ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ನಕಲಿ ವೈದ್ಯರ ಹಾವಳಿ ಹೆಚ್ಚಾಗುತ್ತಿದ್ದು, ಸ್ವಲ್ಪ ಯಾಮಾರಿದ್ರೂ ಪ್ರಾಣಕ್ಕೆ ಕುತ್ತು ತಂದಿಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎನ್ನುವಂತೆ ಘಟನೆಯೊಂದು ಸಾಕ್ಷಿಯಾಗಿದೆ. ಮಾತ್ರೆ ಕೊಟ್ಟು ಸರಿಪಡಿಸಬಹುದಾಗಿದ್ದ ಕಾಯಿಲೆಯನ್ನ ನಕಲಿ ವೈದ್ಯ ಇಂಜೆಕ್ಷನ್, ಮಾತ್ರೆ ಕೊಟ್ಟು ಮಹಿಳೆಯನ್ನ ಶೋಚನಿಯ ಸ್ಥಿತಿಗೆ ತಂದೊಡ್ಡಿದ್ದಾನೆ.
ಬೆಂಗಳೂರಿನ ಹೆಗ್ಗನಹಳ್ಳಿ, ಸಂಜೀವಿನಿ ನಗರದಲ್ಲಿದ್ದ ಸಹನಾ ಪಾಲಿ ಕ್ಲಿನಿಕ್ ನಡೆಸುತ್ತಿದ್ದ ಮಾಲೀಕ ಕುಮಾರಸ್ವಾಮಿ, ನಕಲಿ ವೈದ್ಯ ನಾಗರಾಜ್ನನ್ನು ರಾಜಗೋಪಾಲ್ ನಗರ ಪೊಲೀಸರು ಬಂಧಿಸಿದ್ದಾರೆ. ಕಳೆದ ಸೆಪ್ಟೆಂಬರ್ 25ರಂದು ಜ್ಯೋತಿ ಎಂಬ ಮಹಿಳೆ ಜ್ವರ ಎಂದು ಸಹನಾ ಪಾಲಿ ಕ್ಲಿನಿಕ್ಗೆ ಚಿಕಿತ್ಸೆಗೆ ಹೋಗಿದ್ದರು. ಆಗ ನಕಲಿ ವೈದ್ಯ ನಾಗರಾಜ್ ಮಹಿಳೆಯ ಸೊಂಟಕ್ಕೆ ಇಂಜೆಕ್ಷನ್ ನೀಡಿದ್ದ. ಒಂದೇ ಜಾಗಕ್ಕೆ ಎರಡು ಬಾರಿ ಇಂಜೆಕ್ಷನ್ ಚುಚ್ಚಿದ್ದ. ಆದಾಗಿ ಎರಡು ದಿನಕ್ಕೆ ಇಂಜೆಕ್ಷನ್ ಕೊಟ್ಟ ಜಾಗದಲ್ಲಿ ನೋವು ಶುರುವಾಗಿತ್ತು. ನಂತರ ಇಂಜೆಕ್ಷನ್ ಕೊಟ್ಟ ಜಾಗ ಸಂಪೂರ್ಣ ಕಪ್ಪಾಗಲು ಶುರುವಾಗಿತ್ತು. ಇದರಿಂದ ಆತಂಕಗೊಂಡ ಜ್ಯೋತಿ ನೋವಿದೆ, ಊತವಿದೆ ಎಂದು ಮತ್ತೆ ಕ್ಲಿನಿಕ್ಗೆ ಹೋಗಿದ್ದರು. ಆಗ ಹಚ್ಚಿಕೊಳ್ಳಲು ಕ್ರೀಮ್ ಒಂದನ್ನು ನೀಡಿ ನಕಲಿ ವೈದ್ಯ ನಾಗರಾಜ್ ಕಳಿಸಿದ್ದಾನೆ. ಆದರೆ ಅದು ಕಡಿಮೆಯಾಗದೆ ಇಂಜೆಕ್ಷನ್ ಕೊಟ್ಟಿದ್ದ ಜಾಗದಲ್ಲಿ ಕೀವು ಬರಲು ಶುರುವಾಗಿದೆ. ಈ ಬಗ್ಗೆ ಕೇಳಲು ಆಸ್ಪತ್ರೆಗೆ ಹೋದ್ರೆ ಪರಿಹಾರ ಕೊಡ್ತೇನೆ ಯಾರಿಗೂ ಈ ವಿಚಾರ ತಿಳಿಸಬೇಡಿ ಎಂದು ವೈದ್ಯ ನಾಗರಾಜ್ ಸವಣೂರ ಮಹಿಳೆಗೆ ಮನವಿ ಮಾಡಿದ್ದಾನೆ. ನಂತರ ಬೇರೊಂದು ಆಸ್ಪತ್ರೆಗೆ ಹೋದಾಗ ಶಸ್ತ್ರಚಿಕಿತ್ಸೆಗೆ ಸೂಚಿಸಿದ್ದಾರೆ.
