೆಯುವುದು ಪ್ರಶ್ನಾರ್ಹವಾಗಿದೆ. ವೈರಲ್ ಆಗಿರುವ ಚಿತ್ರದಲ್ಲಿ ಮೂಲ, ದಿನಾಂಕ, analytics ಪ್ಲಾಟ್‌ಫಾರ್ಮ್ ಅಥವಾ ಅಧಿಕೃತ ದೃಢೀಕರಣದ ಯಾವುದೇ ವಿವರಗಳೂ ಕಾಣುತ್ತಿಲ್ಲ.

ಇದನ್ನೂ ಓದಿ : ‘ಕಾಕ್ರೋಚ್ ಜನತಾ ಪಾರ್ಟಿ’ : ಯುವಜನರ ಅಸಮಾಧಾನದ ಧ್ವನಿಯಾದ ಡಿಜಿಟಲ್ ಚಳವಳಿ

ಡಿಜಿಟಲ್ ಮಾಧ್ಯಮ ವಿಶ್ಲೇಷಕರ ಪ್ರಕಾರ, ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಉದ್ದೇಶಗಳಿಂದ ಎಡಿಟ್ ಮಾಡಿದ ಗ್ರಾಫಿಕ್‌ಗಳು ಅಥವಾ ದೃಢೀಕರಿಸದ ಅಂಕಿಅಂಶಗಳು ಹರಡುವುದು ಸಾಮಾನ್ಯವಾಗಿದೆ. ವಿಶೇಷವಾಗಿ “ಪಾಕಿಸ್ತಾನ” ಎಂಬ ಹೆಸರನ್ನು ಮುಂದಿಟ್ಟು ದೇಶಭಕ್ತಿ ಭಾವನೆ ಕೆರಳಿಸುವುದು, ಕೋಮುದ್ವೇಷ ಸೃಷ್ಟಿಸುವುದು ಮತ್ತು ರಾಜಕೀಯ ಪ್ರಚಾರ ನಡೆಸುವುದು ಇಂತಹ ಪೋಸ್ಟ್‌ಗಳ ಮುಖ್ಯ ಉದ್ದೇಶವಾಗಿರುತ್ತದೆ. ಸುರೇಶ್ ಕುಮಾರ್ ಅವರು ಇಂತಹ ದ್ವೇಷವನ್ನು ಹಬ್ಬಿಸಲು ಈ ಪೋಸ್ಟ್ ಹಾಕಿದ್ದಾರೆಯೇ? ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣದಲ್ಲಿ ಚರ್ಚಿಸುತ್ತಿದ್ದಾರೆ.

ಪರಿಶೀಲನೆ ಇಲ್ಲದ ಮಾಹಿತಿಯನ್ನು ಮಾಜಿ ಸಚಿವರಂತಹ ಸಾರ್ವಜನಿಕ ವ್ಯಕ್ತಿಗಳು ಹಂಚಿಕೊಳ್ಳುವುದು ಇನ್ನಷ್ಟು ಗೊಂದಲ ಮತ್ತು ದ್ವೇಷಕ್ಕೆ ಕಾರಣವಾಗಬಹುದು ಎಂಬ ಟೀಕೆಗಳು ಕೂಡ ವ್ಯಕ್ತವಾಗಿವೆ.

ಈ ಹಿನ್ನೆಲೆಯಲ್ಲಿ ವೈರಲ್ ಆಗಿರುವ “49% ಪಾಕಿಸ್ತಾನ ಫಾಲೋವರ್ಸ್” ಪೋಸ್ಟ್ ಸುಳ್ಳು ಮಾಹಿತಿಯಿಂದ ಕೂಡಿದೆ ಎಂಬುದು ಸಾರ್ವಜನಿಕರ ವಾದವಾಗಿದೆ.

ಇದನ್ನೂ ನೋಡಿ : ಯುವಜನರನ್ನು “ಕಾಕ್ರೋಚ್” ಎಂದವರ ವಿರುದ್ಧ ಡಿಜಿಟಲ್‌ ಚಳವಳಿ! – ಕಾಕ್ರೋಚ್ ಜನತಾ ಪಾರ್ಟಿ Janashakthi Media

Donate Janashakthi Media

Leave a Reply

Your email address will not be published. Required fields are marked *