ಇದನ್ನೂ ಓದಿ : ಸೀರೆ ಮರೆಯಲ್ಲಿ ಮಕ್ಕಳಿಗೆ ಶೌಚಾಲಯ! ಶೋಚನೀಯ ಸ್ಥಿತಿಯಲ್ಲಿದೆ ಸರಕಾರಿ ಶಾಲೆ!!
ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡ್ತಿದ್ದ ಜ್ಯೋತಿ, ನಕಲಿ ವೈದ್ಯ ನಾಗರಾಜ್ ನಿರ್ಲಕ್ಷ್ಯಕ್ಕೆ ಯಾತನೆ ಅನುಭವಿಸುತ್ತಿದ್ದಾರೆ. ಸದ್ಯ ಆಪರೇಷನ್ ಮಾಡಿದ್ರು ಕೂಡ ಸಮಸ್ಯೆ ಸರಿಯಾಗಿಲ್ಲ. ವೈದ್ಯ ನಾಗರಾಜ್ ಇಂಜೆಕ್ಷನ್ ಕೊಟ್ಟಿರುವ ಜಾಗದಲ್ಲಿ ಆಪರೇಷನ್ ಮಾಡಿ 8 ಒಲಿಗೆ ಹಾಕಿದ್ರು ಕೂಡ ಇನ್ನು ಕೀವು ತುಂಬಿಕೊಳ್ಳುತ್ತಿರೋದು ಜ್ಯೋತಿ ಆರೋಗ್ಯಕ್ಕೆ ಕುತ್ತುತಂದಿದೆ. ಸದ್ಯ ಆಸ್ಪತ್ರೆ ವೈದ್ಯ ನಾಗರಾಜ್, ಕ್ಲಿನಿಕ್ ಮಾಲೀಕರಾದ ಕುಮಾರ ಸ್ವಾಮಿ ಹಾಗೂ ಡಾ ನಿವೇದಿತಾ ವಿರುದ್ದ ರಾಜಗೋಪಾಲ್ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಎಫ್ಐಆರ್ ದಾಖಲಿಸಿಕೊಂಡು ವೈದ್ಯ ನಾಗರಾಜ್ ನನ್ನ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ನಾಗರಾಜ್ ವೈದ್ಯನೆ ಅಲ್ಲ ಅನ್ನೋದು ಬೆಳಕಿಗೆ ಬಂದಿದೆ. ನಾಗರಾಜ್ ಹಾಗೂ ಮಾಲೀಕ ಕುಮಾರಸ್ವಾಮಿ ಮಾತ ಕ್ಲಿನಿಕ್ ಮತ್ತು ಸಹಾನಾ ಪಾಲಿ ಕ್ಲಿನಿಕ್ ಎಂಬ ಎರಡು ಕ್ಲಿನಿಕ್ಗಳನ್ನು ನಡೆಸುತ್ತಿದ್ದಾರೆ.